newsics.com
ಚೆನ್ನೈ: ವೈದ್ಯಕೀಯ ಸಮ್ಮೇಳನದಲ್ಲಿ ಇಂತಹ ಕಾರ್ಯಕ್ರಮ ಸರಿಯೇ ಅಥವಾ ತಪ್ಪೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ಕೊಲೊನ್ & ರೆಕ್ಟಲ್ ಸರ್ಜನ್‌ಗಳ ಅಸೋಸಿಯೇಷನ್‌ನ 47ನೇ ವರ್ಷದ ವಾರ್ಷಿಕ ಸಮಾವೇಶದಲ್ಲಿ ಮಹಿಳಾ ಡಾನ್ಸರ್ ಒಬ್ಬರು ಅಸಭ್ಯವಾಗಿ ಬಟ್ಟೆ ತೊಟ್ಟು ನರ್ತನ ಮಾಡಿದ್ದಾರೆ. ಸ್ಟೇಜ್‌ನಿಂದ ಕೆಳಗೆ ಕ್ಯಾಬರೆ ಡಾನ್ಸರ್ ರೀತಿ ಸಣ್ಣಬಟ್ಟೆ ತೊಟ್ಟು ಡಾನ್ಸರ್ ಒಬ್ಬಳು ವಿಕ್ರಾಂತ್ ರೋಣ ಸಿನಿಮಾದ ಐಟಂ ಹಾಡು ರಾ ರಾ ರಕ್ಕಮ್ಮಗೆ ಎರ್ರಾಬಿರ್ರಿ ಮೈ ಬಳುಕಿಸಿದ್ದಾರೆ.
ಆಕೆ ಬರೀ ಡಾನ್ಸ್ ಮಾಡಿದ್ದು ಮಾತ್ರವಲ್ಲದೇ ಅಲ್ಲಿ ಕೈಯಲ್ಲಿ ಮದ್ಯ ಹಿಡಿದುಕೊಂಡಿದ್ದ ಕೆಲ ಪುರುಷರ ಎದುರು ಕುಣಿದ ಆಕೆ ಬಳಿಕ ಅಲ್ಲಿದ್ದ ಪುರುಷರೊಬ್ಬರನ್ನು ತನ್ನತ್ತ ಎಳೆದುಕೊಂಡು ಅವರು ಹೆಜ್ಜೆ ಹಾಕುವಂತೆ ಡಾನ್ಸ್ ಮಾಡಿದ್ದಾಳೆ. ಆದರೆ ಮೆಡಿಕಲ್ ಕಾನ್ಫರೆನ್ಸ್‌ನಲ್ಲಿ ಈ ರೀತಿ ಅಸಭ್ಯ ನೃತ್ಯ ಮಾಡಿರುವುದಕ್ಕೆ ಒಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೋ ನೋಡಿದ ಟ್ವಿಟ್ಟರ್ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಅಸಭ್ಯತೆ ಎಂದರೆ ಮತ್ತೆ ಕೆಲವರು ಇದನ್ನು ತಮಾಷೆಯಾಗಿ ಪರಿಗಣಿಸಿದ್ದಾರೆ,
https://twitter.com/ginger_bread_s/status/1838198013912604718