newsics.com
ನವದೆಹಲಿ : ಹಾವು ಕಚ್ಚಿ ಯುವಕ ಸಾವನ್ನಪ್ಪಿದ ನಂತರ, ಅಂತ್ಯಕ್ರಿಯೆಯ ವೇಳೆ ಗ್ರಾಮಸ್ಥರು ಹಾವನ್ನು ಸಹ ಚಿತೆಗೆ ಹಾಕಿ ಸುಟ್ಟ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.
ದಿಗೇಶ್ವರ ರಾಥಿಯಾ ಎಂಬ 22 ವರ್ಷದ ಯುವಕನಿಗೆ ಶನಿವಾರ ರಾತ್ರಿ ಕಚ್ಚಿದೆ. ಕೋರ್ಬಾ ಜಿಲ್ಲೆಯ ಬೈಗಮರ್‌ನಲ್ಲಿರುವ ಮನೆಯಲ್ಲಿ ಮಲಗುವುದಕ್ಕಾಗಿ ತನ್ನ ಹಾಸಿಗೆಯನ್ನು ಸಿದ್ಧಪಡಿಸುತ್ತಿದ್ದಾಗ ಹಾವೊಂದು ಬಂದು ಈತನಿಗೆ ಕಚ್ಚಿದೆ. ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಭಾನುವಾರ ಮುಂಜಾನೆ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ದಿಗೇಶ್ವರ್ ರಾಥಿಯಾನ ಅಂತ್ಯಸಂಸ್ಕಾರ ನಡೆಸಲು ಮನೆಯತ್ತ ಶವವನ್ನು ತರುತ್ತಿದ್ದರೆ, ಇತ್ತ ಗ್ರಾಮಸ್ಥರು ಶವಸಂಸ್ಕಾರ ನಡೆಸುತ್ತಿದ್ದ ಸ್ಥಳಕ್ಕೆ ಹಾವನ್ನು ಕೂಡ ಕೋಲಿನಲ್ಲಿ ಕಟ್ಟಿ ಎಳೆದುಕೊಂಡು ಬಂದಿದ್ದಾರೆ. ನಂತರ ದಿಗೇಶ್ವರನನ್ನು ಚಿತೆಗೆ ಏರಿಸಿ ಬೆಂಕಿಯಿಡುತ್ತಿದ್ದಂತೆ ಇತ್ತ ಜೀವಂತ ಹಾವನ್ನು ಕೂಡ ಆತನ ಚಿತೆಗೆ ಹಾಕಿ ಜೀವಂತವಾಗಿ ಸುಟ್ಟಿದ್ದಾರೆ. ಆ ಹಾವು ಗ್ರಾಮದ ಇತರರಿಗೂ ಕಚ್ಚುವ ಭಯವಿತ್ತು. ಹಾಗಾಗಿ ಹಾವನ್ನು ಸುಟ್ಟಿದ್ದಾಗಿ ಗ್ರಾಮಸ್ಥರು ಹೇಳಿದ್ದಾರೆ.