newsics.com
ನವದೆಹಲಿ : ಡೂಮ್ಸ್ ಡೇ ಫಿಶ್ ಎಂದು ಕರೆಯಲ್ಪಡುವ ಅಪರೂಪದ ಸಮುದ್ರ ಪ್ರಾಣಿಯೊಂದು ಆಸ್ಟ್ರೇಲಿಯಾದ ಕರಾವಳಿಯಲ್ಲಿ ಕಾಣಿಸಿಕೊಂಡಿದೆ.
ಆಸ್ಟ್ರೇಲಿಯಾದ ತಿವಿ ದ್ವೀಪದ ಸಮುದ್ರ ಸಾಹಸಿಯಾದ ಕರ್ಟಿಸ್ ಫಿಟರ್‌ಸನ್ ಅವರಿಗೆ ಈ ಒರಾಫಿಶ್ ಕಾಣಲು ಸಿಕ್ಕಿದ್ದು, ಅವರು ಅದನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ಫೋಟೋವನ್ನು ಆಸ್ಟ್ರೇಲಿಯಾ ಟಿವಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ. ಈ ತಿವಿ ದ್ವೀಪವೂ ಆಸ್ಟ್ರೇಲಿಯಾದ ಉತ್ತರದ ಪ್ರದೇಶವಾದ ಡಾರ್ವಿನ್‌ನಿಂದ 80 ಕಿಲೋ ಮೀಟರ್ ದೂರದಲ್ಲಿದೆ.
ಆಸ್ಟ್ರೇಲಿಯಾದ ಮ್ಯೂಸಿಯಂ ಪ್ರಕಾರ ಈ ಒರಾ ಫಿಶ್‌ಗಳು ಉಷ್ಣವಲಯದ ಪ್ರದೇಶಗಳಲ್ಲಿ 20 ಮೀಟರ್‌ನಿಂದ 200 ಮೀಟರ್ ಅಳದಲ್ಲಿ ವಾಸ ಮಾಡುತ್ತವೆ. ಇವುಗಳು ಸುಮಾರು 9 ಮೀಟರ್‌ನಷ್ಟು ಉದ್ದ ಬೆಳೆಯುತ್ತವೆ. ಆದರೆ ಮೇಲ್ಮೈನಿಂದ ನೋಡಿದಾಗ ಹಾವುಗಳಂತೆ ಕಾಣಿಸುತ್ತವೆ.
ಅಮೆರಿಕಾದ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಇದು ಕೇವಲ 12 ಫೀಟ್ ಎಂದರೆ 3.7 ಮೀಟರ್ ಉದ್ದವನ್ನು ಹೊಂದಿತ್ತು. ಇದನ್ನು ಇಂದಿಗೂ ಆಕರ್ಷಕ ಅನ್ವೇಷಣೆ ಎಂದೇ ಪರಿಗಣಿಸಲಾಗುತ್ತದೆ. ಡೂಮ್ಸ್ ಡೇ ಫಿಶ್ ಎಂದೇ ಕರೆಯಲ್ಪಡುವ ಈ ಒರ ಫಿಶ್ ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡ ಎರಡು ದಿನಗಳ ನಂತರ ಲಾಸ್ ಏಂಜಲೀಸ್‌ನಲ್ಲಿ ಭೂಕಂಪನ ಸಂಭವಿಸಿತ್ತು. ಆದರೆ ಸಮುದ್ರದಾಳದಲ್ಲಿ ವಾಸ ಮಾಡುವುದರಿಂದ ಅವುಗಳು ಕಾಣಲು ಸಿಗುವುದು ಅತಿ ಅಪರೂಪ.