Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > 3 ಸಾವಿರ ಅಡಿ ಎತ್ತರದಲ್ಲಿರುವ ಈ ಪವರ್‌ಫುಲ್ ಗಣಪನ ಪೂಜೆಗೆ ಹೆಲಿಕಾಪ್ಟರ್‌ನಲ್ಲೇ ಬರ್ತಾರೆ ಅರ್ಚಕರು! ವಿಡಿಯೋ ನೋಡಿ
ಅನಾವರಣದೇಶಪ್ರಮುಖ

3 ಸಾವಿರ ಅಡಿ ಎತ್ತರದಲ್ಲಿರುವ ಈ ಪವರ್‌ಫುಲ್ ಗಣಪನ ಪೂಜೆಗೆ ಹೆಲಿಕಾಪ್ಟರ್‌ನಲ್ಲೇ ಬರ್ತಾರೆ ಅರ್ಚಕರು! ವಿಡಿಯೋ ನೋಡಿ

Share
3 Min Read
SHARE

newsics.com

ವಿಘ್ನನಿವಾರಕ ಗಣಪತಿ ಬಹುರೂಪಿ. ಬಗೆಬಗೆಯಲ್ಲಿ ಹೇಗೆ ನೋಡಿದರೂ ಗಣಪತಿಯೇ. ನಮ್ಮ ಭಾವನೆಯಂತೆ ಗಣೇಶ.

ಪ್ರಥಮವಂದ್ಯ ಗಣಪನಿಗೆ ಸಹಸ್ರಾರು ಗುಡಿ- ಮಂದಿರ. ಸಹಸ್ರನಾಮ ಬಲದ ಗಣಪತಿ ಇಷ್ಟಾರ್ಥ ಈಡೇರಿಸುವವ.

ದೇಶದಲ್ಲಿ ಗಣೇಶನಿಗೆ ವಿವಿಧ ವಿನ್ಯಾಸದ ದೇವಾಲಯಗಳಿದ್ದರೂ ನಾಗ ಗಣಪತಿಯಂಥ ದೇವಾಲಯ ಮತ್ತೊಂದಿಲ್ಲ. ಅಷ್ಟಕ್ಕೂ ಇದು ದೇವಾಲಯವೇ ಅಲ್ಲ, ಈತನಿಗೆ ಬಯಲೇ ಆಲಯ.
ಡೊಳ್ಳು ಹೊಟ್ಟೆಯ ವಿಶಾಲ ಗಣಪ ಸಾವಿರಾರು ವರ್ಷಗಳಿಂದ ನಿಸರ್ಗದ ಮಡಿಲಲ್ಲಿ ಬೆಟ್ಟ ಗುಡ್ಡಗಳ ನಡುವಣ ಪ್ರಶಾಂತ ವಾತಾವರಣದಲ್ಲಿ ಎದೆಯೊಡ್ಡಿ ಬಟಾಬಯಲಿನಲ್ಲಿ ಏಕಾಂಗಿಯಾಗಿ ವಿರಾಜಮಾನನಾಗಿದ್ದಾನೆ.

ಛತ್ತೀಸ್ಗಢದ ಮಂಡಪಾಲದಲ್ಲಿ ಪೂಜಿಸಲ್ಪಡುವ ದನಗಾಹಿ ಗಣಪತಿಯ ಬಗ್ಗೆ ಎಷ್ಟು ಹೇಳಿದರೂ ಸಾಲದು.

ಮೂರು ಸಾವಿರ ಅಡಿ ಎತ್ತರದಲ್ಲಿ ಏಕಶಿಲೆಯ ಮೇಲೆ ಪುಟ್ಟ ಜಾಗದಲ್ಲಿ ನೆಲೆಸಿರುವ ಈ ಗಣೇಶನಿಗೆ ನಿತ್ಯಪೂಜೆ ಮಾಡಲಾಗುತ್ತದೆ. ಅರ್ಚಕರು ಹೆಲಿಕಾಪ್ಟರ್‌ನಲ್ಲಿ ಬಂದು ಪೂಜೆ ಮಾಡಿ ಮರಳುತ್ತಾರೆ.ಈ ನಾಗಗಣಪ ಅಥವಾ ದನಗಾಹಿ ಗಣಪನ ಮೂರ್ತಿ ಸುಮಾರು 1103 ವರ್ಷ ಹಿಂದಿನದು. ಈ ದೇವಾಲಯ ಛತ್ತೀಸ್‌ಗಢದ ಡೋಲ್ಕಲ್ ಬೆಟ್ಟದಲ್ಲಿದೆ. ಇದು ಅರಣ್ಯದೊಳಗಡೆ 14 ಕಿಮೀ ದೂರದಲ್ಲಿರುವ ಮೂರು ಸಾವಿರ ಅಡಿ ಎತ್ತರದ ಬೆಟ್ಟದಲ್ಲಿದೆ.

ಪ್ರತಿವರ್ಷವೂ ಬೆಳೆಯುತ್ತಾನೆ ಈ ಗಣೇಶ:

ಈ ನಾಗ ಗಣಪತಿ ಮೂರ್ತಿಯ ವಿಶೇಷವೆಂದರೆ, ಪ್ರತಿವರ್ಷವೂ ಬೆಳೆಯುತ್ತಲೇ ಇದೆ. ಅಲ್ಲದೆ ಬೆಟ್ಟದ ತುತ್ತ ತುದಿಯಲ್ಲಿರುವ ಈ ಗಣೇಶನ ಮೂರ್ತಿ ರಂಗೋಲಿ ಹಾಕಿದಾಗ 360 ಡಿಗ್ರಿಯಲ್ಲಿ ತಿರುಗುತ್ತದೆ. ಈ ಪವಾಡದ ಹಿಂದಿನ ಕಾರಣವೇನು ಎಂಬುದನ್ನು ಈವರೆಗೂ ಬೇಧಿಸಲಾಗಿಲ್ಲ.

ಈ ಮೂರ್ತಿಯನ್ನು 2ನೇ ಶತಮಾನದಲ್ಲಿ ನಾಗ ಸಾಮ್ರಾಜ್ಯ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಗಣಪತಿಯ ಶಿಲೆ ತುಂಬಾ ವಿಶೇಷವಾಗಿದೆ. ಇಂಥದ್ದೊಂದು ಕಲ್ಲು ಎಲ್ಲಿಯೂ ಕಂಡುಬಂದಿಲ್ಲ ಎಂದು ಪುರಾತತ್ವ ಇಲಾಖೆ ಹೇಳಿದೆ.

1924ರಲ್ಲಿ ಛತ್ತೀಸ್‌ಗಢದಲ್ಲಿ ಭಾರೀ ಭೂಕಂಪ ಸಂಭವಿಸುತ್ತದೆ. ಆಗ ಡೋಲ್ಕಲ್ ಬೆಟ್ಟ 4 ವಿಭಾಗವಾಗುತ್ತದೆ. ಅದರೆ ಈ ಮೂರ್ತಿ ಇರುವ ಬೆಟ್ಟದ ಭಾಗಕ್ಕೆ ಏನೂ ಹಾನಿಯಾಗದೆ ಹಾಗೆಯೇ ಉಳಿಯುತ್ತದೆ.

ಡೋಲ್ಕಲ್ ಬೆಟ್ಟದಲ್ಲಿರುವ ಈ ಗಣೇಶನನ್ನು ನೋಡಲು ಬಸ್ಕಾರ್ ಬೆಟ್ಟ ಹತ್ತಬೇಕು. ಡೋಲ್ಕಲ್ ಬೆಟ್ಟ ಹತ್ತುವುದು ಅಷ್ಟು ಸುಲಭವಲ್ಲ. ಹೀಗೆ ಹತ್ತಲು ಪ್ರಯತ್ನಿಸಿದ ಹಲವರು ತೊಂದರೆ ಅನುಭವಿಸಿದ್ದಾರೆ.

ಆದರೆ ಅದರ ಸಮೀಪ ಇರುವ ಬಸ್ಕಾರ್ ಬೆಟ್ಟ ಹತ್ತುವುದು ಸುಲಭ. ಈ ಬೆಟ್ಟ ಹತ್ತಿದರೆ ಡೋಲ್ಕಲ್ ಬೆಟ್ಟದಲ್ಲಿರುವ ಗಣೇಶನ ದರ್ಶನ ಪಡೆಯಬಹುದು. ಇಲ್ಲಿಗೆ ಪ್ರತಿನಿತ್ಯ ನೂರಾರು ಭಕ್ತರು ಬಂದು ಗಣೇಶನ ದರ್ಶನ ಪಡೆಯುತ್ತಾರೆ. ಇಲ್ಲಿಗೆ ನಾಗ ಜನಾಂಗದವರು ಸುಲಭದಲ್ಲಿ ಹತ್ತಿ ಬರುತ್ತಾರೆ. ಆದರೆ ಬೇರೆಯವರು ಈ ಬೆಟ್ಟ ಹತ್ತವುದು ಸುಲಭವಲ್ಲ.

ಹೆಲಿಕಾಫ್ಟರ್‌ನಲ್ಲಿ ಬರ್ತಾರೆ ಅರ್ಚಕರು!:

ಈ ಗಣೇಶನ ನಿತ್ಯ ಪೂಜೆ ಜವಾಬ್ದಾರಿಯನ್ನು ಛತ್ತೋಸ್‌ಗಢ ಸರ್ಕಾರವೇ ವಹಿಸಿಕೊಂಡಿದ್ದು ಪುರೋಹಿತರನ್ನು ಹೆಲಿಕಾಫ್ಟರ್‌ನಲ್ಲಿ ಕರೆದುಕೊಂಡು ಬಂದು ಪೂಜೆ ಸಲ್ಲಿಸಿ ಹೋಗುವ ವ್ಯವಸ್ಥೆಯಿದೆ. ಈ ಬೆಟ್ಟದಲ್ಲಿ ಇಬ್ಬರು ನಿಲ್ಲಬಹುದು ಅಷ್ಟೇ.ಡೋಲ್ಕರ್ ಬೆಟ್ಟದಲ್ಲಿರುವ ನಾಗ ಗಣಪತಿಯನ್ನು ಕೆತ್ತಿ ಮಾಡಿದ್ದಲ್ಲ, ಮಂತ್ರ ಶಕ್ತಿಯಿಂದ ಮಾಡಿದ್ದು ಎನ್ಜುವ ಪ್ರತೀತಿಯೂ ಇದೆ.

ರಂಗೋಲಿ ಚಮತ್ಕಾರ:

ನಾಗ ಸಾಮ್ರಾಜ್ಯದ 21 ಚಿಹ್ನೆಯ ರಂಗೋಲಿ ಹಾಕಿದರೆ ಗಣಪತಿ ಒಂದು ಸುತ್ತು ಹಾಕುತ್ತದೆ. ರಂಗೋಲಿಯ ತೂಕದ ಒತ್ತಡಕ್ಕೆ ಗಣಪತಿ ಮೂರ್ತಿ ತಿರುಗುವಂಥ ತಂತ್ರಜ್ಞಾನ ಆ ಕಾಲದಲ್ಲಿಯೇ ಮಾಡಲಾಗಿದೆ ಎಂದು ಹೇಳಲಾಗುತ್ತದೆ.

ಆದರೆ ರಂಗೋಲಿ ತೂಕದ ಬೇರೆ ಯಾವುದೇ ವಸ್ತು ಇಟ್ಟರೂ ಗಣಪತಿಯ ಮೂರ್ತಿ ತಿರುಗುವುದಿಲ್ಲ. ಬೇರೆ ಯಾವುದೇ ರಂಗೋಲಿ ಬರೆದರೂ ಮೂರ್ತಿ ತಿರುಗಲ್ಲ. ಆದರೆ ನಾಗ ಸಾಮ್ರಾಜ್ಯದ 21 ಚಿಹ್ನೆ ಬರೆದರೆ ಮೂರ್ತಿ ಒಂದು ಸುತ್ತು ಹಾಕುತ್ತದೆ.
ಛತ್ತೀಸ್‌ಗಢದ ದಾಂತೇವಾಡದ ಬೈಲಾಡಿಲಾದ ಢೋಲ್ಕಲ್ ಬೆಟ್ಟದ ಮೇಲೆ ನೆಲೆಗೊಂಡಿದೆ. ಪುರಾಣಗಳ ಪ್ರಕಾರ, ಈ ಬೆಟ್ಟದಲ್ಲಿ ಗಣೇಶ ಮತ್ತು ಪರಶುರಾಮ ನಡುವೆ ಯುದ್ಧ ನಡೆಯಿತು ಎಂದು ಹೇಳಲಾಗುತ್ತದೆ. ಅಲ್ಲದೆ ಈ ಯುದ್ಧದಲ್ಲಿ ಪರಶುರಾಮನ ಕೊಡಲಿಯು ವಿನಾಯಕನ ಮುಖಕ್ಕೆ ಡಿಚ್ಚಿ ಹೊಡೆದಾಗ, ಆತನ ಒಂದು ಹಲ್ಲು ಮುರಿಯಿತು. ಅದಕ್ಕಾಗಿಯೇ ಬೆಟ್ಟದ ಕೆಳಗಿನ ಗ್ರಾಮಕ್ಕೆ ಫರಸ್ಪಾಲ್ ಎಂದು ಹೆಸರಿಸಲಾಯಿತು.
ನಾಗವಂಶದ ರಾಜರು ಗಣೇಶನ ವಿಗ್ರಹವನ್ನು ಬೆಟ್ಟದ ಮೇಲೆ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ಈ ಘಟನೆಯು ಈ ಪ್ರಪಂಚ ಇರುವವರೆಗೂ ಶಾಶ್ವತವಾಗಿ ನೆನಪಿನಲ್ಲುಳಿಯುತ್ತದೆ.

ಈ ವಿಗ್ರಹವು 11 ನೇ ಶತಮಾನಕ್ಕೆ ಸೇರಿದೆ. ಈ ಗಣಪನಿಗೆ ಬಯಲೇ ಆಹ್ಲಾದಕರ ಪ್ರಶಾಂತ ಆಲಯವಾಗಿದೆ.ಗಣಪನ ಶಕ್ತಿ ಹಾಗೂ ಪವಾಡಗಳ ಕಾರಣದಿಂದ ಈ ನಾಗಗಣಪ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತಾನೆ.

https://www.instagram.com/reel/CpHOKPfpfGY/?igsh=dXRiY3hld3ZkcmZv

ಮತ್ತೆ ಬಂದ ಗಣಪ, ಈ ವಿಚಾರದ ಬಗ್ಗೆ ನೆನಪಿರಲಿ

ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ

TAGGED:000 feetAt a height of 3the priests take a helicopter to worship this powerful Ganesha.
Share This Article
Facebook Twitter Copy Link Print
Previous Article ಕೋಲಾರದಲ್ಲಿ ಗಣೇಶ ಹಬ್ಬದ ಮೆರವಣಿಗೆಗೆ ಡಿಜೆ ಸೌಂಡ್ಸ್ ಬ್ಯಾನ್
Next Article ಪೋಷಕರೇ ಗಮನಿಸಿ, ಸುಕನ್ಯಾ ಸಮೃದ್ಧಿ ಯೋಜನೆ ನಿಯಮ ಬದಲಾಗಿದೆ: ಮಾರ್ಗಸೂಚಿ ಪಾಲಿಸದಿದ್ದರೆ ಖಾತೆ ಬಂದ್

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?