newsics.com
ಬೆಂಗಳೂರು : ‘ಬಿಗ್ ಬಾಸ್ ಸೀಸನ್ 11’ರ ಈ ಸೀಸನ್ ನಿರೂಪಣೆ ಮಾಡೋದು ಬೇಡ ಅಂತ ಯೋಚನೆ ಮಾಡಿದ್ದು ನಿಜ ಎಂದು ನಟ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಕಳೆದ 10 ವರ್ಷಗಳಿಂದ `ಬಿಗ್ ಬಾಸ್’ ಶೋ ನಿರೂಪಣೆ ಮಾಡುತ್ತಲೇ ಬಂದಿದ್ದೇನೆ. ಈ ಬಾರಿ ಬೇರೆಯವರು ನಿರೂಪಣೆ ಮಾಡಲಿ ಎಂದೇ ನಿರ್ಧರಿಸಿದ್ದೆ, ಹಾಗಂತ ವಾಹಿನಿಯ ಜೊತೆ ಒಡನಾಟ ಚೆನ್ನಾಗಿರಲಿಲ್ಲ ಅಂತ ಅಲ್ಲ. ತಂಡ ನನ್ನನ್ನು ತಂಬಾ ಚೆನ್ನಾಗಿ ನೋಡಿಕೊಂಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಗ್ ಬಾಸ್ ಶುರು ಆಗ್ತಿದ್ದಂತೆ ನನ್ನ ಲೈಫ್ ಮ್ಯೂಟ್ ಆಗುತ್ತದೆ. 4 ದಿನ ಹೊರಗೆ ಹೋಗಬಹುದು ಅಷ್ಟೇ, ಮತ್ತೆ ಶುಕ್ರವಾರ ಬರಬೇಕಾಗುತ್ತದೆ. ಹಾಗಾಗಿ 10 ವರ್ಷ ಆಯ್ತು ಬೇರೆಯವರು ಮಾಡಲಿ ಅಂತ ಇತ್ತು. ಎಲ್ಲರೂ ನನ್ನ ಒಪ್ಪಿಸೋಕೆ ವಾಹಿನಿ ತಂಡ ಮನೆಗೆ ಬಂದಿತ್ತು. ಬಿಗ್ ಬಾಸ್ ಅನ್ನೋದು ಬ್ಯೂಟಿಫುಲ್ ವೇದಿಕೆ, ಹಾಗಾಗಿ ಆ ನಂತರ ನಿರೂಪಣೆ ಮಾಡಲು ಒಪ್ಪಿಕೊಂಡಿರೋದಾಗಿ ತಿಳಿಸಿದರು.