Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ನಿಮ್ಮ ಮಕ್ಕಳು ಮಿತಿಮೀರಿ ಟಿವಿ, ಮೊಬೈಲ್‌ ನೋಡುತ್ತಿದ್ದಾರಾ..? ಈ ಅಪಾಯ ತಪ್ಪಿದ್ದಲ್ಲ, ಎಚ್ಚರ!
ಲೈಫ್‌ಸ್ಟೈಲ್

ನಿಮ್ಮ ಮಕ್ಕಳು ಮಿತಿಮೀರಿ ಟಿವಿ, ಮೊಬೈಲ್‌ ನೋಡುತ್ತಿದ್ದಾರಾ..? ಈ ಅಪಾಯ ತಪ್ಪಿದ್ದಲ್ಲ, ಎಚ್ಚರ!

Share
2 Min Read
SHARE

newsics.com

ತಂತ್ರಜ್ಞಾನದ ಪರಿಣಾಮಗಳು ಹೆಚ್ಚಾಗಿ ಇಂದು ಮಕ್ಕಳು ಹಾಗೂ ಯುವಜನರ ಮೇಲೆ ಪ್ರಭಾವ ಬೀರುತ್ತಿದ್ದು, ಕಳೆದ ಕೆಲವು ದಶಕಗಳಲ್ಲಿ ಸೆಲ್‌ಫೋನ್‌ಗಳು ಮತ್ತು ವೀಡಿಯೋ ಗೇಮ್‌ಗಳಂತಹ ತಾಂತ್ರಿಕ ಆವಿಷ್ಕಾರಗಳು ಹೆಚ್ಚು ಪ್ರಚಲಿತವಾಗಿರುವುದರಿಂದ, ಯುವಜನರು ಹಾಗೂ ಮಕ್ಕಳು ಈ ಗ್ಯಾಜೆಟ್‌ಗಳಲ್ಲಿ ಹೆಚ್ಚು ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ.

ಮೊಬೈಲ್ ಫೋನ್‌ಗಳ ಹೆಚ್ಚಿನ ಬಳಕೆಯು ಯುವ ಮನಸ್ಸು ಮತ್ತು ದೇಹಗಳ ಬೆಳವಣಿಗೆಯ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ. ಮಕ್ಕಳು ಹಾಗೂ ಯುವಕರು ಒಂದು ದಿನದಲ್ಲಿ ಎಷ್ಟು ಸಮಯಗಳ ಕಾಲ ಫೋನ್ ಬಳಕೆ ಮಾಡಬಹುದು ಎಂಬ ಮಾರ್ಗಸೂಚಿಗಳಿದ್ದರೂ ಇದು ಎಷ್ಟು ಸಹಾಯಕವಾಗಿವೆ ಹಾಗೂ ಯಾರೆಲ್ಲಾ ಇದನ್ನು ಅನುಸರಿಸುತ್ತಿದ್ದಾರೆ ಎಂಬುದರ ಕುರಿತು ವೈದ್ಯರಾದ ಮಿಚೆಲ್ ಯಾಂಗ್ ಚರ್ಚಿಸಿದ್ದಾರೆ.

ಯಾಂಗ್ ಹೇಳುವಂತೆ ಹೆಚ್ಚಿನ ಯುವಜನಾಂಗ ಒಂದು ಪರಿಧಿಯನ್ನು ಮೀರಿ ಹೆಚ್ಚಿನ ಸಮಯ ಆನ್‌ಲೈನ್‌ಗಳಲ್ಲಿ ಕಳೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ದಿನಕ್ಕೆ ಎಂಟು ಗಂಟೆಗಳ ಕಾಲ ಸ್ಕ್ರೀನ್ ಟೈಮ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ ಎಂದು ಯಾಂಗ್ ಹೇಳಿದ್ದು 2015 ರಲ್ಲಿ ಶಿಫಾರಸು ಮಾಡಿರುವ ಎರಡು ಗಂಟೆಗಳಿಗಿಂತಲೂ ಅಧಿಕ ಸಮಯ ಸ್ಕ್ರೀನ್ ಟೈಮಿಂಗ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ. 8 ರಿಂದ 12 ವರ್ಷ ವಯಸ್ಸಿನ ಮಕ್ಕಳು ಸುಮಾರು 5 ½ ಗಂಟೆಗಳ ಕಾಲ ಕಳೆದರೆ, ಕೆಲವು ಯುವಕರು ತಮ್ಮ ಪೂರ್ಣ ದಿನದ ಅರ್ಧ ದಿನವನ್ನು ಮೊಬೈಲ್ ಬಳಕೆಗೆ ವಿನಿಯೋಗಿಸುತ್ತಿದ್ದಾರೆ. ಕೋವಿಡ್ -19 ಸಾಂಕ್ರಾಮಿಕದ ನಂತರ ಬಳಕೆಯು ಹೆಚ್ಚಾಗಿದೆ ಎಂದು ಯಾನ್ ಹೇಳಿದ್ದಾರೆ.

18 ವರ್ಷಕ್ಕಿಂತ ಚಿಕ್ಕವರು

ಕುಟುಂಬ ಹಾಗೂ ಸ್ನೇಹಿತರೊಂದಿಗೆ ವಿಡಿಯೋ ಚಾಟ್ ಹೊರತುಪಡಿಸಿ, ಯಾವುದೇ ಸ್ಕ್ರೀನ್ ಟೈಮ್ ಬೇಡ

18 ರಿಂದ 24 ವಯೋಮಾನದವರು

ಪೋಷಕರ ಸಾನಿಧ್ಯದಲ್ಲಿ ಉತ್ತಮ ಮಟ್ಟದ ಶೈಕ್ಷಣಿಕ ವಿಷಯಗಳಿಗಷ್ಟೇ ಮೀಸಲಿಡಿ

2 ರಿಂದ 5 ವರ್ಷ ವಯಸ್ಸಿನವರು

ದಿನಕ್ಕೆ ಒಂದು ಗಂಟೆಗಿಂತ ಹೆಚ್ಚು ಬೇಡ

5 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವರ್ಷದವರು

ದಿನಕ್ಕೆ ಎರಡು ಗಂಟೆಗಳು ಮಾತ್ರ, ಪೋಷಕರು ಅಥವಾ ಕುಟುಂಬದ ಸದಸ್ಯರೊಂದಿಗೆ ಏನು ವೀಕ್ಷಿಸಲಾಗುತ್ತಿದೆ ಎಂಬುದರ ಕುರಿತು ಸಂಭಾಷಣೆಯಲ್ಲಿ ತೊಡಗಿರುವಾಗ

ಹದಿಹರೆಯದ ಮೊದಲು ಹಾಗೂ ಹದಿಹರೆಯದವರು

ಮಾನಸಿಕ ಆರೋಗ್ಯ, ಶೈಕ್ಷಣಿಕ ಸಾಧನೆ ಮತ್ತು ಸಾಮಾಜಿಕ ಕೌಶಲ್ಯಗಳ ಮೇಲೆ ವಿವಿಧ ಪರಿಣಾಮಗಳು; ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಅಭ್ಯಾಸಗಳೊಂದಿಗೆ ಪರದೆಯ ಸಮಯವನ್ನು ಸಮತೋಲನಗೊಳಿಸುವ ಪ್ರಾಮುಖ್ಯತೆ.

ಸ್ಕ್ರೀನ್ ಟೈಮಿಂಗ್‌ನಲ್ಲಿ ಹೆತ್ತವರ ಪ್ರಾಶಸ್ತ್ಯವೇನು?

ಮಕ್ಕಳು ಮಿತಿಮೀರಿ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗಳನ್ನು ಬಳಸುತ್ತಿದ್ದಾರೆಂದರೆ ಇದಕ್ಕಿರುವ ಒಂದೇ ಪರಿಹಾರ ಸ್ಕ್ರೀನ್ ಟೈಮಿಂಗ್ ಅನ್ನು ಸೀಮಿತಗೊಳಿಸುವುದಾಗಿದೆ ಎಂದು ಯಾನ್ ಹೇಳುತ್ತಾರೆ. ಇನ್ನು ಕಿರಿಯ ಮಕ್ಕಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದಾದರೆ ಅವರನ್ನು ಆಟ, ಪಾಠ ಮೊದಲಾದ ಚಟುವಟಿಕೆಗಳನ್ನು ತೊಡಗಿಸಬೇಕು ಎಂದು ಹೇಳುತ್ತಾರೆ.

TAGGED:Are your children watching too much TV and mobile? Beware of this danger!
Share This Article
Facebook Twitter Copy Link Print
Previous Article ಸೈಟ್ ಹಂಚಿಕೆ ಹಗರಣ: ಮುಡಾ ಮಾಜಿ ಆಯುಕ್ತರಿಬ್ಬರ ವಿರುದ್ಧ ಲೋಕಾಯುಕ್ತ ಡಿಜಿಗೆ ಬಿಜೆಪಿ ದೂರು
Next Article ನಿವೇದಿತಾ ಗೌಡ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?