newsics.com
ಬೆಂಗಳೂರು: ಮಳೆಗಾಲ ಶುರುವಾಗುತ್ತಿದ್ದಂತೆಯೇ ಸೊಳ್ಳೆಗಳ ಕಾಟ ಹೆಚ್ಚಾಗಲಿದ್ದು, ಡೆಂಗ್ಯೂ, ಮಲೇರಿಯಾಗಳು ಕಾಣಿಸಿಕೊಳ್ಳುತ್ತೇವೆ. ಇಂಥಾ ಜ್ವರ, ಉಸಿರಾಟದ ಸಮಸ್ಯೆ, ಸೋಂಕುಗಳು ಮಕ್ಕಳನ್ನು ಕಾಡೋದು ಹೆಚ್ಚು.
- ಆಟವಾಡಿ ಮನೆಗೆ ಬಂದ ಕೂಡಲೇ ಮಕ್ಕಳು ಸೂಕ್ತ ರೀತಿಯಲ್ಲಿ ಕೈ ತೊಳೆಯುವಂತೆ ನೋಡಿಕೊಳ್ಳಬೇಕು.
- ಸೂಕ್ಷ್ಮಾಣುಗಳ ಹರಡುವಿಕೆಯನ್ನು ಕಡಿಮೆ ಮಾಡಲು ಶಾಲೆಗಳಲ್ಲಿ ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಮತ್ತು ಸೋಂಕುರಹಿತಗೊಳಿಸಬೇಕು.
- ರೋಗಾಣುಗಳು ಮತ್ತು ಅನಾರೋಗ್ಯದ ಹರಡುವಿಕೆಯನ್ನು ತಡೆಗಟ್ಟುವ ಬಗ್ಗೆ ಮಕ್ಕಳಿಗೆ ದೈನಂದಿನ ಆಗಾಗ್ಗೆ ಅರಿವು ಮೂಡಿಸಿ.
- ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಆರೋಗ್ಯಕರ ಆಹಾರ ಕೂಡ ಮುಖ್ಯ. ಮಕ್ಕಳಿಗೆ ಹೆಚ್ಚಾಗಿ ಹಣ್ಣುಗಳು, ತರಕಾರಿಗಳು, ಹಸಿರು ತರಕಾರಿಗಳು, ಸೊಪ್ಪು, ಹಾಲಿನ ಪದಾರ್ಥಗಳು, ಡ್ರೈಫ್ರೂಟ್ಸ್ ಗಳನ್ನು ನೀಡಬೇಕು.
- ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಥವಾ ಆಗಾಗ್ಗೆ ಸೋಂಕುಗಳಿಂದ ಬಳಲುತ್ತಿರುವ ಮಕ್ಕಳಿಗೆ ಶಾಲೆಗೆ ಕಳುಹಿಸುವುದಕ್ಕೂ ಮುನ್ನ ಲಸಿಕೆ ಹಾಕಿಸುವುದು ಮುಖ್ಯವಾಗುತ್ತದೆ.