newsics.com
ಬೆಂಗಳೂರು: ರೈಲಿಗೂ ಇದೀಗ ಬೆಂಗಳೂರು ಟ್ರಾಫಿಕ್ ಬಿಸಿ ತಟ್ಟಿದ್ದು, ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸುಧೀರ್ ಚಕ್ರವರ್ತಿ ಎನ್ನುವ ಇನ್‌ಸ್ಟಾಗ್ರಾಮ್ ಬಳಕೆದಾರರು, ರೈಲ್ವೆ ಕ್ರಾಸಿಂಗ್ ಮೇಲೆ ವಾಹನಗಳು ಸಾಲಾಗಿ ನಿಂತ ಪರಿಣಾಮ ರೈಲು ಕೂಡ ಟ್ರಾಫಿಕ್‌ನಲ್ಲಿ ಸಿಲುಕಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಟ್ರಾಫಿಕ್‌ನಿಂದ ರೈಲಿಗೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದು, ಈ ವಿಡಿಯೋ ಭಾರಿ ವೈರಲ್ ಆಗಿದೆ.
ಬೆಂಗಳೂರಿನ ಮುನ್ನೇಕೊಳಾಲದ ರೈಲ್ವೆ ಕ್ರಾಸಿಂಗ್ ಬಳಿ ಹೆಚ್ಚಿನ ಟ್ರಾಫಿಕ್ ಉಂಟಾದ್ದರಿಂದ ಈ ಘಟನೆ ನಡೆದಿದೆ.
ರೈಲ್ವೆ ಕ್ರಾಸಿಂಗ್ ಮುಚ್ಚದ ಕಾರಣ, ವಾಹನಗಳು ರೈಲ್ವೆ ಹಳಿ ಮೇಲೆ ನಿಂತುಕೊಂಡಿದ್ದವು, ಆ ಸಮಯದಲ್ಲಿ ಅಲ್ಲಿಗೆ ಬಂದ ರೈಲು ಕೂಡ ಅನಿವಾರ್ಯವಾಗಿ ವಾಹನಗಳು ಮುಂದೆ ಸಾಗುವವರೆಗೂ ನಿಲ್ಲಬೇಕಾಯಿತು.
ಕೆಲ ಸಮಯದ ನಂತರ ವಾಹನಗಳು ರೈಲ್ವೆ ಕ್ರಾಸಿಂಗ್‌ನಿಂದ ತೆರವಾದ ಮೇಲೆ ರೈಲು ಮುಂದೆ ಸಾಗಿದೆ.
ಸುಧೀರ್ ಚಕ್ರವರ್ತಿ ಹಂಚಿಕೊಂಡಿರುವ ವಿಡಿಯೋ ಒಂದೇ ದಿನದಲ್ಲಿ 1 ಮಿಲಿಯನ್‌ಗೂ ಹೆಚ್ಚಿನ ವೀಕ್ಷಣೆ ಕಂಡಿದ್ದು, 60 ಸಾವಿರ ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. ಇದಕ್ಕೆ ತರಹೇವಾರಿ ಕಾಮೆಂಟ್‌ಗಳು ಬಂದಿವ.
ಮುನ್ನೇಕೊಳಾಲ ರೈಲ್ವೆ ಕ್ರಾಸಿಂಗ್ ಪ್ರದೇಶದಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಬಳಕೆದಾರರು ಆಗ್ರಹಿಸಿದ್ದಾರೆ.
https://www.instagram.com/reel/DATsgsqIGWQ/?igsh=MTloMTI1YmY0dDQw
ಸಿಎಂ ಸಿದ್ದರಾಮಯ್ಯಗೆ ಮತ್ತೆ ಹಿನ್ನಡೆ, ಮುಡಾ ಹಗರಣ ತನಿಖೆಗೆ ಆದೇಶಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್