Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಬಾಹ್ಯಾಕಾಶದಲ್ಲೇ ಇರಲು ಬಯಸುವೆ,‌ ಇದೇ ನನ್ನ ಸಂತೋಷದ ಸ್ಥಳ ಎಂದ ಸುನಿತಾ ವಿಲಿಯಮ್ಸ್
ಪ್ರಮುಖವಿದೇಶ

ಬಾಹ್ಯಾಕಾಶದಲ್ಲೇ ಇರಲು ಬಯಸುವೆ,‌ ಇದೇ ನನ್ನ ಸಂತೋಷದ ಸ್ಥಳ ಎಂದ ಸುನಿತಾ ವಿಲಿಯಮ್ಸ್

Share
2 Min Read
SHARE

newsics.com

ಬಾಹ್ಯಾಕಾಶ ನೌಕೆ ನನ್ನ ಸಂತೋಷದ ಸ್ಥಳ, ನಾನು ಇಲ್ಲಿರುವುದನ್ನು ಪ್ರೀತಿಸುತ್ತೇನೆ ಎಂದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams) ಹೇಳಿದ್ದಾರೆ.

ನಾಸಾ (NASA) ಸಹೋದ್ಯೋಗಿ ಬುಚ್ ವಿಲ್ಮೋರ್ ಅವರೊಂದಿಗೆ ಜೂನ್ 5 ರಂದು ಬೋಯಿಂಗ್ ಸ್ಟಾರ್ಲೈನರ್ (Boeing’s Starliner) ಗಗನ ನೌಕೆಯಲ್ಲಿ ಕಾರ್ಯಾಚರಣೆಯ ಅಂಗವಾಗಿ ತೆರಳಿದ ವಿಲಿಯಮ್ಸ್ ಅವರು ಬಾಹ್ಯಾಕಾಶದ ಚಟುವಟಿಕೆಗಳು ಹೀಗೆಯೇ ಇರುತ್ತವೆ ಎಂದು ತಾವಿರುವ ಬಾಹ್ಯಾಕಾಶ ನಿಲ್ದಾಣದಿಂದ ವೀಡಿಯೊ ಸಂದೇಶ ರವಾನಿಸಿದ್ದಾರೆ.

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶ ನೌಕೆಯ ಕಕ್ಷೆಯಲ್ಲಿ ಎಂಟು ದಿನಗಳ ಕಾಲ ಗಗನದಲ್ಲಿರಲು ತೆರಳಿದ್ದರು. ಆದರೆ ಸ್ಟಾರ್‌ಲೈನರ್ ಹಲವು ತಾಂತ್ರಿಕ ಸಮಸ್ಯೆಗಳಿಗೆ ಸಿಲುಕಿದ್ದು, ಕಳೆದ ವಾರ ವಿಲಿಯಮ್ಸ್ ಇಲ್ಲದೆ ಭೂಮಿಗೆ ಮರಳಿದೆ. ಇದೀಗ ತಾಂತ್ರಿಕ ಸಮಸ್ಯೆಗಳ ಕಾರಣ ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶದ ವಾಸ್ತವ್ಯವನ್ನು ಎಂಟು ತಿಂಗಳವರೆಗೆ ವಿಸ್ತರಿಸಲಾಗಿದೆ.

ಬಾಹ್ಯಾಕಾಶಕ್ಕೆ ತೆರಳಿರುವ ಇಬ್ಬರೂ ಗಗನಯಾತ್ರಿಗಳು ಈ ಮೊದಲು ಸಹ ಬಾಹ್ಯಾಕಾಶ ಯಾನಕ್ಕೆ ತೆರಳಿದ್ದರು. ಇದರಿಂದ ಈ ಬಾರಿಯು ನೌಕೆಯಲ್ಲಿ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಬಾಹ್ಯಾಕಾಶ ನನ್ನ ಬಹಳ ಸಂತೋಷದ ಸ್ಥಳ. ನಾನು ಬಾಹ್ಯಾಕಾಶದಲ್ಲಿ ಇರಲು ಇಷ್ಟಪಡುತ್ತೇನೆ ಎಂದು ಅನುಭವಿ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಹೇಳಿದ್ದಾರೆ. ಕೆಟ್ಟು ಹೋಗಿರುವ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯನ್ನು ಸರಿಪಡಿಸಿ ಮನೆಗೆ ಮರಳಲು ಕೌತಕನಾಗಿದ್ದೇನೆ. ನೀವು ಚಿಂತೆ ಬಿಟ್ಟು ಪುಸ್ತಕದ ಪುಟವನ್ನು ತಿರುಗಿಸಿ ಮುಂದಿನ ಅವಕಾಶಕ್ಕಾಗಿ ಎದುರು ನೋಡಬೇಕು ಎಂದಿದ್ದಾರೆ.

ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಕೆಟ್ಟು ಹೋಗಿರುವುದರಿಂದ ಸುನಿತಾ ವಿಲಿಯಮ್ಸ್ ಅವರು ಸ್ವಲ್ಪ ಆತಂಕಕ್ಕೊಳಗಾಗಿದ್ದು, ಪ್ರಸತ್ತು ಭೂಮಿಗೆ ಹಿಂತಿರುಗುತ್ತಿಲ್ಲ. ಇನ್ನು ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರು ಫೆಬ್ರವರಿಯಲ್ಲಿ ವಿಶ್ವದ ಕುಬೇರ ಎಲಾನ್ ಮಸ್ಕ್‌ ಅವರ ಒಡೆತನದ ಸ್ಪೇಸ್‌ಎಕ್ಸ್‌ನ ಕ್ರ್ಯೂ-9 ನೌಕೆಯಲ್ಲಿ ಮರಳಲು ನಿರ್ಧರಿಸಲಾಗಿದೆ.

ನಾನು ಮತ್ತು ನನ್ನ ಕುಟುಂಬದ ಕನಸಿನಂತೆ ಹಲವು ಜನರು ಭೂಮಿಯ ಮೇಲಿದ್ದಾರೆ. ನನ್ನ ತಾಯಿಯೊಂದಿಗೆ ಕೆಲವರು ಸಮಯ ಕಳೆದು ಸಮಾಧಾನಪಡಿಸುತ್ತಿದ್ದು, ನನ್ನೊಂದಿಗಿರುವ ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶದಲ್ಲಿ ಉಳಿಯುವ ನಿರ್ಧಾರದಿಂದ ನಿರಾಶೆಗೊಂಡಿಲ್ಲ. ನಾವು ಸ್ಟಾರ್‌ಲೈನರ್‌ನಲ್ಲಿ ಹಿಂತಿರುಗಬಹುದಿತ್ತು, ಆದರೆ ಭೂಮಿಗೆ ಹಿಂದಿರುಗುವಿಕೆಯ ಕುರಿತು ಕೆಲವು ಭಿನ್ನಾಭಿಪ್ರಾಯಗಳಿದ್ದು, ಸ್ಟಾರ್‌ಲೈನರ್‌ ನೌಕೆಗೆ ಹಿಂತಿರುಗಲು ಸರಿಆಗಲಿಲ್ಲ. ಇದರಿಂದ ನೌಕೆಗೆ ಹಿಂದಿರುಗುವ ಸಮಯ ಮೀರಿ ಹೋಗಿದೆ ಎಂದು ವಿಡಿಯೋ ಮೂಲಕ ಹೇಳಿದ್ದಾರೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಲು ಎದುರು ನೋಡುತ್ತಿರುವುದಾಗಿ ಇಬ್ಬರೂ ಗಗನಯಾತ್ರಿಗಳು ವಿಡಿಯೊ ಮೂಲಕ ಹೇಳಿದ್ದಾರೆ. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಮತದಾನಕ್ಕಾಗಿ ಗಗನದಿಂದಲೇ ವಿನಂತಿಯನ್ನು ಕಳುಹಿಸಿದ್ದಾರೆ.

ನವೆಂಬರ್ 5 ರಂದು ನಡೆಯಲಿರುವ ಅಮೇರಿಕ ಚುನಾವಣೆಯಲ್ಲಿ ಡೆಮೋಕ್ರಾಟ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ಹೋರಾಟದ ಕಾವು ಹೆಚ್ಚಿದೆ. ಇದರ ನಡುವೆ, ಸುನಿತಾ ವಿಲಿಯಮ್ಸ್ ಅವರು ಮತದಾನ ಬಹಳ ಮುಖ್ಯ ಕರ್ತವ್ಯವಾಗಿದೆ, ಬಾಹ್ಯಾಕಾಶದಿಂದ ಮತ ಚಲಾಯಿಸಲು ಎದುರು ನೋಡುತ್ತಿದ್ದೇನೆ ಎಂದರೆ, ಬುಚ್ ವಿಲ್ಮೋರ್ ಅವರು ಅಮೆರಿಕನ್ ಪ್ರಜೆಗಳಾಗಿ ನಾವೆಲ್ಲರೂ ನಿರ್ವಹಿಸುವ ಅತ್ಯಂತ ಪ್ರಮುಖ ಕೆಲಸ ಮತದಾನವಾಗಿದೆ. ನಾಸಾ ಮತದಾನ ಮಾಡಲು ನಮಗೆ ಸುಲಭಗೊಳಿಸುತ್ತದೆ ಎಂದಿದ್ದಾರೆ.

ಸದ್ಯದಲ್ಲೇ ಕಾಣಲಿದ್ದಾನೆ ಪುಟ್ಟ ಚಂದ್ರಮ! 56 ದಿನ ಎರಡೆರಡು ಚಂದ್ರ ದರ್ಶನ!

ವಯಾಗ್ರ ತಿಂದ್ರೆ ಏನೇನಾಗತ್ತೆ? ಯಾರ‌್ಯಾರು ಇದನ್ನು ಬಳಸಬಾರದು?

ಉರ್ಫಿ ಜಾವೇದ್ ಬ್ಯೂಟಿ ಸೀಕ್ರೆಟ್ ರಿವೀಲ್

TAGGED:I live in spacethis is my happy place says Sunita Williams
Share This Article
Facebook Twitter Copy Link Print
Previous Article ಸದ್ಯದಲ್ಲೇ ಕಾಣಲಿದ್ದಾನೆ ಪುಟ್ಟ ಚಂದ್ರಮ! 56 ದಿನ ಎರಡೆರಡು ಚಂದ್ರ ದರ್ಶನ!
Next Article ಶುಭೋದಯ… ದಿನ‌ ಭವಿಷ್ಯ 15-09-2024, ಭಾನುವಾರ, ವೃಷಭ- ಆರೋಗ್ಯ ಕಾಳಜಿಯಿರಲಿ, ಸಿಂಹ- ವ್ಯಾಪಾರದಲ್ಲಿ ಏರುಪೇರು, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Personal Health ಲೈಂಗಿಕ ಆಸಕ್ತಿ ಕಡಿಮೆ ಆಗ್ತಿದ್ಯಾ? ಈ ಏಳು ಆಹಾರಗಳಿಂದ ದಾಂಪತ್ಯ ಜೀವನ ಸುಖಮಯ

2 Min Read

Die of thirst ಮಾರ್ಗಮಧ್ಯೆ ಕೆಟ್ಟು ನಿಂತ ಟ್ರಕ್: ಬಾಯಾರಿಕೆಯಿಂದ ಬಳಲಿ 50 ಜನ ಸಾವು

1 Min Read

Ramalingareddy ರಾಮಲಿಂಗಾರೆಡ್ಡಿ ಖಾತೆ ಬದಲಾವಣೆ ಅಸಾಧ್ಯ ಎಂದ ಕಾಂಗ್ರೆಸ್ ಹೈಕಮಾಂಡ್

1 Min Read

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read
ಪ್ರಮುಖ

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?