newsics.com
ಮೈಸೂರು: ಖುದ್ದು ಸಿಎಂ ಸಿದ್ದರಾಮಯ್ಯರ ಪತ್ನಿಯೇ ಮುಡಾ ಕಚೇರಿಗೆ ಬಂದು ಸೈಟ್ ವಾಪಸ್ ಕೊಡೋದಾಗಿ ಮೊನ್ನೆ ಹೇಳಿದ್ದರು. ಇದಾಗುತ್ತಿದ್ದಂತೆಯೇ ತಕ್ಷಣವೇ ಸಿಎಂ ಪತ್ನಿಯ ಹೆಸರಿನಲ್ಲಿದ್ದ ಸೈಟ್ ಗಳು ಮುಡಾ ಪಾಲಾಗಿವೆ.
ಇಂದು ಮುಡಾಗೆ 14 ನಿವೇಶನ ಹಿಂದಿರುಗಿಸುವ ಪ್ರಕ್ರಿಯೆ ಪೂರ್ಣವಾಗಿದೆ. ಮೈಸೂರಿನ ಟಿ.ಕೆ.ಲೇಔಟ್ನ ಸಿದ್ದರಾಮಯ್ಯ ನಿವಾಸದಲ್ಲಿ ಅಧಿಕಾರಿಗಳು ಖಾಸಗಿ ನೋಂದಣಿ ಮಾಡಿಕೊಂಡಿದ್ದಾರೆ.
ಮುಡಾಗೆ ನಿವೇಶನ ವಾಪಸ್ ಆದ ದಾಖಲೆ ಲಭ್ಯವಾಗಿದೆ. ಪಾರ್ವತಿಯವರಿಂದ ಪ್ರತಿ ಸೈಟ್ ಗೆ 1,000 ರೂ. ಅಂದರೆ 14 ನಿವೇಶನಕ್ಕೆ ಒಟ್ಟು 14 ಸಾವಿರ ರೂ. ಪಡೆದು ನಿವೇಶನವನ್ನು ವಾಪಸ್ ಪಡೆಯಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹೆಸರಿಗೆ ಸೈಟ್ ವರ್ಗಾವಣೆ ಮಾಡಲಾಗಿದೆ.