newsics.com
ನವದೆಹಲಿ :2026ರಲ್ಲಿ ಹಾರುವ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣಗೊಳ್ಳುವ ಸಾಧ್ಯತೆ ಇದೆ.
ಆರ್ಚರ್ ಏವಿಯೇಶನ್ ಸಂಸ್ಥೆ ಭಾರತ, ಅಮೆರಿಕ ಮತ್ತು ಯುಎಇ ದೇಶಗಳಲ್ಲಿ ಏರ್ ಟ್ಯಾಕ್ಸಿ ಅಥವಾ ಹಾರುವ ಕಾರನ್ನು ಪರಿಚಯಿಸಲಿದೆ. ಈ ಸಂಬಂಧ ಈ ದೇಶಗಳಲ್ಲಿ ಇರುವ ಕಾನೂನು ತೊಡಕುಗಳನ್ನು ಅವಲೋಕಿಸಲಾಗುತ್ತಿದ್ದು, ಪ್ರಾಧಿಕಾರಗಳೊಂದಿಗೆ ಸಮಾಲೋಚನೆ ನಡೆಯುತ್ತಿದೆ.
ಎಲ್ಲವೂ ಅಂದುಕೊಂಡಂತೆ ಆದಲ್ಲಿ 2026ರಲ್ಲಿ ಬೆಂಗಳೂರು ಮೊದಲಾದ ಕೆಲ ನಗರಗಳಲ್ಲಿ ಏರ್ ಟ್ಯಾಕ್ಸಿಗಳನ್ನು ಕಾಣಬಹುದು. ಹಾರುವ ಕಾರುಗಳನ್ನು ಆರ್ಚರ್ ಏವಿಯೇಶನ್ ಸಂಸ್ಥೆ ಮಾತ್ರವೇ ಅಲ್ಲ, ಇನ್ನೂ ಕೆಲ ಕಂಪನಿಗಳು ತಯಾರಿಸುತ್ತಿವೆ.
ಏರ್ ಟ್ಯಾಕ್ಸಿ ಪೂರ್ಣ ಎಲೆಕ್ಟ್ರಿಕ್ ಆಗಿರುತ್ತದೆ. ಇದು ಹೊರಡಿಸುವ ಶಬ್ದ ಕೂಡ ಬಹಳ ಕಡಿಮೆ ಇರಲಿದೆ. ಚಾಲಕ ಅಥವಾ ಪೈಲಟ್ ಸೇರಿ ಐದು ಜನರು ಏರ್ ಟ್ಯಾಕ್ಸಿಯಲ್ಲಿ ಕೂರಬಹುದು. ಬ್ಯಾಟರಿಯನ್ನು ಒಮ್ಮೆ ರೀಚಾರ್ಜ್ ಮಾಡಿದರೆ 160 ಕಿಮೀ ದೂರದವರೆಗೂ ಹೋಗಬಹುದು.