newsics.com
ನವದೆಹಲಿ/ ಅಮರಾವತಿ: ತಿರುಪತಿ ಲಡ್ಡುವಿನಲ್ಲಿ ದನ ಹಾಗೂ ಹಂದಿ ಕೊಬ್ಬು ಸೇರಿಸುತ್ತಿದ್ದ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (SIT) ರಚಿಸುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭಾನುವಾರ ಪ್ರಕಟಿಸಿದ್ದಾರೆ.
ಅಲ್ಲದೆ, ರಾಜ್ಯದ ಎಲ್ಲಾ ದೇವಾಲಯಗಳಿಗೆ ಕಚ್ಚಾ ವಸ್ತುಗಳ ಖರೀದಿ ಪ್ರಕ್ರಿಯೆಯ ಲೆಕ್ಕಪರಿಶೋಧನೆಗೆ ಅವರು ಆದೇಶಿಸಿದ್ದಾರೆ.
ನಾವು ಐಜಿಪಿ ಮತ್ತು ಅದಕ್ಕಿಂತ ಉನ್ನತ ಹುದ್ದೆಗಳ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುತ್ತಿದ್ದೇವೆ. ಎಸ್‌ಐಟಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುತ್ತದೆ ಮತ್ತು ಅಂತಹ ವಿಷಯಗಳು ಪುನರಾವರ್ತನೆಯಾಗದಂತೆ ನಾವು ಆ ವರದಿಯ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ರಾತ್ರಿ, ಬೆಳಗ್ಗೆ ಬಾಳೆಹಣ್ಣು ತಿಂದರೆ ಹೀಗೆಲ್ಲ ಆಗತ್ತೆ, ಯಾವ ಸಮಯ ಬೆಸ್ಟ್?
ಚಂದ್ರಯಾನ 3: ಚಂದ್ರನ ದಕ್ಷಿಣ ಧ್ರುವದಲ್ಲಿ ಪ್ರಾಚೀನ ಕುಳಿ ಪತ್ತೆ ಮಾಡಿದ ಪ್ರಗ್ಯಾನ್ ರೋವರ್!