newsics.com
ಮಹಿಳೆಯರೊಬ್ಬರಿಗೆ ಎರಡು ಗರ್ಭಕೋಶ ಇರುವುದು ಪತ್ತೆಯಾಗಿದ್ದು, ಎರಡರಿಂದ ಅವಳಿ ಮಕ್ಕಳ ಜಙವಾಗಿರುವ ಘಟನೆ ಚೀನಾದಲ್ಲಿ ನಡೆದಿದೆ.
ಲೀ ಎರಡು ಗರ್ಭಕೋಶ ಹೊಂದಿದ್ದ ಮಹಿಳೆ ಎಂದು ತಿಳಿದು ಬಂದಿದೆ. ಇನ್ನು ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಎರಡು ಪ್ರತ್ಯೇಕ ಗರ್ಭದಿಂದ ಜನಿಸಿದ್ದು, ಇಬ್ಬರೂ ಆರೋಗ್ಯವಂತರಾಗಿದ್ದಾರೆ ಎನ್ನಲಾಗಿದೆ.
ಜಾಗತಿಕವಾಗಿ ಸುಮಾರು 0.3 ಪ್ರತಿಶತ ಮಹಿಳೆಯರಿಗೆ ಹೀಗೆ ಎರಡು ಗರ್ಭಕೋಶ ಇರುತ್ತದೆ. 10 ಲಕ್ಷದಲ್ಲಿ ಒಬ್ಬರಿಗೆ ಈ ರೀತಿ ಆಗುತ್ತದೆ. ಮಕ್ಕಳು ತಲಾ 3.3 ಕೆಜಿ ಮತ್ತು 2.4 ಕೆಜಿ ತೂಗುತ್ತಿದ್ದಾರೆ. “ನೈಸರ್ಗಿಕ ಗರ್ಭಧಾರಣೆಯ ಮೂಲಕ ಎರಡು ಗರ್ಭಾಶಯಗಳಲ್ಲಿ ಗರ್ಭಿಣಿಯಾಗುವುದು ಬಹಳ ಅಪರೂಪ. 37 ವಾರಗಳ ನಂತರ ಈ ರೀತಿ ಯಶಸ್ವಿ ಜನನ ಆಗುವುದು ಇನ್ನೂ ಅಪರೂಪ ಎಂದು ವೈದ್ಯರು ಹೇಳಿದ್ದಾರೆ.
ಈ ಹಿಂದೆ ಲೀ ಅವರು ಗರ್ಭ ಧರಿಸಿದ್ದರು. ಆದರೆ 27ನೇ ವಾರದಲ್ಲಿ ಗರ್ಭಪಾತವಾಗಿತ್ತು. ಕಳೆದ ಜನವರಿಯಲ್ಲಿ ಮತ್ತೊಮ್ಮೆ ಗರ್ಭ ಧರಿಸಿದ್ದರು. ಗರ್ಭಧಾರಣೆಯನ್ನು ದೃಢಪಡಿಸಿದ ನಂತರ, ಕ್ಸಿಯಾನ್ ಆಸ್ಪತ್ರೆಯ ವೈದ್ಯರು ಒಂಬತ್ತು ತಿಂಗಳು ವಿಶೇಷ ರೀತಿಯಲ್ಲಿ ಆರೈಕೆ ಮಾಡಿದ್ದರು. ಸಿಸೇರಿಯನ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಲಾಗಿದೆ.