newsics.com
ರತನ್ ಟಾಟಾ ಎಲ್ಲ ಕ್ಷೇತ್ರದಲ್ಲೂ ಗೆದಿದ್ದಾರೆ. ಆದರೆ, ಸೋಲು ಇವರಿಗೆ ಗೊತ್ತೇ ಇರಲಿಲ್ಲ. ಆದರೆ, ಆ ಒಂದು ಸಿನಿಮಾ ಮಕಾಡೆ ಮಲಗಿತ್ತು. ಆ ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಇದ್ದರು. ಬಿಪಾಷಾ ಬಾಸು ನಟಿಸಿದ್ದರು. ಜಾನ್ ಅಬ್ರಹಾಂ ಕೂಡ ಇದ್ದರು. ಒಳ್ಳೆ ಸ್ಟಾರ್ ಕಾಸ್ಟ್ ಇದ್ರರೂ ಸಿನಿಮಾ ಸೋತು ಹೋಯಿತು.
ಬಾಲಿವುಡ್‌ನ ಏತ್ಬಾರ್ ಚಿತ್ರ 2004, ಜನವರಿ 23 ರಂದು ರಿಲೀಸ್ ಆಗಿತ್ತು. 9 ಕೋಟಿ ಬಜೆಟ್‌ನಲ್ಲಿಯೇ ಈ ಚಿತ್ರ ರೆಡಿ ಆಗಿತ್ತು. ರತನ್ ಟಾಟಾ ಇದಕ್ಕೆ ದುಡ್ಡು ಹಾಕಿದ್ದರು. ಇನ್ನು ಮೂವರು ಸಹ ನಿರ್ಮಾಪಕರು ಕೂಡ ಇದ್ದರು. ವಿಕ್ರಮ್ ಭಟ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. ಆದರೆ, ಈ ಚಿತ್ರಕ್ಕೆ ಹಾಲಿವುಡ್ ಚಿತ್ರವೊಂದರ ಸ್ಪೂರ್ತಿ ಇದೆ. ಆ ಚಿತ್ರ 1996 ರಲ್ಲಿ ರಿಲೀಸ್ ಆಗಿತ್ತು. ಆ ಚಿತ್ರದ ಹೆಸರು ಫಿಯರ್ ಅಂತಲೇ ಇತ್ತು. ಅದೇ ಚಿತ್ರ ಕಥೆಯಿಂದಲೇ ಸ್ಪೂರ್ತಿಯಿಂದಲೇ ವಿಕ್ರಮ್ ಭಟ್ ಈ ಚಿತ್ರವನ್ನ ಮಾಡಿದ್ದರು. ಆದರೆ, ಈ ಸಿನಿಮಾ ಸೋತು ಹೋಯಿತು.
ರತನ್ ಟಾಟಾ ಮೊದಲು ನಿರ್ಮಿಸಿದ ಈ ಚಿತ್ರ ಸೋತು ಹೋಗಿತ್ತು. 9 ಕೋಟಿ ಬಜೆಟ್‌ನಲ್ಲಿಯೇ ಚಿತ್ರ ರೆಡಿ ಆಗಿತ್ತು. ಆದರೆ, ಸಿನಿಮಾ ರಿಲೀಸ್ ಆದ್ಮೇಲೆ ಬಾಕ್ಸ್ ಆಫೀಸ್ ಕಲೆಕ್ಷನ್ ಮಾತ್ರ 8 ಕೋಟಿ ಆಗಿತ್ತು. ಅಲ್ಲಿಗೆ ಸಿನಿಮಾ ಕ್ಷೇತ್ರದಲ್ಲಿ ರತನ್ ಸೋಲು ಕಂಡರು. ಈ ಒಂದು ಚಿತ್ರದ ಸೋಲಿನ ಬಳಿಕ ರತನ್ ಟಾಟಾ ಸಿನಿಮಾ ಕಡೆಗೆ ಮುಖ ಮಾಡಲೇ ಇಲ್ಲ. ನಂತರ ಒಂದೇ ಒಂದು ಚಿತ್ರವನ್ನು ನಿರ್ಮಿಸಲಿಲ್ಲ. ಸಿನಿಮಾಗಳಿಗೆ ದುಡ್ಡು ಹಾಕೋ ಸಾಹಸವನ್ನು ಮಾಡಲಿಲ್ಲ.
ತಮ್ಮ ಆರೋಗ್ಯದ ವದಂತಿಗೆ ಸ್ಪಷ್ಟನೆ ನೀಡಿದ್ದ ರತನ್ ಟಾಟಾ ಕೊನೆಯ X ಪೋಸ್ಟ್ ವೈರಲ್, ಏನಂದಿದ್ರು ಟಾಟಾ?
ನಿನ್ನ ನಷ್ಟ ಸಹಿಸಿಕೊಳ್ಳುವುದು ಕಷ್ಟ; ರತನ್ ಟಾಟಾಗೆ ಮಾಜಿ ಪ್ರೇಯಸಿ ಭಾವನಾತ್ಮಕ ವಿದಾಯ!