newsics.com
ಬೆಂಗಳೂರು : ಶಾಸಕ ಮುನಿರತ್ನರನ್ನ ಪೊಲೀಸರು ಜಯದೇವ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಸಂಜೆ ಬೌರಿಂಗ್ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಲಾಗಿತ್ತು. ಕಾರ್ಡಿಯಾಲಜಿಸ್ಟ್‌ಗೆ ತೋರಿಸುವಂತೆ ವೈದ್ಯರು ಸೂಚಿನೆ ಮೇರೆಗೆ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಕಳೆದ 1 ಗಂಟೆಯಿಂದ ಮುನಿರತ್ನಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಸದ್ಯ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ಮುಂದುವರಿದೆ.
ಎರಡು ದಿನದಿಂದ ಪೊಲೀಸ್ ಠಾಣೆಯಲ್ಲಿ ಮುನಿರತ್ನ ವಿಚಾರಣೆ ಮಾಡಲಾಗುತ್ತಿದ್ದು, ಕಳದೆ ಎರಡು ದಿನದಿಂದ ಮಂಕಾಗಿದ್ದಾರೆ. ಬಂಧನದ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.