Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಜಾಮೀನು ಚಿಂತೆಯಲ್ಲೇ ಮಾನಸಿಕವಾಗಿ ಕುಗ್ಗಿದ ದರ್ಶನ್!
ಕರ್ನಾಟಕಪ್ರಮುಖಮನರಂಜನೆ

ಜಾಮೀನು ಚಿಂತೆಯಲ್ಲೇ ಮಾನಸಿಕವಾಗಿ ಕುಗ್ಗಿದ ದರ್ಶನ್!

Share
1 Min Read
SHARE

newsics.com

ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ಸೆಪ್ಟೆಂಬರ್‌ 4ರಂದು 24ನೇ ಎಸಿಎಂಎಂ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಈ ಒಂದು ಚಾರ್ಜ್ ಶೀಟ್ನಲ್ಲಿ ಇಡೀ ಪ್ರಕರಣದ ಪ್ರಮುಖ, ಹಾಗೂ ಚಿಕ್ಕ ಚಿಕ್ಕ ಮಾಹಿತಿಯನ್ನು ಕೂಡಾ ಇಲ್ಲಿ ದಾಖಲಿಸಲಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಿಂದ ಶುರು ಮಾಡಿದಂತೆ, ಎಫ್ಎಸ್ಎಲ್ ರಿಪೋರ್ಟ್‌ಗಳು, ವೈದ್ಯಕೀಯ ವರದಿಗಳು, ಪಂಚನಾಮೆ ಪ್ರತಿಗಳು, ಮಹಜರು ಕಾಪಿಗಳು, ಆರೋಪಿಗಳ ಹೇಳಿಕೆ ಕಾಪಿಗಳು, ಸಾಕ್ಷಿಗಳ ಹೇಳಿಕೆ, ಕಸ್ಟಡಿ ವೇಳೆ ಆರೋಪಿಗಳ ವೈದ್ಯಕೀಯ ತಪಾಸಣೆ ಪ್ರತಿಗಳು, ಸಾಕ್ಷ್ಯಾಧಾರಗಳ ಪ್ರತಿಗಳು ಸೇರಿದಂತೆ ಒಟ್ಟು 231 ಸಾಕ್ಷಿದಾರರನ್ನು ಒಳಗೊಂಡ 3991 ಪುಟಗಳುಳ್ಳ 9 ಸಂಪುಟಗಳ 10 ಕಡತಗಳನ್ನು ಒಳಗೊಂಡಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕಷ್ಟು ಅಪ್ಡೇಟ್ಗಳು ಹೊರಗೆ ಬೀಳುತ್ತಲೇ ಇವೆ. ಡಿ ಗ್ಯಾಂಗ್‌ನ ಕ್ರೌರ್ಯಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರಗಳು ರಿವೀಲ್ ಆಗಿವೆ. ತನಿಖೆ ವೇಳೆ ಆರೋಪಿ ಮೊಬೈಲ್ ನಲ್ಲಿ ರೇಣುಕಾಸ್ವಾಮಿಯ ಫೋಟೋ ಪತ್ತೆಯಾಗಿತ್ತು, ಒಂದು ಪೋಟೊ ಪವನ್ ಮೊಬೈಲ್‌ನಲ್ಲಿ, ಇನ್ನೊಂದು ಪೋಟೊ ಪ್ರತ್ಯಕ್ಷದರ್ಶಿ ಬಳಿ ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಯಿಂದ ವಿನಯ್‌ಗೆ ಪೋಟೊ ರವಾನೆ ಮಾಡಿದ್ದಾರೆ ಎನ್ನಲಾಗಿದೆ.

ಈತನ್ಮಧ್ಯೆ ಚಾರ್ಜ್‌ಶೀಟ್ ಸಲ್ಲಿಕೆಯಾಗುತ್ತಿದ್ದಂತೆ 3991 ಪುಟಗಳ ಗಾತ್ರ ನೋಡಿ ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ‘ಅಷ್ಟೊಂದು ಸಾಕ್ಷಿಗಳಾ’ ಎಂದು ಹೌಹಾರಿದ್ದು ಸುದ್ದಿಯಾಗಿತ್ತು. ಅದರ ನಂತರ ಮಾನಸಿಕವಾಗಿ ಕುಗ್ಗಿರುವ ದರ್ಶನ್‌ ಜಾಮೀನು ಸಿಗುವ ಬಗ್ಗೆ ಆತಂಕಿತರಾಗಿದ್ದಾರೆ ಎಂದು ತಿಳಿದು ಬಂದಿದೆ. ಚಾರ್ಜ್‌ಶೀಟ್ ಸಲ್ಲಿಕೆ ಬಳಿಕ ರೇಣುಕಾಸ್ವಾಮಿ ಪ್ರಕರಣದ ಒಂದೊಂದೇ ಫೋಟೋಗಳು ರಿಲೀಸ್ ಆಗುತ್ತಿದ್ದು, ಇದು ದರ್ಶನ್‌ಗೆ ಮತ್ತಷ್ಟು ಚಿಂತೆ ಹೆಚ್ಚಿಸಿದೆ ಎನ್ನಲಾಗಿದೆ. ನಾಳೆ ಜಾಮೀನುಗೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರಾದರೂ ಮತ್ತೊಂದೆಡೆ ಈಗ ವೈರಲ್ ಆಗುತ್ತಿರುವ ಪೋಟೋಗಳ ಬಗ್ಗೆ ನಟ ದರ್ಶನ್‌ಗೆ ಆತಂಕ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಲವಾದ ಸಾಕ್ಷಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಆಗಿರುವುದರಿಂದ ಜಾಮೀನು ಸಿಗುತ್ತೋ ಇಲ್ವೋ ಅನ್ನೋ ಆತಂಕದಲ್ಲಿ ದರ್ಶನ್ ಇದ್ದು, ಇದೇ ಚಿಂತೆಯಲ್ಲಿ ದಿನದಿಂದ ದಿನಕ್ಕೆ ದರ್ಶನ್ ಮಾನಸಿಕವಾಗಿ ಕುಗ್ಗುತ್ತಿದ್ದಾರೆ, ದಿನವಿಡೀ ಜಾಮೀನು ಗುಂಗಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ.

TAGGED:After the photo releaseDarshan's anxiety increasedthe actor became mentally depressed due to the worry of bail!
Share This Article
Facebook Twitter Copy Link Print
Previous Article ಮಕ್ಕಳಿಗಂತೂ ಮೊಬೈಲ್ ಕೊಡಲೇಬೇಡಿ!
Next Article ರಥದ ಚಕ್ರಕ್ಕೆ‌ ಸಿಲುಕಿ ಯುವಕ ಸಾವು

Popular Posts

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read
ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?