newsics.com
ನವದೆಹಲಿ : ಒಂದು ಫೋಟೋ ಬಡ ಕುಟುಂಬದ ಬದುಕನ್ನೇ ಬದಲಿಸಿದೆ. ಬ್ರೆಡ್ ತರಲು ಅಂಗಡಿಗೆ ಹೋದ ಬಾಲಕಿಯ ರೋಚಕ ಕಥೆ ಇಲ್ಲಿದೆ
ಬ್ರೆಡ್ ತರಲು ಮಗಳನ್ನು ಅಮ್ಮ ಅಂಗಡಿಗೆ ಕಳಿಸಿದ್ದಳು ಅಷ್ಟೇ. ವಾಪಸಾಗುವ ಹೊತ್ತಿಗೆ ಈಕೆ ಫೋಟೋಗ್ರಾಫರ್ ಒಬ್ಬರ ಕಣ್ಣಿಗೆ ಬಿದ್ದಿದ್ದಾಳೆ. ಕೈಯಲ್ಲಿ ಬ್ರೆಡ್, ಮೊಗದಲ್ಲಿ ಮುಗ್ಧ ನಗು, ಆ ಮಗುವಿನ ನಗುವಿಗೆ ಮನಸೋತ ಛಾಯಾಚಿತ್ರಕಾರ ಮಗುವಿನ ಫೋಟೋ ಕ್ಲಿಕ್ ಮಾಡಿದ್ದಾನೆ. ಅದನ್ನು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾನೆ.
ಈ ಫೋಟೋ ಅದ್ಯಾವ ಪರಿಯಲ್ಲಿ ವೈರಲ್ ಆಯಿತು ಎಂದರೆ, ಇದನ್ನು ನೋಡಿದ ಜನರು ಆ ಬ್ರೆಡ್ ಕಂಪೆನಿಗೆ ಪತ್ರ ಬರೆದು ಈಕೆಯನ್ನು ನಿಮ್ಮ ಕಂಪೆನಿಗೆ ರಾಯಭಾರಿ ಮಾಡಿ ಎಂದು ಕೇಳಿಕೊಂಡರಂತೆ. ಜನರ ಒತ್ತಾಸೆ ಹಾಗೂ ಮಗುವಿನ ಮುಗ್ಧತೆಗೆ ಮನಸೋತ ಕಂಪೆನಿ ಆಕೆಯನ್ನು ಬ್ರಾಂಡ್ ಅಂಬಾಸಿಡರ್ ಮಾಡಿ ನೇಮಕ ಮಾಡಿದೆ ಎನ್ನಲಾಗಿದೆ.
ಅಷ್ಟೇ ಅಲ್ಲ, ಈ ಬಾಲಕಿಯ ಫೋಟೋ ಈಗ ದಕ್ಷಿಣ ಆಫ್ರಿಕಾದಾದ್ಯಂತ ಬ್ರೆಡ್ ಜಾಹೀರಾತು ಫಲಕಗಳಲ್ಲಿದೆ. ಸೂರನ್ನೇ ಕಾಣದ ಈ ಕುಟುಂಬಕ್ಕೆ ಇದೇ ಬ್ರೆಡ್ ಕಂಪೆನಿ ಎರಡು ಕೋಣೆಗಳ ಮನೆ ಕಟ್ಟಿಸಿಕೊಟ್ಟಿದೆ. ಪದವಿಯವರೆಗಿನ ಹುಡುಗಿಯ ಶಿಕ್ಷಣದ ವೆಚ್ಚವನ್ನು ತಾನೇ ಭರಿಸಲಿರುವುದಾಗಿ ಕಂಪೆನಿ ಹೇಳಿದೆ. ಹೀಗೆ ಆಗತ್ತೆ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ ಅಲ್ವಾ? ಅಂದಹಾಗೆ ಈ ಫೋಟೋ ಕ್ಲಿಕ್ ಮಾಡಿದ್ದು, ಶ್ವಾನೆ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಉದಯೋನ್ಮುಖ ವಾಣಿಜ್ಯ ಫೋಟೋಗ್ರಾಫರ್ ಲುಂಗಿಸಾನಿ ಮ್ಜಾಜಿ. (ಮೇಲಿರುವ ಫೋಟೋದಲ್ಲಿ ಇರುವ ಚಿತ್ರ)