Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಪವಿತ್ರಾಗೌಡಗೆ ‘ಸೂಪರ್ ಬ್ಯೂಟಿ’ ಎಂದಿದ್ದ ರೇಣುಕಾಸ್ವಾಮಿ, ರಹಸ್ಯ ಲಿವ್ ಇನ್ ಸಂಬಂಧಕ್ಕೆ ಬೇಡಿಕೆ
ಕರ್ನಾಟಕಪ್ರಮುಖಮನರಂಜನೆ

ಪವಿತ್ರಾಗೌಡಗೆ ‘ಸೂಪರ್ ಬ್ಯೂಟಿ’ ಎಂದಿದ್ದ ರೇಣುಕಾಸ್ವಾಮಿ, ರಹಸ್ಯ ಲಿವ್ ಇನ್ ಸಂಬಂಧಕ್ಕೆ ಬೇಡಿಕೆ

Share
3 Min Read
SHARE

newsics.com
ಬೆಂಗಳೂರು: ರೇಣುಕಾಸ್ವಾಮಿ ಮತ್ತು ಪವಿತ್ರಾಗೌಡ ಹೆಸರಲ್ಲಿ ಪವನ್ ನಡೆಸಿದ ಮೇಸೆಜ್ ಗಳು ಬಹಿರಂಗಗೊಂಡಿದ್ದು ಅದರಲ್ಲಿ ರೇಣುಕಾಸ್ವಾಮಿ ಪವಿತ್ರಾಗೌಡಗೆ ನೀನು ಸೂಪರ್ ಬ್ಯೂಟಿ, ನನ್ನ ಜತೆ ರಹಸ್ಯವಾಗಿ ಲಿವ್-ಇನ್ ಸಂಬಂಧ ಹೊಂದುವಂತೆ ಕೇಳಿಕೊಂಡಿದ್ದನು ಎಂದು ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ನಿಂದ ಬಹಿರಂಗಗೊಂಡಿದೆ.

ಆರೋಪಿಗಳ ಮೊಬೈಲ್ನಲ್ಲಿ ರೇಣುಕಾಸ್ವಾಮಿ ಕೊಲೆ ಸಂಬಂಧ ಸಾಕಷ್ಟು ರಹಸ್ಯಗಳೂ ಬಯಲಾಗಿವೆ. ಪವಿತ್ರಾ ಮೊಬೈಲ್ನಲ್ಲಿ ಕೊಲೆ ಪ್ರಕರಣ ಸಂಬಂಧ 65 ಫೋಟೋ ಪತ್ತೆ ಆಗಿವೆ. 17 ಸ್ಕ್ರೀನ್ ಶಾಟ್, ಸ್ವಾಮಿ ಕಳಿಸಿದ್ದ 20 ಅಶ್ಲೀಲ ಮೆಸೇಜ್ ಲಭ್ಯ ಆಗಿವೆ.

ಪವಿತ್ರಾಗೌಡ ಜತೆ ದರ್ಶನ್ ನಡೆಸಿದ್ದ ವಾಟ್ಸಾಪ್ ಚಾಟ್ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.
ಮೊದಲಿಗೆ ರೇಣುಕಾಸ್ವಾಮಿ ಇನ್ ಸ್ಟಾಗ್ರಾಂನಲ್ಲಿ ಪವಿತ್ರಾಗೌಡಗೆ ಮೇಸೆಜ್ ಮಾಡಲು ಶುರು ಮಾಡಿದ್ದ.

ನೀವು Busy ಇರ್ತೀರಾ. ನಮಸ್ಕಾರ, ದಯವಿಟ್ಟು ನಿಮ್ಮ ಮೊಬೈಲ್ ಸಂಖ್ಯೆ ಕಳುಹಿಸು. ವಾವ್, ಸೂಪರ್ ಬ್ಯೂಟಿ. ಸೆಕ್ಸಿ ಫಿಗರ್ ನೀವು, ನನ್ನೊಂದಿಗೆ ರಹಸ್ಯ ಲಿವ್-ಇನ್ ಸಂಬಂಧ ಇಟ್ಕೋತೀರಾ? ನಾನು ನಿಮಗೆ ಪ್ರತಿ ತಿಂಗಳು 10,000 ರೂಪಾಯಿ ಕೊಡ್ತೀನಿ ಎಂದು ಪವಿತ್ರಾಗೌಡಗೆ ರೇಣುಕಾಸ್ವಾಮಿ ಮೇಸೆಜ್ ಮಾಡುತ್ತಿದ್ದನು.

ರೇಣುಕಾಸ್ವಾಮಿಯ ಖಾಸಗಿ ಭಾಗಗಳ ಅಸಭ್ಯ ಸಂದೇಶಗಳು ಮತ್ತು ಫೋಟೋಗಳನ್ನು ನೋಡಿ ಸಹಿಸಲು ಸಾಧ್ಯವಾಗದ ಪವಿತ್ರಾ ಗೌಡ, ಪ್ರಕರಣದ ಮತ್ತೊಬ್ಬ ಆರೋಪಿ ಪವನ್‌ಗೆ ರೇಣುಕಾಸ್ವಾಮಿ ಸಂದೇಶಗಳನ್ನು ನಿಭಾಯಿಸಲು ಕೇಳಿದರು ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.
ರೇಣುಕಾಸ್ವಾಮಿಯ ಜಾಡು ಹಿಡಿಯಲು ಪವನ್ ಪವಿತ್ರಾ ಗೌಡ ಸೋಗಿನಲ್ಲಿ ಚಾಟಿಂಗ್ ಆರಂಭಿಸಿದ್ದ. ರೇಣುಕಾಸ್ವಾಮಿ ಇರುವ ಜಾಗವನ್ನು ತಿಳಿದುಕೊಳ್ಳಲು ಆರೋಪಿ ಪವನ್ ನಯವಾಗಿ ಚಾಟಿಂಗ್ ಮಾಡಲು ಆರಂಭಿಸಿದ್ದ.

ಅಲ್ಲದೆ ರೇಣುಕಾಸ್ವಾಮಿ ಕೆಲಸ ಮಾಡುತ್ತಿದ್ದ ಫಾರ್ಮಸಿ ಅಂಗಡಿಯ ಹೊರಗೆ ನಿಂತು ಫೋಟೋ ತೆಗೆದು ಕಳುಹಿಸುವಂತೆ ಪವನ್ ಕೇಳಿದ್ದಾನೆ. ಹೀಗೆ ರೇಣುಕಾಸ್ವಾಮಿ ಕಳುಹಿಸಿದ ಫೋಟೋಗಳನ್ನು ಸಹ ರಿಟ್ರೀವ್ ಮಾಡಿರುವ ಪೊಲೀಸರು ತಾವು ಸಲ್ಲಿಸಿರುವ 3,991 ಪುಟಗಳ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದ ಆರೋಪಪಟ್ಟಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನು ಪೊಲೀಸರು ಪ್ರಕರಣದ ಸಾಕ್ಷಿಗಳು ಮತ್ತು ಪ್ರತ್ಯಕ್ಷದರ್ಶಿಗಳ ಮೇಲೆ ಹೆಚ್ಚು ನಿಗಾ ಇಟ್ಟಿದ್ದಾರೆ. ರೇಣುಕಾಸ್ವಾಮಿಯನ್ನು ಶೆಡ್‌ಗೆ ಕರೆತರುವ ಸಂಪೂರ್ಣ ಪ್ರಕ್ರಿಯೆ ಮತ್ತು ದರ್ಶನ್ ಮತ್ತು ಆತನ ಸಂಗಾತಿ ಪವಿತ್ರಾ ಗೌಡ ಸೇರಿದಂತೆ ಆರೋಪಿಗಳು ನಡೆಸಿದ ದೌರ್ಜನ್ಯವನ್ನು ನೋಡಿರುವ ಶೆಡ್‌ನ ವಾಚ್‌ಮನ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು ಪ್ರಕರಣದ ನಿರ್ಣಾಯಕ ಸಾಕ್ಷಿಯಾಗಿ ಪರಿಗಣಿಸಿದ್ದಾರೆ.

ಶೆಡ್‌ನಲ್ಲಿರುವ ಇಬ್ಬರು ಕೆಲಸಗಾರರನ್ನು ಎರಡನೇ ಮತ್ತು ಮೂರನೇ ಪ್ರತ್ಯಕ್ಷದರ್ಶಿಗಳು ಎಂದು ಪರಿಗಣಿಸಲಾಗುತ್ತದೆ. ರೇಣುಕಾಸ್ವಾಮಿಗೆ ಹೇಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು ಎಂಬುದನ್ನು ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾರೆ.
ದರ್ಶನ್ ರೇಣುಕಾಸ್ವಾಮಿಯ ಎದೆಗೆ ಪದೇ ಪದೇ ಒದೆಯುತ್ತಿದ್ದು, ಇದರಿಂದ ಎದೆಯ ಮೂಳೆಗಳು ಮುರಿದಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಬಳಿಕ ದರ್ಶನ್ ರೇಣುಕಾಸ್ವಾಮಿಯನ್ನು ಎತ್ತಿಕೊಂಡು ಟ್ರಕ್‌ಗೆ ಎಸೆದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದೆ. ಆಗ ಪವಿತ್ರಾ ಗೌಡಗೆ ಕಳುಹಿಸಿದ್ದ ಖಾಸಗಿ ಭಾಗದ ಫೋಟೋ ತೋರಿಸಿ ದರ್ಶನ್ ರೇಣುಕಾಸ್ವಾಮಿ ಖಾಸಗಿ ಭಾಗಕ್ಕೆ ಒದ್ದಿದ್ದು, ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿದ್ದ. ದರ್ಶನ್ ನಡೆಸಿದ ಹಲ್ಲೆ ಮಾರಣಾಂತಿಕವಾಗಿದ್ದು, ರೇಣುಕಾಸ್ವಾಮಿ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ಚಾರ್ಜ್ ಶೀಟ್‌ನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಗಳನ್ನು ಉಲ್ಲೇಖಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಪಟ್ಟಿಯಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧವನ್ನೂ ಉಲ್ಲೇಖಿಸಲಾಗಿದೆ. ಪವಿತ್ರಾ ಗೌಡಳನ್ನು ಮದುವೆಯಾಗಿಲ್ಲ, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದುದಾಗಿ ಎಂದು ದರ್ಶನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹತ್ಯೆಯ ನಂತರ ಆತಂಕಗೊಂಡಿದ್ದ ದರ್ಶನ್ ಮತ್ತು ಪ್ರಕರಣದಲ್ಲಿ ಬಂಧಿಸುವ ಮೊದಲು ಮೈಸೂರು ನಗರದ ಸ್ಟಾರ್ ಹೋಟೆಲ್‌ನಲ್ಲಿ ಇತರ ಆರೋಪಿಗಳೊಂದಿಗೆ ಮಾತನಾಡುತ್ತಿದ್ದ ಫೋಟೋಗಳನ್ನೂ ಪೊಲೀಸರು ಸಂಗ್ರಹಿಸಿದ್ದಾರೆ.

TAGGED:demanded a secret live-in relationshipRenukaswamywho called Pavitra Gowda a 'super beauty'
Share This Article
Facebook Twitter Copy Link Print
Previous Article ಶುಭೋದಯ‌… ಇಂದಿನ ಪಂಚಾಂಗ, 07-09-2024 ಶನಿವಾರ, ಗಣೇಶ ಚತುರ್ಥಿ
Next Article ದರ್ಶನ್ ಹಾಗೂ ಪವಿತ್ರಾ ಸಂಬಂಧ ಎಂಥದ್ದು?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?