newsics.com
ನವದೆಹಲಿ : ಮದುವೆಯಲ್ಲಿ ವಧು ತನ್ನ ಡ್ರೆಸ್ ಸರಿ ಮಾಡಿಕೊಳ್ಳುತ್ತಿದ್ದರೂ ಆತಿಥಿಗಳು ಮಾತ್ರ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ವಧು ಹಾಗಲ್ಲ ಅಡಿಯಿಂದ ಮುಡಿಯವರೆಗೂ ಏನು ಧರಿಸಬೇಕು ಎಂಬುದರ ಬಗ್ಗೆ ಪ್ರತಿ ಧಿರಿಸಿಗೂ ಪ್ರಾಮುಖ್ಯತೆ ಕೊಡುತ್ತಾರೆ. ಭಾರತದಲ್ಲಿ ಗ್ರ್ಯಾಂಡ್ ಸೀರೆ ಅಥವಾ ಲೆಹೆಂಗಾ ಜೊತೆ ಅದ್ಧೂರಿ ಆಭರಣಗಳನ್ನು ಧರಿಸುತ್ತಾರೆ. ವಿದೇಶಗಳಲ್ಲಿ ಸಾಮಾನ್ಯವಾಗಿ ವಧು ವೈಟ್ ಗೌನ್ ಧರಿಸುತ್ತಾರೆ. ಇಂದು ಗೌನ್‌ಗಳಲ್ಲಿಯೂ ನೂರಾರು ವೆರೈಟಿ ಡಿಸೈನ್ ಸಿಗುತ್ತವೆ.
ಮದುವೆಗೆ ಎಷ್ಟೇ ತಯಾರಿ ಮಾಡಿಕೊಂಡರೂ ಕೊನೆ ಕ್ಷಣದಲ್ಲಿ ಏನಾದ್ರೂ ಎಡವಟ್ಟು ಆಗಿರುತ್ತದೆ. ಖರೀದಿಸುವಾಗ ಚೆಂದ ಕಂಡ ಡ್ರೆಸ್ ಧರಿಸಿದಾಗ ಯಾಕಾದ್ರೂ ಇದನ್ನು ತೆಗೆದುಕೊಂಡ ಎಂಬ ಭಾವನೆ ಬರುತ್ತದೆ. ಇದೀಗ ಇಂತಹುವುದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಮದುವೆಯ ಆಕರ್ಷಣೆ ಕೇಂದ್ರ ಬಿಂದು ವಧು ತನ್ನ ಡ್ರೆಸ್‌ನಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ.
https://www.instagram.com/reel/C_EHOrLSbol/?igsh=ejd4dWNrcjJteHhl