newsics.com
ಗದಗ : ಹಾನಗಲ್ಲ ಕುಮಾರಸ್ವಾಮಿಗಳ ಜಯಂತಿ ಅಂಗವಾಗಿ ಕಳೆದ 10 ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅದ್ರಲ್ಲಿ ವ್ಯಸನಮುಕ್ತ ಸಮಾಜಕ್ಕಾಗಿ ಸ್ವಾಮಿಗಳಿಂದ ಜೋಳಿಗೆ ಅಭಿಯಾನ ಕೈಗೊಂಡಿದ್ದು ಗಮನ ಸೆಳೆಯಿತು.
‘ಸದ್ಗುಣಗಳ ದೀಕ್ಷೆ. ದುಶ್ಚಟಗಳ ಭಿಕ್ಷೆ’ ಹೆಸರಲ್ಲಿ ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಯಾತ್ರೆ ನಡೆಸಲಾಯ್ತು. ಪಟ್ಟಣದ ಪ್ರಮುಖ ಬಡಾವಣೆಯಲ್ಲಿ ಸಂಚರಿಸಿ ಸ್ವಾಮಿಗಳು ಜೋಳಿಗೆ ಒಡ್ಡಿ ದುಶ್ಚಟಗಳನ್ನ ತೆಜಿಸುವಂತೆ ಕೇಳಿಕೊಂಡ್ರು.. ಸ್ವಾಮಿಗಳ ಅಭಿಯಾನಕ್ಕೆ ಸ್ಪಂದಿಸಿದ ಕೆಲವರು ಗುಟ್ಕಾ, ತಂಬಾಕು ಚೀಟಿಗಳನ್ನ ಜೋಳಿಗೆಗೆ ಹಾಕಿ ದುಶ್ಚಟ ಬಿಡುವ ಸಂಕಲ್ಪ ಮಾಡಿದ್ರು. ಭಕ್ತರಿಗೆ ರುದ್ರಾಕ್ಷಿ ನೀಡುವ ಮೂಲಕ ಸ್ವಾಮಿಗಳು ವ್ಯಸನ ಮುಕ್ತ ಜೀವನಕ್ಕೆ ಶುಭಕೋರಿದ್ರು.
ಕಾರಣಿಕ ಯುಗಪುರುಷ ಹಾನಗಲ್ಲ ಗುರು ಕುಮಾರ ಮಹಾಸ್ವಾಮಿಗಳ 157 ನೇ ಜಯಂತ್ಯೋತ್ಸವ ಅಂಗವಾಡಿ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದ ಜೋಳಿಗೆ ಅಭಿಮಾನ ಗಮನ ಸೆಳೆಯಿತು.