newsics.com
ಮುಂಬೈ : ನಟಿ ಶೆಹನಾಜ್ ಗಿಲ್ ಇನ್ಸ್ಟಾಗ್ರಾಂನಲ್ಲಿ ತಮ್ಮ ಸುಂದರ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಹಲ್‌ಚಲ್ ಎಬ್ಬಿಸಿದ್ದಾರೆ.
ಬಿಳಿ ಬಣ್ಣದ ಟ್ಯುಬ್ ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡ ಶೆಹನಾಜ್ ಗಿಲ್ ಅದಕ್ಕೆ ಕೆಂಪು ಬಣ್ಣದ ಮೇಲಂಗಿಯನ್ನು ಅರೆಬರೆಯಾಗಿ ತೊಟ್ಟಿದ್ದಾರೆ. ಅವರ ಈ ಸುಂದರ ಲುಕ್ ಆಕೆಯ ಅಭಿಮಾನಿಗಳು ಹಾಗೋ ಫಾಲೋವರ್ಸ್‌ಗಳನ್ನು ಬೆಚ್ಚಗಾಗಿಸಿದೆ.
ಶೆಹನಾಜ್ ವೃತ್ತಿ ಬದುಕಿನ ಬಗ್ಗೆ ಹೇಳುವುದಾದರೆ ಶೆಹನಾಜ್ ಅವರು 2015ರಲ್ಲಿ ‘ಶಿವ್ ದಿ ಕಿತಾಬ್’ ಎಂಬ ಮ್ಯೂಸಿಕ್ ವೀಡಿಯೋ ಮೂಲಕ ಮಾಡೆಲಿಂಗ್ ಕೆರಿಯರ್ ಆರಂಭಿಸಿದರು. ಕೆಲವು ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿ ಕೊಂಡಿದ್ದಾರೆ. ರಾಜ್‌ಕುಮಾರ್ ರಾವ್ ಹಾಗೂ ತ್ರಿಪ್ತಿ ದಿಮ್ರಿ ಮುಂಬರುವ ಹೆಸರಿಡದ ಕಾಮಿಡಿ ಸಿನಿಮಾದಲ್ಲಿಯೂ ಶೆಹನಾಜ್ ಕಾಣಿಸಿಕೊಳ್ಳಲಿದ್ದಾರೆ.