newsics.com
ಬಿಗ್‌ಬಾಸ್ ನಿವೇದಿತಾ ಗೌಡ ಅವರು ತಮ್ಮ ಇನ್ಸ್ಟಾದಲ್ಲಿ ಹೊಸ ಫೋಟೋ ಶೂಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಹಸಿರು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಅವರು ಗೊಂಬೆಯಂತೆ ಕಾಣಿಸುತ್ತಿದ್ದಾರೆ.
ವೈಯ್ಯಾರದಲ್ಲಿ, ಮೋಹಕವಾಗಿ ಕಾಣಿಸಿಕೊಂಡಿರುವ ನಿವೇದಿತಾ ಅವರು ಸಖತ್ ಫೋಟೋ ಶೂಟ್ ಮಾಡಿದ್ದಾರೆ. ನಿವೇದಿತಾ ಅವರ ಹೊಸ ಅವತಾರಕ್ಕೆ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ನಿವೇದಿತಾ ಅವರ ಹೊಸ ವಿಡಿಯೋ ನೋಡಿದ ನೆಟ್ಟಿಗರು ಸಾಕಷ್ಟು ಕಮೆಂಟ್ಸ್ ಸುರಿಮಳೆಗೈದಿದ್ದಾರೆ. ನಿವೇದಿತಾ ಗೌಡ ನಿಜಕ್ಕೂ ಗೊಂಬೆ. ಆ ದೇವರು ಸೌಂದರ್ಯ ಅನ್ನೋದನ್ನ್ ನಿನಗೆ ಮಾತ್ರ ಕೊಟ್ಟಿರೋ ಹಾಗೆ ಇದೆ ಎಂದು ಹೊಗಳುತ್ತಿದ್ದಾರೆ.