Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಲಾಲನೆ ಪಾಲನೆ > ಪೋಷಕರೇ ಗಮನಿಸಿ, ಸುಕನ್ಯಾ ಸಮೃದ್ಧಿ ಯೋಜನೆ ನಿಯಮ ಬದಲಾಗಿದೆ: ಮಾರ್ಗಸೂಚಿ ಪಾಲಿಸದಿದ್ದರೆ ಖಾತೆ ಬಂದ್
ದೇಶಪ್ರಮುಖಲಾಲನೆ ಪಾಲನೆ

ಪೋಷಕರೇ ಗಮನಿಸಿ, ಸುಕನ್ಯಾ ಸಮೃದ್ಧಿ ಯೋಜನೆ ನಿಯಮ ಬದಲಾಗಿದೆ: ಮಾರ್ಗಸೂಚಿ ಪಾಲಿಸದಿದ್ದರೆ ಖಾತೆ ಬಂದ್

Share
2 Min Read
SHARE

newsics.com

ನವದೆಹಲಿ: ‘ಸುಕನ್ಯಾ ಸಮೃದ್ಧಿ ಯೋಜನೆ’ ಮೋದಿ ಸರ್ಕಾರದ ಹೆಚ್ಚು ಜನಪ್ರಿಯ ಯೋಜನೆ. ಹೆಣ್ಣುಮಕ್ಕಳನ್ನು ಆರ್ಥಿಕ ಸಬಲೀಕರಣಗೊಳಿಸುವ ಗುರಿಯನ್ನು ಇದು ಹೊಂದಿದೆ.

ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಕ್ಟೋಬರ್ 1 ರಿಂದ ಈ ನಿಯಮಗಳು ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

2015 ರಲ್ಲಿ ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿತು. ಇದನ್ನು “ಬೇಟಿ ಬಚಾವೋ, ಬೇಟಿ ಪಡಾವೋ” ಉಪಕ್ರಮದ ಭಾಗವಾಗಿ ಪರಿಚಯಿಸಲಾಗಿತ್ತು. ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮತ್ತು ಮದುವೆಗೆ ಆಗುವ ಖರ್ಚನ್ನು ಒದಗಿಸುವ ಉದ್ದೇಶದಿಂದ ಪೋಷಕರನ್ನು ಹೂಡಿಕೆ ಮಾಡಲು ಪ್ರೋತ್ಸಾಹಿಸುವುದು ಈ ಯೋಜನೆಯ ಗುರಿ.

ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿ ದರ ಶೇ.8.20 ರಷ್ಟು ಈ ಯೋಜನೆಗೆ ಇದೆ. ಹತ್ತು ವರ್ಷದೊಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಅಕೌಂಟ್ ತೆರೆಯಬೇಕು. ಸತತ 15 ವರ್ಷಗಳು ವಾರ್ಷಿಕ ಕನಿಷ್ಠ 250 ರೂ. ನಿಂದ ಗರಿಷ್ಠ 1.50 ಲಕ್ಷ ರೂ.ವರೆಗೆ ಇನ್ವೆಸ್ಟ್ ಮಾಡಬಹುದು. ಇದರಲ್ಲಿ ತೆರಿಗೆ ಪ್ರಯೋಜನಗಳೂ ಇವೆ.

ಬದಲಾದ ನಿಯಮಗಳೇನು?:

ಸುಕನ್ಯಾ ಸಮೃದ್ಧಿ ಮತ್ತು ಪಿಪಿಎಫ್‌ನಂತಹ ಸರಿಯಾದ ಕ್ರಮದಲ್ಲಿ ತೆರೆಯಲಾದ ಖಾತೆಗಳನ್ನು ಕ್ರಮಬದ್ಧಗೊಳಿಸಲು ಹಣಕಾಸು ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ. ಖಾತೆ ತೆರೆಯುವಿಕೆಯಲ್ಲಿನ ದೋಷಗಳನ್ನು ಸರಿಪಡಿಸುವ ಗುರಿ ಹೊಂದಿದೆ. ಈ ಮಾರ್ಗಸೂಚಿಗಳಲ್ಲಿನ ಪ್ರಮುಖ ಅಪ್‌ಡೇಟ್‌ಗಳಲ್ಲಿ ಒಂದು ಗ್ರ್ಯಾಂಡ್ ಪೇರೆಂಟ್ಸ್ ತೆರೆದಿರುವ ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಸಂಬಂಧಿಸಿದೆ.

ಈ ಹಿಂದೆ ಅಜ್ಜ, ಅಜ್ಜಿ ಮತ್ತಿತರರು ಕೂಡ ಹೆಣ್ಣುಮಕ್ಕಳ ಆರ್ಥಿಕ ಭದ್ರತೆಗಾಗಿ ಇಂತಹ ಖಾತೆಗಳನ್ನು ತೆರೆದಿದ್ದರು. ಆದರೆ ಅವರು ಕಾನೂನು ಪ್ರಕಾರ ಪೋಷಕರಲ್ಲ.

ಕಾನೂನುಬದ್ಧವಾಗಿ ಹೆಣ್ಣುಮಕ್ಕಳ ಪಾಲಕರು ಅಥವಾ ಪೋಷಕರು ತೆರೆಯದ ಸುಕನ್ಯಾ ಸಮೃದ್ಧಿ ಖಾತೆಗಳನ್ನು ಈಗ ಹೊಸ ಮಾರ್ಗಸೂಚಿಗಳ ಪ್ರಕಾರ, ಕಡ್ಡಾಯವಾಗಿ ಪಾಲಕರಿಗೆ ವರ್ಗಾಯಿಸಬೇಕಾಗಿದೆ.

ಇಲ್ಲವಾದಲ್ಲಿ ಗ್ರ್ಯಾಂಡ್ ಪೇರೆಂಟ್ಸ್ ಹೆಸರಿನಲ್ಲಿರುವ ಸುಕನ್ಯಾ ಸಮೃದ್ಧಿ ಖಾತೆಗಳನ್ನು ಮುಚ್ಚುವ ಸಾಧ್ಯತೆ ಇದೆ. ಒಂದು ವೇಳೆ ಪೋಷಕರಿಲ್ಲದ ಹೆಣ್ಣುಮಕ್ಕಳಿಗೆ ಗ್ರ್ಯಾಂಡ್ ಪೇರೆಂಟ್ಸ್ ಪಾಲಕರಾಗಲು ಸರ್ಕಾರದಿಂದ ಪ್ರಮಾಣಪತ್ರ ಪಡೆಯಬೇಕು.

ಖಾತೆ ಮುಚ್ಚಲು ಅಥವಾ ವರ್ಗಾವಣೆಗೆ ಅಗತ್ಯವಿರುವ ದಾಖಲೆಗಳು:

  • ಎಸ್ಎಸ್ವೈ ಅಕೌಂಟ್ ಬುಕ್
  • ಬಾಲಕಿಯ ಜನನ ಪ್ರಮಾಣಪತ್ರ
  • ಹೊಸ ಪಾಲಕರ ಅಥವಾ ಪೋಷಕರ ಐಡಿ ಪುರಾವೆ
  • ವರ್ಗಾವಣೆ ಅರ್ಜಿ ನಮೂನೆ

ಖಾತೆ ವರ್ಗಾವಣೆ ಪ್ರಕ್ರಿಯೆ:

ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಅಂಚೆ ಕಚೇರಿ ಅಥವಾ ಖಾತೆ ತೆರೆದಿರುವ ಬ್ಯಾಂಕಿಗೆ ಹೋಗಬೇಕು.

ಹೊಸ ಮಾರ್ಗಸೂಚಿಗಳ ಪ್ರಕಾರ, ಖಾತೆಯನ್ನು ಪೋಷಕರಿಗೆ ವರ್ಗಾಯಿಸುವ ಅಗತ್ಯದ ಬಗ್ಗೆ ಅಧಿಕಾರಿಗಳಿಗೆ ತಿಳಿಸಬೇಕು.

ಬ್ಯಾಂಕ್ ಅಥವಾ ಅಂಚೆ ಕಚೇರಿ ಅವರು ಒದಗಿಸಿದ ವರ್ಗಾವಣೆ ಅರ್ಜಿಯನ್ನು ಭರ್ತಿ ಮಾಡಬೇಕು.

ಸದ್ಯ ಇರುವ ಖಾತೆದಾರರು (ಅಜ್ಜ, ಅಜ್ಜಿ, ಇತರ ), ಹೊಸ ಪೋಷಕರು (ಪಾಲಕರು) ಇಬ್ಬರೂ ಈ ನಮೂನೆಗೆ ಸಹಿ ಮಾಡಬೇಕು.

ಫಾರ್ಮ್ ಮತ್ತು ಪೂರಕ ದಾಖಲೆಗಳನ್ನು ಸಲ್ಲಿಸಿದ ನಂತರ, ಬ್ಯಾಂಕ್ ಅಥವಾ ಅಂಚೆ ಕಚೇರಿ ಸಿಬ್ಬಂದಿ ನಿಮ್ಮ ಮನವಿಯನ್ನು ಪರಿಶೀಲಿಸುತ್ತಾರೆ ಮತ್ತು ದೃಢೀಕರಣ ಪ್ರಕ್ರಿಯೆ ಆರಂಭಿಸುತ್ತಾರೆ.

ದೃಢೀಕರಣ ಪೂರ್ಣಗೊಂಡ ನಂತರ ಖಾತೆಯ ದಾಖಲೆಗಳನ್ನು ಹೊಸ ಪೋಷಕರ ಮಾಹಿತಿಯಂತೆ ನವೀಕರಿಸಲಾಗುತ್ತದೆ.

3 ಸಾವಿರ ಅಡಿ ಎತ್ತರದಲ್ಲಿರುವ ಈ ಪವರ್‌ಫುಲ್ ಗಣಪನ ಪೂಜೆಗೆ ಹೆಲಿಕಾಪ್ಟರ್‌ನಲ್ಲೇ ಬರ್ತಾರೆ ಅರ್ಚಕರು! ವಿಡಿಯೋ ನೋಡಿ

ಪೂಜಾ ಖೇಡ್ಕರ್‌ನ್ನು ಐಎಎಸ್‌ನಿಂದ ವಜಾ ಮಾಡಿದ ಕೇಂದ್ರ

TAGGED:Note to parentsSukanya Samriddhi Yojana rule has changed: account closure if guidelines are not followed
Share This Article
Facebook Twitter Copy Link Print
Previous Article 3 ಸಾವಿರ ಅಡಿ ಎತ್ತರದಲ್ಲಿರುವ ಈ ಪವರ್‌ಫುಲ್ ಗಣಪನ ಪೂಜೆಗೆ ಹೆಲಿಕಾಪ್ಟರ್‌ನಲ್ಲೇ ಬರ್ತಾರೆ ಅರ್ಚಕರು! ವಿಡಿಯೋ ನೋಡಿ
Next Article ಸದಾ ಮೊಬೈಲ್ ನಲ್ಲಿ ಮುಳುಗಿರುವುದರಿಂದ ಈ ಸಮಸ್ಯೆಗಳು ಫಿಕ್ಸ್

Popular Posts

IND vs ENG Cricket 3ನೇ ಏಕದಿನ: ಲಾರ್ಡ್ಸ್‌ನಲ್ಲಿ ಸರಣಿ ಗೆಲುವಿನ ಹೋರಾಟ – ಭಾರತಕ್ಕೆ ಸವಾಲು, ಇಂಗ್ಲೆಂಡ್‌ಗೆ ಪ್ರತಿಷ್ಠೆ

3 Min Read

Benefits of Burning Natural Fragrant Ingredients at Home ಸುಗಂಧ ಬೀರುವ ಈ ವಸ್ತುಗಳನ್ನ ಸುಟ್ಟರೆ ಏನಾಗುತ್ತೆ? ತಿಳಿಯಿರಿ ಇದರ ಪ್ರಯೋಜನಗಳು

1 Min Read

Viparita Karani Yoga Pose ವಿಪರೀತ ಕರಣಿ ಆಸನದಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ! ಆರೋಗ್ಯಕ್ಕೆ ಅದ್ಭುತ ಯೋಗಾಸನ

2 Min Read

Best Healthy Rotis  ಆರೋಗ್ಯಕ್ಕೆ ಬೆಸ್ಟ್ ಈ ರೊಟ್ಟಿಗಳು

2 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

New love trend ಫಾಸ್ಟ್ ಫುಡ್ ಜಮಾನಾದಲ್ಲಿ ‘ಸ್ಲೋ ಡೇಟಿಂಗ್’ ಕ್ರೇಜ್! 2026ರ ಹೊಸ ಲವ್ ಟ್ರೆಂಡ್

2 Min Read
ದೇಶಪ್ರಮುಖ

Wife killed husband ವಿಮಾ ಹಣಕ್ಕಾಗಿ ಪತಿಗೆ ಹಾವಿನಿಂದ ಕಚ್ಚಿಸಿ ಕೊಂದ ಪತ್ನಿ! ಅಕ್ರಮ ಸಂಬಂಧ ಎಫೆಕ್ಟ್

4 Min Read
ಪ್ರಮುಖCrimeದೇಶ

Supreme Court ಬರೀ ಬೈಗುಳಗಳು ‘ಅಶ್ಲೀಲತೆ’ ಅಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?