newsics.com
ನವದೆಹಲಿ: ಪಶ್ಚಿಮ ದೆಹಲಿಯಲ್ಲಿ 21 ವರ್ಷದ ಯುವಕನೊಬ್ಬ ತನ್ನ ಸಹೋದ್ಯೋಗಿ ಯುವತಿ ಮಾತು ಬಿಟ್ಟಿದ್ದಕ್ಕೆ ಕುಪಿತಗೊಂಡು ಆಕೆ ಮತ್ತು ಆಕೆಯ ಪೋಷಕರಿಗೆ ಚೂರಿ ಇರಿದು ಗಾಯಗೊಳಿಸಿದ್ದಾನೆ.
ಕೊಲೆ ಆರೋಪಿ ಅಭಿಷೇಕ್‌ನನ್ನು ಖ್ಯಾಲಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ್ ರಘುಬೀರ್ ನಗರ ಪ್ರದೇಶದಲ್ಲಿನ ಯುವತಿಯ ಮನೆಗೆ ಬಂದು ಚೂರಿ ಇರಿದಿದ್ದಾನೆ. ಇಬ್ಬರ ನಡುವೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಯುವತಿಯ ಪೋಷಕರ ಮೇಲೆಯೂ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ರಾಜೌರಿ ಗಾರ್ಡನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಅಭಿಷೇಕ್, ಸಂತ್ರಸ್ತ ಮಹಿಳೆಯೊಂದಿಗೆ ಅಲ್ಲಿನ ಸಲೂನ್‌ನಲ್ಲಿ ಯುವತಿಯೊಂದಿಗೆ ಕೆಲಸ ಮಾಡುತ್ತಿದ್ದ. ಇಬ್ಬರೂ ಆತ್ಮೀಯರಾಗಿದ್ದು, ಇತ್ತೀಚಿನಗೆ ಯುವತಿ ಮಾತುಬಿಟ್ಟಿದ್ದಕ್ಕೆ ಕೋಪಗೊಂಡಿದ್ದ ಎನ್ನಲಾಗಿದೆ.