Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಪವಿತ್ರ ತುಳಸಿ ದಳವನ್ನು ಗಣೇಶನಿಗೆ ಅರ್ಪಿಸುವುದಿಲ್ಲ ಯಾಕೆ ಗೊತ್ತಾ?
ಆರೋಗ್ಯಕರ್ನಾಟಕಲೈಫ್‌ಸ್ಟೈಲ್

ಪವಿತ್ರ ತುಳಸಿ ದಳವನ್ನು ಗಣೇಶನಿಗೆ ಅರ್ಪಿಸುವುದಿಲ್ಲ ಯಾಕೆ ಗೊತ್ತಾ?

Share
2 Min Read
SHARE

newsics.com

ಬೆಂಗಳೂರು: ಗಣೇಶನ ಹಬ್ಬ ಅಂದ್ರೆನೇ ಸಂಭ್ರಮಕ್ಕೆ ಸಡಗರಕ್ಕೆ ಮತ್ತೊಂದು ಹೆಸರು.
ಸಂಧ್ಯಾವಂದನೆಯಿಂದ ಹಿಡಿದು, ನೈವೆದ್ಯದವರೆಗೂ ತುಳಸಿ ಪ್ರಾಮುಖ್ಯತೆಯನ್ನು ನಮ್ಮ ಪುರಾಣಗಳು ಕಟ್ಟಿಕೊಟ್ಟಿವೆ. ಆದ್ರೆ ಗಣೇಶನಿಗೆ ಮಾತ್ರ ಈ ತುಳಸಿ ದಳವನ್ನು ಏರಿಸುವಂತಿಲ್ಲ. ಅದಕ್ಕೆ ಕಾರಣ ತುಳಸಿ ಹಾಗೂ ಗಣಪ ಒಬ್ಬರಿಗೊಬ್ಬರು ಕೊಟ್ಟುಕೊಂಡಿರುವ ಶಾಪ.

ಪುರಾಣಗಳು ಹೇಳುವ ಪ್ರಕಾರ ತುಳಸಿ ಸದಾ ವಿಷ್ಣು ಪ್ರಿಯೆ ಅವನಿಗಾಗಿಯೇ ಹಂಬಲಿಸಿದವಳು. ಹರನಿಗಾಗಿ ಗಿರಿಜೆ ಹಂಬಲಿಸಿದಂತೆ, ತಪಸ್ಸು ಮಾಡಿದಂತೆ ಹರಿಗಾಗಿ ತುಳಸಿ ಹಂಬಲಿಸಿ, ತಪಿಸಿದವಳು. ಆದರೆ ಒಂದೇ ಒಂದು ಬಾರಿ ಮನದ ಸಮೋತಲನ ಕಳೆದುಕೊಂಡು ಗಣಪನ ಮೇಲೆ ಮೋಹ ಮೂಡುತ್ತದೆ ತುಳಸಿಗೆ. ತಪಸ್ಸಿನಲ್ಲಿ ನಿರತನಾಗಿದ್ದ ಗಣೇಶನನ್ನು ಕಂಡು ಮೋಹಪರವಶಳಾದ ತುಳಸಿ, ನಾನು ನಿನ್ನನ್ನು ಮದುವೆಯಾಗಬೇಕು, ನಾನು ನಿನಗೆ ಒಲಿದಿದ್ದೇನೆ. ನನ್ನ ಪ್ರೀತಿಯನ್ನು ನಿರಾಕರಿಸಬೇಡ ಆರ್ಯ ಎಂದು ಬೇಡುತ್ತಾಳೆ.

ಗಣೇಶ ಸದಾ ತಪಸ್ಸಿನಲ್ಲಿ ನಿರತನಾಗಿರುವ ಹರಪುತ್ರ ಆಕೆಯ ಪ್ರೇಮ ಪ್ರಸ್ತಾಪವನ್ನು ನಯವಾಗಿಯೇ ತಿರಸ್ಕರಿಸುತ್ತಾನೆ. ದೇವಿ, ನಾನು ಸಂಸಾರವೆಂಬ ಸಾಗರದಿಂದ ಮುಕ್ತನಾಗಲು ಹಂಬಲಿಸಿದವನು. ಸದಾ ಜಪತಪಗಳೇ ನನ್ನ ಉತ್ಥಾನದ ಮಾರ್ಗ ಹೀಗಾಗಿ ನಿನ್ನನ್ನು ನಾನು ವರಿಸಲಾರೆ ಎಂದು ಬಿಡುತ್ತಾನೆ. ಇಡೀ ಅಸ್ತಿತ್ವವೇ ಕುಸಿದು ಬಿದ್ದಂತಾದ ತುಳಸಿ ಎಂಬ ಮಹಾಸೌಂದರ್ಯ ರಾಶಿಗೆ ಕಡುಗೋಪವುಕ್ಕಿ. ನನ್ನಂತ ಸಾಧ್ವಿಯ ಪ್ರೇಮವನ್ನು ನೀನು ನಿರಾಕರಿಸಿದ್ದೀಯಾ. ಯಾವ ಕಾರಣಕ್ಕಾಗಿ ನೀನು ನನ್ನ ಪವಿತ್ರ ಪ್ರೇಮವನ್ನು ತಿರಸ್ಕರಿಸಿದ್ದಿಯೋ ಅದು ಎಂದು ನಿನಗೆ ದಕ್ಕದೇ ಹೋಗಲಿ ಎಂದು ಶಪಿಸುತ್ತಾಳೆ.

ವಿನಾಕಾರಣವಾಗಿ ಶಪಿಸಿದ ತುಳಸಿಯ ಮೇಲೆ ಸಿಡಿದ ವಕ್ರತುಂಡ, ಭದ್ರೆ, ನನ್ನ ತಪ್ಪಿಲ್ಲದೇ, ಯಾವ ದೋಷವೂ ಇಲ್ಲದೆ ನನ್ನನ್ನು ವಿನಾಕಾರಣವಾಗಿ ಶಪಿಸಿದ್ದೀಯ. ನನ್ನ ಶಾಪಕ್ಕೂ ನೀನೀಗ ಅರ್ಹಳು. ಕೇಳಿಸಿಕೋ ಯಾವ ಸೌಂದರ್ಯದ ರೂಪವತಿ ಅನ್ನೊ ಅಮಲಲ್ಲಿ ನೀನು ನನ್ನನ್ನು ಶಪಿಸಿದ್ದಿಯೋ. ಆ ಪರಮಸುಂದರಿಯಾದ ನಿನ್ನನ್ನ ರಾಕ್ಷಸನೊಬ್ಬ ಮದುವೆಯಾಗುವಂತಾಗಲಿ ಎಂದು ಗಣಪ ಶಾಪವನ್ನಿಡುತ್ತಾನೆ.

ಹಿಂದೆ ಮುಂದೆ ಯೋಚನೆ ಮಾಡದೇ ಶಾಪವಿಟ್ಟು ಮರಳಿ ಗಣಪನಿಂದ ಶಾಪ ಪಡೆದ ತುಳಸಿ ಒಂದೇ ಕ್ಷಣದಲ್ಲಿ ಕುಸಿದು ಗಣಪನ ಎದುರು ಮಂಡಿಯೂರಿ, ಗಣನಾಥ, ನನ್ನದು ತಪ್ಪಾಗಿದೆ. ದಯವಿಟ್ಟು ಈ ಶಾಪದಿಂದ ನನ್ನನ್ನು ವಿಮೋಚಿಸು ಎಂದು ಗೋಗರೆಯುತ್ತಾಳೆ. ತುಳಸಿಯ ಗೋಳು ಕಂಡು ಕರಗಿದ ಗಣೇಶ, ದೇವಿ ಕೊಟ್ಟ ಶಾಪವನ್ನು ಮರಳಿ ಪಡೆಯಲು ಆಗುವುದಿಲ್ಲ. ಆದರೆ ಅದರ ಪರಿಣಾಮವನ್ನು ಕಡಿಮೆ ಮಾಡುತ್ತೇನೆ. ಭವಿಷ್ಯದಲ್ಲಿ ನೀನು ಪರಮಪವಿತ್ರ ಸಸ್ಯವಾಗಿ ಇಡೀ ಭೂಲೋಕದಲ್ಲಿ ಪೂಜಿಸಲ್ಪಡುವೆ. ಎಲ್ಲ ಶುಭಕಾರ್ಯಗಳಲ್ಲಿಯೂ ನೀನು ಪೂಜಿಸಲ್ಪಡುವೆ. ಆದರೆ ನನ್ನ ಪೂಜೆಗೆ ಮಾತ್ರ ನೀನೆಂದೂ ಮೀಸಲಿರುವುದಿಲ್ಲ. ನನ್ನ ಪೂಜೆಯಲ್ಲಿ ನಿನ್ನನೆಂದೂ ಬಳಸುವುದಿಲ್ಲ. ಇದೇ ನಾನು ನಿನಗೆ ಕೊಡುತ್ತಿರುವ ವರ ಎಂದು ಹೇಳಿ ಆಕೆಯ ಮೇಲಿನ ಶಾಪದ ಪರಿಣಾಮವನ್ನು ಕಡಿಮೆ ಮಾಡುತ್ತಾನೆ ಗಣೇಶ.

Share This Article
Facebook Twitter Copy Link Print
Previous Article ಮರಕ್ಕೆ ಕಾರು ಡಿಕ್ಕಿ: ನಟ- ನಿರ್ದೇಶಕ ನಾಗಶೇಖರ್‌ ಸೇರಿ ಇಬ್ಬರಿಗೆ ಗಾಯ
Next Article ಜೈಲು ಪಿಪಿಸಿ ಖಾತೆಯಿಂದ 735 ರೂ. ಖರ್ಚು ಮಾಡಿದ ದರ್ಶನ್‌

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read
ಪ್ರಮುಖಲೈಫ್‌ಸ್ಟೈಲ್

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read
ಪ್ರಮುಖಲೈಫ್‌ಸ್ಟೈಲ್

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?