newsics.com
ನವದೆಹಲಿ: ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಬಳಸಲಾಗಿದೆ ಅನ್ನೋ ಸಿಎಂ ಚಂದ್ರಬಾಬು ನಾಯ್ದು ಗಂಭೀರ ಆರೋಪದ ಕುರಿತು ಸುಪ್ರೀಂ ಕೋರ್ಟ್ ಖಡಕ್ ಸಂದೇಶ ನೀಡಿದೆ. ಲ್ಯಾಬ್ ವರದಿಯಲ್ಲಿ ಸ್ಪಷ್ಟತೆ ಇಲ್ಲ, ನಿಮ್ಮ ರಾಜಕೀಯದಿಂದ ದೇವರನ್ನು ದೂರವಿಡಿ ಎಂದು ಛೀಮಾರಿ ಹಾಕಿದೆ.
ದೇವರನ್ನು ನಿಮ್ಮ ಕೆಟ್ಟ ರಾಜಕೀಯದಿಂದ ದೂರವಿಡಿ ಎಂದು ಸುಪ್ರೀಂ ಕೋರ್ಟ್ ಖಡಕ್ ಸಂದೇಶ ನೀಡಿದೆ. ಲಡ್ಡು ಕುರಿತು ಜುಲೈ ತಿಂಗಳಲ್ಲಿ ಲ್ಯಾಬ್ ವರದಿ ಬಂದಿದೆ. ಈ ವರದಿಯಲ್ಲಿ ಸ್ಪಷ್ಟತೆ ಇಲ್ಲ. ದೇವಸ್ಥಾನದ ಲಡ್ಡುಪ್ರಸಾದದಲ್ಲಿ ದನದ ಕೊಬ್ಬು, ಮೀನನ ಎಣ್ಣೆ ಬಳಕೆಯಾಗಿದೆ ಅನ್ನೋದಕ್ಕೆ ಸ್ಪಷ್ಟ ಸಾಕ್ಷ್ಯಗಳು ಲಭ್ಯವಿಲ್ಲ. ಜುಲೈ ವರದಿಯನ್ನು ಇದೀಗ ತೋರಿಸಿ ಹೇಳಿಕೆ ನೀಡುತ್ತಿದ್ದೀರಿ, ಇಷ್ಟು ದಿನ ಸುಮ್ಮನಿದ್ದಿದ್ದು ಯಾಕೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಇನ್ನು ಸಾಂವಿದಾನಿಕ ಹುದ್ದೆಯಲ್ಲಿದ್ದು ದೇವರನ್ನು ರಾಜಕೀಯದಿಂದ ದೂರವಿಡಿ ಎಂದು ಕಿವಿ ಮಾತು ಹೇಳಿದೆ. ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರ ತಿರುಪತಿ ಲಡ್ಡು ಪ್ರಸಾದಲ್ಲಿ ಪಾವಿತ್ರ್ಯತೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ. ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಲಾಗಿದೆ ಅನ್ನೋ ಗಂಭೀರ ಆರೋಪವನ್ನು ಸಿಎಂ ಚಂದ್ರಬಾಬು ನಾಯ್ದು ಮಾಡಿದ್ದರು. ಇದು ಕೋಲಾಹಲಕ್ಕೆ ಕಾರಣವಾಗಿತ್ತು