newsics.com
ಕನ್ನಡ ಕಿರುತೆರೆಯ ಲೋಕಕ್ಕೆ ನಿಜಕ್ಕೂ ಆಘಾತವಾಗಿದೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಕಿಚ್ಚ ಸುದೀಪ್ ವಿದಾಯ ಘೋಷಿಸಿರೋದು ಯಾರಿಗೂ ನಂಬೋಕೆ ಆಗ್ತಿಲ್ಲ. ಸದ್ಯ ಕಿಚ್ಚ ಸುದೀಪ್ ಈ ತೀರ್ಮಾನಕ್ಕೆ ಕಾರಣಗಳೇನು ಅನ್ನೋ ಬಗ್ಗೆ ಚರ್ಚೆಗಳು ಶುರುವಾಗಿವೆ.
ಬಿಗ್‌ಬಾಸ್ ಸೀಸನ್‌ನಿಂದ ನಿರೂಪಣೆಗೆ ಗುಡ್ ಬೈ ಹೇಳಿರೋದಕ್ಕೆ ಕಾರಣಗಳೇನು?
ಅಸಲಿಗೆ ಕಿಚ್ಚ ಸುದೀಪ್‌ಗೆ ಬಿಗ್ ಬಾಸ್ ಸೀಸನ್ 11 ಮಾಡಲು ಇಂಟ್ರೆಸ್ಟ್ ಇರಲಿಲ್ಲ. ಬಹಿರಂಗವಾಗಿಯೇ ಕಲರ್ಸ್ ಟೀಮ್‌ಗೆ ಬೇರೋಬ್ಬರನ್ನು ಹುಡುಕಿ ಅಂತ ಹೇಳಿದ್ದರು. ಆದ್ರೆ, ಕಳೆದ ಸೀಸನ್ ನೆಕ್ಟ್ಸ್ ಲೆವೆಲ್ ಹಿಟ್ ಆಗಿದ್ದರಿಂದ ಕಿಚ್ಚನ ಬಿಟ್ಟು ಶೋ ಮಾಡಲು ಚಾನೆಲ್‌ಗೆ ಸುತರಾಂ ಇಷ್ಟವಿರಲಿಲ್ಲ. ಇದು ನಮಗೆ ದೊಡ್ಡ ಪೆಟ್ಟು ಕೊಡಬಹುದು ಅನ್ನೋದು ಅವರಿಗೆ ಗೊತ್ತಿತ್ತು. ಹೀಗಾಗಿ, ಚಾನೆಲ್‌ನ ಮುಖ್ಯಸ್ಥರು, ಕಿಚ್ಚ ಸುದೀಪ್ ಮನೆಗೆ ಹೋಗಿ, ಕನ್‌ವಿನ್ಸ್ ಮಾಡಿ ಒಪ್ಪಿಸಿದ್ದರು.
ಕೋವಿಡ್ ನಂತರ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಹೊಡೆತ ಬಿದ್ದಿರುವುದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಹೀಗಾಗಿ, ಸಿನಿಮಾ ಮೇಲೆ ಹೆಚ್ಚು ಗಮನ ಹರಿಸ್ಬೇಕು ಅನ್ನೋದು ಕಿಚ್ಚನ ಮನದಿಂಗಿತ. ಅವರ ಸಿನಿಮಾ ಅಭಿಮಾನಿಗಳು ಕೂಡ, ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸಿ. ವರ್ಷಕ್ಕೆ ಎರಡು ಸಿನಿಮಾ ರಿಲೀಸ್ ಮಾಡಿ ಅಂತಾ ಕೇಳಿಕೊಳ್ಳುತ್ತಾನೆ ಇದ್ದಾರೆ.
ಬಿಗ್‌ಬಾಸ್‌ನಿಂದ ಮೂರು ತಿಂಗಳು ಬೇರೆ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸೋದು ಕಷ್ಟ ಅಂತಾ ಸ್ವತಃ ಸುದೀಪ್ ಹೇಳಿದ್ದರು. ದೇಶದ ಯಾವ ಮೂಲೆಯಲ್ಲಿಯೇ ಇದ್ದರು ಶುಕ್ರವಾರ ಬೆಂಗಳೂರಿಗೆ ಬರಲೇಬೇಕು. ಹೀಗಾಗಿ, ಇದು ನನಗೆ ಕಷ್ಟವಾಗ್ತಿದೆ ಅಂತ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಿಚ್ಚ ವಿದಾಯದ ನಿರ್ಧಾರ ತೆಗೆದುಕೊಂಡಿರಬಹುದು.
ಕಿಚ್ಚ ಸುದೀಪ್ ಹೊಸತನಕ್ಕೆ ಸದಾ ಹಪಹಪಿಸುವ ನಟ. ಹೀಗಾಗಿ, ಕಳೆದ 11 ವರ್ಷಗಳಿಂದ ಮಾಡಿಕೊಂಡು ಬಂದಿರುವುದರಿಂದ ಏಕಾತಾನತೆ ಆಗಿರಬಹುದೇನೋ. ಅವರಿಗೆ ಇಷ್ಟವಾಗದೇ ಇರುವ ಅಂಶಗಳು ಅವರಿಗೆ ಸಂಕಟ ತಂದಿರಬಹುದೇನೋ ಅನ್ನೋ ಬಗ್ಗೆಯೂ ಚರ್ಚೆಗಳು ನಡೀತಾ ಇದ್ದಾವೆ.
ಕಿಚ್ಚ ಸುದೀಪ್ ಮುಂದಿನ ದಿನಗಳಲ್ಲಿ ದೊಡ್ಡ ವೆಂಚರ್‌ಗೆ ಕೈ ಹಾಕುತ್ತಿದ್ದಾರೆ. ಹೀಗಾಗಿ, ಬಿಗ್‌ಬಾಸ್‌ಗೆ ಗುಡ್‌ಬೈ ಹೇಳಿದ್ದಾರೆ ಅಂತಾ ಮೂಲಗಳು ಹೇಳ್ತಿವೆ.
ಇದೆಲ್ಲಾದರ ನಡುವೆ ಬಿಗ್‌ಬಾಸ್ ಟೀಮ್ ಮತ್ತು ಕಿಚ್ಚ ಸುದೀಪ್ ನಡುವೆ ಅಸಮಾಧಾನ ಹೊಗೆ ಆಡ್ತಿದೆ ಅನ್ನೋ ಮಾಹಿತಿಯೂ ಇಂಡಸ್ಟ್ರಿಯಲ್ಲಿ ಕೇಳಿ ಬರ್ತಿದೆ. ಬಿಗ್‌ಬಾಸ್‌ನ ಹೊಸ ಟೀಮ್‌ಗೂ, ಸುದೀಪ್‌ಗೂ ಹೊಂದಾಣಿಕೆಯಾಗ್ತಿಲ್ಲ. ಹೀಗಾಗಿ ಕಿಚ್ಚ ಸುದೀಪ್, ಮುಂದಿನ ಸೀಸನ್‌ನಿಂದ ನಾನು ಮಾಡೋದಿಲ್ಲ ಅಂತಾ ಘೋಷಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಸದ್ಯ ಸುದೀಪ್‌ರ ಈ ನಿರ್ಧಾರ ಸಾಕಷ್ಟು ಚರ್ಚೆಗೆ ಮುನ್ನುಡಿ ಬರೆದಿದೆ.