newsics.com
ಬೆಂಗಳೂರು: ಮಹಾಲಕ್ಷ್ಮೀ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತೊಂದು ಅನುಮಾನ ಮೂಡಿದೆ.
ಹೌದು, ಈ ಕೊಲೆ ಪರಿಶೀಲನೆ ನಡೆಸಿದ ಪೊಲೀಸರಿಗೆ ಇದು ಒಬ್ಬನಿಂದ ಕೊಲೆಯಾಗಿಲ್ಲ ಎಂದು ಡೌಟ್ ಬಂದಿದೆ..ಅಲ್ಲದೇ, ಕೊಲೆಯಾದ ಜಾಗದಲ್ಲಿ ಮಲ್ಟಿಪಲ್ ಫಿಂಗರ್ ಪ್ರಿಂಟ್ಸ್ ದೊರಕಿವೆ ಎಂದು ಹೇಳಲಾಗುತ್ತಿದೆ.
ಇನ್ನು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹಾಲಕ್ಷ್ಮಿ ದೇಹವನ್ನ ತುಂಡು ತುಂಡಾಗಿ ಕತ್ತರಿಸಿದ್ದ ವೆಪನ್ ಕೂಡ ಸಿಕ್ಕಿಲ್ಲ. ಯಾವ ಮಾರಕಾಸ್ತ್ರದಿಂದ ಕತ್ತರಿಸಲಾಗಿದೆ ಎಂಬ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದು, ಇದಕ್ಕಾಗಿ ಮರಣೋತ್ತರ ಪರೀಕ್ಷೆ ಹಾಗೂ ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದಾರೆ . ಯಾಕಂದ್ರೆ ಮರಣೋತ್ತರ ಪರೀಕ್ಷೆಯಲ್ಲಿ ಯಾವ ವೆಪನ್ ಬಳಸಿ ದೇಹ ಕತ್ತರಿಸಲಾಗಿದೆ ಅನ್ನೋದು ತಿಳಿಯಲಿದೆ.
ಈ ನಡುವೆ ಮಹಾಲಕ್ಷ್ಮಿ ಕುಟುಂಬಸ್ಥರ ಮೇಲೆಯೇ ಹಲವು ಅನುಮಾನಗಳು ಮೂಡುತ್ತಿವೆ. ಮಹಾಲಕ್ಷ್ಮಿ ಪತಿ ಹೇಮಂತ್ ದಾಸ್ ಹಾಗೂ ಸಹೋದರರ ಮೇಲೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ಕೆಲ ವರ್ಷಗಳಿಂದಲೂ ಹೇಮಂತ್ ದಾಸ್ ಹಾಗೂ ಮಹಾಲಕ್ಷ್ಮಿ ನಡುವೆ ಸಂಬಂಧ ಸರಿಯಿರಲಿಲ್ಲವಂತೆ. ಜೊತೆಗೆ ಹಣಕಾಸಿನ ವಿಚಾರಕ್ಕೆ ಸಹೋದರರ ಜೊತೆಗೂ ಮಹಾಲಕ್ಷ್ಮಿ ಜಗಳವಾಡಿಕೊಂಡಿದ್ಲು ಎನ್ನಲಾಗಿದೆ.