newsics.com
ಬಿಗ್ ಬಾಸ್ ಸೀಸನ್ 11ರ ಮನೆಗೆ ಎಮರ್ಜೆನ್ಸಿ ಘೋಷಣೆಯಾಗಿದ್ದು, ಸ್ಪರ್ಧಿಗಳೆಲ್ಲಾ ಕಕ್ಕಾಬಿಕ್ಕಿ ಆಗಿದ್ದಾರೆ. 2 ವಾರ ಕಳೆಯುವುದರೊಳಗೆ ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಬಿಗ್ ಬಾಸ್ ಸೀಸನ್ 11ರ ಹೊಸ ಅಧ್ಯಾಯಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಹೌದು, ಎಮರ್ಜೆನ್ಸಿ ಸೈರನ್ ಆನ್ ಆಗುತ್ತಿದ್ದಂತೆ ಬಿಗ್‍ಬಾಸ್ ಮನೆಗೆ ಮುಸುಕುಧಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿದ್ದ ಸ್ಪರ್ಧಿಗಳು ಕಿರುಚಾಡಿಕೊಂಡು ಫುಲ್ ಗಾಬರಿ ಯಾಗಿದ್ದಾರೆ. ಕ್ರೇನ್ ಇಂದ ಬಂದ ಮುಸುಕುಧಾರಿಗಳು ಇಡೀ ನರಕದ ಮನೆಯನ್ನು ಪೀಸ್, ಪೀಸ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯ ಈ ಟ್ವಿಸ್ಟ್‌ಗೆ ಸ್ಪರ್ಧಿಗಳು ಏನೋ ಪನಿಶ್ ಮೆಂಟ್ ಕಾದಿದೆ ಗುರು ಎಂದು ಅಂದುಕೊಂಡಿದ್ದಾರೆ. ಆಗ ಬಿಗ್ ಬಾಸ್ 11ನೇ ಸೀಸನ್‌ನಲ್ಲಿ ನೀವೆಲ್ಲರೂ 2 ವಾರ ಜೀವಿಸಿದ್ದೀರಿ. ಇಲ್ಲಿನ ಪ್ರತಿ ಕ್ಷಣವನ್ನು ಅನುಭವಿಸಿದ್ದೀರಿ ಎಂದು ಹೊಸ ಅಧ್ಯಾಯಕ್ಕೆ ಹೊಸ ಕಿಚ್ಚು ಹಚ್ಚಿದ್ದಾರೆ.
ನರಕದ ಮನೆಯನ್ನೇ ಒಡೆದು ಹಾಕಿರುವುದರಿಂದ ಬಿಗ್ ಬಾಸ್ ಮನೆಯ ಆಟದ ಶೈಲಿ ಈಗ ಬದಲಾಗಿದೆ.