newsics.com
ಮುಂಬೈ : ಬಾಲಿವುಡ್ ನಟ ಅರ್ಜುನ್ ಕಪೂರ್ ಇದೀಗ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದಾರೆ.
ಕೋಟಿ ಕೋಟಿ ರೂಪಾಯಿ ಐಷಾರಾಮಿ ವಾಹನದ ನಡುವೆ ಈ ಸ್ಕೂಟರ್ ಖರೀದಿಗೆ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.
BGauss RUV 350 ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಅರ್ಜುನ್ ಕಪೂರ್ ಪಾಪರಾಜಿಗಳ ಜೊತೆ ಸಂಭ್ರಮಿಸಿದ್ದಾರೆ. ಅರ್ಜನ್ ಕಪೂರ್ ಸ್ಕೂಟರ್ ಹಾಗೂ ನಟನ ಫೋಟೋ ತೆಗೆಯುತ್ತಿದ್ದ ಪಾಪ್ಸ್‌ಗೆ ಸಿಹಿ ಹಂಚಿದ್ದಾರೆ. ಸ್ವೀಟ್ ಬಾಕ್ಸ್ ಹಿಡಿದು ಆಗಮಿಸಿದ ಅರ್ಜುನ್ ಕಪೂರ್ ಹೊಸ ವಾಹನ ಖರೀದಿಸಿದ ಸಂಭ್ರಮ ಹಂಚಿಕೊಂಡಿದ್ದಾರೆ. ಇದೇ ವೇಳೆ ತಮಾಷೆಯಾಗಿ, ನಾನು ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಒಂದು ಕಾರಣವಿದೆ. ಈ ಪಾಪರಾಜಿಗಳಿಂದ ತಪ್ಪಿಸಿಕೊಳ್ಳಲು, ಸಣ್ಣ ಜಾಗದಲ್ಲಿ ತೂರಿ ಹೋಗಲು ಈ ಸ್ಕೂಟರ್ ಖರೀದಿಸಿರುವುದಾಗಿ ಹೇಳಿದ್ದಾರೆ. ಪಾಪರಾಜಿಗಳ ಬೇಡಿಕೆಯಂತೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ರೈಡ್ ಮಾಡಿದ್ದಾರೆ.