newsics.com
ನವದೆಹಲಿ: ಮಾತನಾಡುವ ಭರದಲ್ಲಿ ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೆ ಎಡವಿ ಎಡವಟ್ಟು ಮಾಡಿಕೊಂಡಿದ್ದಾರೆ.
ಜಮ್ಮುವಿನಲ್ಲಿ ಭಾಷಣ ಮಾಡುವಾಗ ರಾಹುಲ್ ಅವರ ನಾಲಿಗೆ ಜಾರಿದ್ದು, ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಕಾಶ್ಮೀರಿ ಪಂಡಿತರನ್ನು ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ)ದ ನಿರಾಶ್ರಿತರು ಎಂದು ಸಂಬೋಧಿಸಿದ್ದಾರೆ.
ತಮ್ಮ ತಪ್ಪನ್ನು ಅರಿತ ರಾಹುಲ್ ತಕ್ಷಣ ಸರಿಪಡಿಸಿಕೊಂಡರು. “ಪಿಒಕೆಯಿಂದ ಬಂದ ನಿರಾಶ್ರಿತರಿಗೆ ಮನಮೋಹನ್ ಸಿಂಗ್ ನೀಡಿದ ಭರವಸೆಯನ್ನು ನಾವು ಈಡೇರಿಸುತ್ತೇವೆ” ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದರು.
ನಂತರ ಅವರು “ಕ್ಷಮಿಸಿ” ಎಂದು ಹೇಳಿದರಲ್ಲದೆ ಅದನ್ನು “ಕಾಶ್ಮೀರಿ ಪಂಡಿತರಿಗೆ ನೀಡಿದ ಭರವಸೆ” ಎಂದು ಬದಲಾಯಿಸಿದರು.
https://twitter.com/i/status/1838908981323964579
ಮಹಾಲಕ್ಷ್ಮಿಯನ್ನು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದ ಮುಕ್ತಿ ರಂಜನ್ ರಾಯ್ ಆತ್ಮ*ಹತ್ಯೆ