newsics.com
ನವದೆಹಲಿ: ಯಾರೂ ಮಾಡದ ರೀತಿಯಲ್ಲಿ ತಾವು ಫೋಟೋಶೂಟ್ ಮಾಡಿಸಬೇಕು ಎಂದು ಎಷ್ಟೋ ಭಾವಿ ದಂಪತಿ ಸಾಹಸಮಯ ಕೃತ್ಯಕ್ಕೂ ಕೈಹಾಕುವುದು ಇದೆ. ಫೋಟೋಶೂಟ್ ಮಾಡಿಸಲು ಹೋಗಿ ಎಡವಟ್ಟಾಗಿ ಸಾವನ್ನಪ್ಪಿರುವ ಉದಾಹರಣೆಗಳೂ ಇವೆ.
ಒಂದೇ ಬಾಳೆ ಎಲೆಯನ್ನು ಇಬ್ಬರೂ ಸುತ್ತುಕೊಂಡು ಫೋಟೋಶೂಟ್ ಮಾಡಿಸಿದ್ದಾರೆ. ಇದು ಪ್ರೀ-ವೆಡ್ಡಿಂಗ್ ಫೋಟೋಶೂಟ್ ಎಂಬ ಶೀರ್ಷಿಕೆಯಡಿಯಲ್ಲಿ ವೈರಲ್ ಆಗುತ್ತಿದೆ.
ಇಬ್ಬರೂ ಒಳಗೆ ಯಾವ ಬಟ್ಟೆಗಳನ್ನು ಹಾಕಿಕೊಂಡಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ಬಾಳೆ ಎಲೆ ಸುತ್ತಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಈ ಫೋಟೋಗಳು ಭಾರಿ ಹಲ್ಚಲ್ ಸೃಷ್ಟಿಸುತ್ತಿವೆ
ಈ ಫೋಟೋ ಅಪ್ಲೋಡ್ ಮಾಡಿದ ಒಂದೇ ದಿನಕ್ಕೆ ಐದೂವರೆ ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದು, ಇದನ್ನು ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ತಮಗೆ ಯಾವ ರೀತಿಯ ಫೋಟೋಶೂಟ್ ಬಾಕಿ ಇದೆ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ತಿದ್ದಾರೆ ಹೈಕಳು. ಶೋಯೇಬ್ ಶೇಖ್ ಎನ್ನುವವರು ಫೋಟೋಗಳನ್ನು ಶೇರ್ ಮಾಡಿದ್ದಾರೆ.
