newsics.com
ತಿರುಪತಿ: ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ದೇವಸ್ಥಾನದ ಶುದ್ಧೀಕರಣ ಕಾರ್ಯ ನಡೆಯುತ್ತಿದೆ. ಅಷ್ಟೇ ಅಲ್ಲದೆ, ಶುದ್ಧೀಕರಣ ಹೋಮವನ್ನು ಕೂಡ ಮಾಡಲಾಗಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ತಿರುಮಲದ ಪ್ರಸಿದ್ಧ ವೆಂಕಟೇಶ್ವರ ದೇವಾಲಯದ ಲಡ್ಡುವಿನಲ್ಲಿ ಪ್ರಾಣಿ ಜನ್ಯ ಕೊಂಬಿನಾಂಶ ಬಳಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ದೇವಾಲಯದಲ್ಲಿ ಶಾಂತಿ ಹೋಮ ಮಾಡಲಾಗಿದೆ.
ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೂ ಶಾಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ನಡೆಸಲಾಗಿದೆ. ಮಧ್ಯಾಹ್ನದವರೆಗೂ ಇನ್ನೂ ಹಲವು ಧಾರ್ಮಿಕ ಶುದ್ದೀಕರಣ ಕಾರ್ಯಗಳು ನಡೆಯಲಿದ್ದು, ಹಲವು ಪ್ರಮುಖರು ಭಾಗಿಯಾಗಿರುವುದಾಗಿ TTD ಮೂಲಗಳು ಖಚಿತಪಡಿಸಿವೆ.