newsics.com
‘ಬಿಗ್ ಬಾಸ್ ಕನ್ನಡ 11’ರ ಬಳಿಕ ಕಿಚ್ಚ ಸುದೀಪ್ ನಿರೂಪಣೆ ಮಾಡಲ್ಲ ಅಂತ ವಿದಾಯ ಘೋಷಿಸಿದ್ದಾರೆ. ಸುದೀಪ್ ಈ ನಿರ್ಧಾರ ಇದೀಗ ಅಭಿಮಾನಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ. ಹೀಗಿರುವಾಗ ತಂದೆಯ ನಿರ್ಧಾರದ ಬಗ್ಗೆ ಪುತ್ರಿ ಸಾನ್ವಿ ಸುದೀಪ್ ರಿಯಾಕ್ಷನ್ ಕೊಟ್ಟಿದ್ದಾರೆ. ಬಿಗ್ ಬಾಸ್ ಶೋಗಾಗಿ ನೀವು ಹಾಕಿದ ಶ್ರಮಕ್ಕೆ ಸರಿಸಾಟಿಯೇ ಇಲ್ಲ ಎಂದು ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಪ್ಪ ನಿಮ್ಮ ಬಿಗ್ ಬಾಸ್ ಜರ್ನಿ ಅತ್ಯಂತ ಹೆಮ್ಮೆ ಪಡುವಂತದ್ದು, ಬೇರೆ ಯಾರು ನಿಮ್ಮ ರೀತಿ ಮಾಡಲು ಸಾಧ್ಯವಿಲ್ಲ. ಬಿಗ್ ಬಾಸ್ ವೇದಿಕೆ ಮೇಲೆ ನಿಮ್ಮನ್ನು ನಾವು ನೋಡಲು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ಬಿಗ್ ಬಾಸ್ ಜರ್ನಿಯಲ್ಲಿ ನಿಮ್ಮನ್ನು ನೋಡಿದ್ದು ನನಗೆ ಅತ್ಯಂತ ಸಂತೋಷವನ್ನು ತಂದಿದೆ. ‘ಬಿಗ್ ಬಾಸ್’ ಶೋಗಾಗಿ ನೀವು ಹಾಕಿದ ಶ್ರಮಕ್ಕೆ ಸರಿಸಾಟಿಯೇ ಇಲ್ಲ. ಇಲ್ಲಿವರೆಗೂ ಬಿಗ್ ಬಾಸ್ ಶೋಗೆ ನೀವು ನೀಡಿರುವ ಕೊಡುಗೆಗೆ ನಾನು ಹೆಮ್ಮೆ ಪಡುತ್ತೇನೆ ಎಂದು ಸಾನ್ವಿ ಸುದೀಪ್ ಬರೆದುಕೊಂಡಿದ್ದಾರೆ.
ಸಾನ್ವಿ ಸುದೀಪ್ ಹೇಳಿದ್ದೇನು?
ಅಪ್ಪ ನಿಮ್ಮ ಬಿಗ್ ಬಾಸ್ ಜರ್ನಿ ಅತ್ಯಂತ ಹೆಮ್ಮೆ ಪಡುವಂತದ್ದು. ಬೇರೆ ಯಾರು ನಿಮ್ಮ ರೀತಿ ಮಾಡಲು ಸಾಧ್ಯವಿಲ್ಲ. ಬಿಗ್ ಬಾಸ್ ವೇದಿಕೆ ಮೇಲೆ ನೀವು ಅಮೋಘವಾಗಿ ಕಾಣಿಸಿಕೊಳ್ಳುವುದನ್ನ ತಪ್ಪಿಸಿಕೊಳ್ಳುತ್ತೀರಿ. ಆದರೆ ಬಿಗ್ ಬಾಸ್ ಜರ್ನಿಯಲ್ಲಿ ನಿಮ್ಮನ್ನು ನೋಡಿದ್ದು ನನಗೆ ಅತ್ಯಂತ ಸಂತೋಷವನ್ನು ತಂದಿದೆ. ಬಿಗ್ ಬಾಸ್ ಶೋಗಾಗಿ ನೀವು ಹಾಕಿದ ಶ್ರಮಕ್ಕೆ ಸರಿಸಾಟಿಯೇ ಇಲ್ಲ. ಇಲ್ಲಿವರೆಗೂ ಬಿಗ್ ಬಾಸ್ ಶೋಗೆ ನೀವು ನೀಡಿರುವ ಕೊಡುಗೆಗೆ ನಾನು ಹೆಮ್ಮೆ ಪಡುತ್ತೇನೆ.