Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ
ಪ್ರಮುಖದೇಶಮನರಂಜನೆ

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

Share
2 Min Read
SHARE

newsics.com | ನ್ಯೂಸಿಕ್ಸ್

 

ಬೆಂಗಳೂರು: ಭಾರತದ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ ವೀಕ್ಷಕರಿಗೆ ಜಿಯೋಸ್ಟಾರ್ ಸಂಸ್ಥೆ ಬಿಗ್ ಅಪ್‌ಡೇಟ್ ಒಂದನ್ನು ನೀಡಿದೆ. ಈ ಬಾರಿ ಪ್ರಾದೇಶಿಕ ಭಾಷೆಗಳ ವೀಕ್ಷಕರು ತಮ್ಮ ನೆಚ್ಚಿನ ಶೋಗಳಿಗಾಗಿ ತಿಂಗಳುಗಟ್ಟಲೆ ಕಾಯಬೇಕಾಗಿಲ್ಲ. ಮುಂಬರುವ ಹಬ್ಬದ ಸೀಸನ್ ಅನ್ನು ಗುರಿಯಾಗಿಸಿಕೊಂಡು ಜಿಯೋಸ್ಟಾರ್ ಮಹತ್ತರ ಹೆಜ್ಜೆಯಿಟ್ಟಿದ್ದು, ಕನ್ನಡ ಸೇರಿದಂತೆ ದೇಶದ ಒಟ್ಟು 6 ಪ್ರಮುಖ ಭಾಷೆಗಳ ಬಿಗ್ ಬಾಸ್ ಆವೃತ್ತಿಗಳನ್ನು ಒಟ್ಟಿಗೆ ಕಣಕ್ಕಿಳಿಸುತ್ತಿದೆ.

 

 

ಬರುವ ಸೆಪ್ಟೆಂಬರ್ ತಿಂಗಳಿನಿಂದ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಾಂಗ್ಲಾ ಭಾಷೆಗಳ ಬಿಗ್ ಬಾಸ್ ಶೋಗಳು ಒಟ್ಟಿಗೆ ಲೈವ್ ಬರಲಿವೆ. ಜಿಯೋಸ್ಟಾರ್ ಟೆಲಿವಿಷನ್ ನೆಟ್‌ವರ್ಕ್ ಮತ್ತು ‘ಜಿಯೋಹಾಟ್‌ಸ್ಟಾರ್’ ಒಟಿಟಿ ವೇದಿಕೆಯಲ್ಲಿ ಪ್ರೇಕ್ಷಕರು ಏಕಕಾಲದಲ್ಲಿ ಈ ಎಲ್ಲ ಆವೃತ್ತಿಗಳನ್ನು ಕಣ್ಣುಂಬಿಕೊಳ್ಳಬಹುದು.

ಕನ್ನಡದ ಬಿಗ್ ಬಾಸ್ ಮನೆಯನ್ನು ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ. ಉಳಿದ ಆವೃತ್ತಿಗಳಲ್ಲಿ ಸ್ಟಾರ್ ನಟರಾದ ಸಲ್ಮಾನ್ ಖಾನ್ (ಹಿಂದಿ), ವಿಜಯ್ ಸೇತುಪತಿ (ತಮಿಳು), ನಾಗಾರ್ಜುನ (ತೆಲುಗು) ಮತ್ತು ಮೋಹನ್ ಲಾಲ್ (ಮಲಯಾಳಂ) ನಿರೂಪಕರಾಗಿ ಮುಂದುವರಿಯಲಿದ್ದಾರೆ. ಇನ್ನು ಕ್ರಿಕೆಟ್ ಅಂಗಳದ ದಾದಾ, ಮಾಜಿ ನಾಯಕ ಸೌರವ್ ಗಂಗೂಲಿ ಅವರು ಈ ಬಾರಿ ಬಾಂಗ್ಲಾ ಆವೃತ್ತಿಯ ಸಾರಥ್ಯ ವಹಿಸಿಕೊಳ್ಳುತ್ತಿರುವುದು ವಿಶೇಷ ಕುತೂಹಲ ಮೂಡಿಸಿದೆ.

ವೀಕ್ಷಣೆಯಲ್ಲಿ ದಕ್ಷಿಣ ಭಾರತವೇ ನಂಬರ್ ಒನ್

ಈ ಬಿಗ್ ಲಾಂಚ್ ಅಂಗವಾಗಿ ಜಿಯೋಸ್ಟಾರ್ ಸಂಸ್ಥೆಯು ‘ಇಂಡಿಯಾಸ್ ಬಿಗ್ ರಿಯಾಲಿಟಿ’ ಹೆಸರಿನ ವಿಶೇಷ ಪುಸ್ತಕವನ್ನು ಹೊರತಂದಿದ್ದು, ಶೋನ ಯಶಸ್ಸಿನ ಗ್ರಾಫ್ ಅನ್ನು ಅನಾವರಣಗೊಳಿಸಿದೆ.

  • ವೀಕ್ಷಕರ ದಾಖಲೆ: ಕಳೆದ 2025ರ ಸೀಸನ್ ಒಂದರಲ್ಲೇ ಬಿಗ್ ಬಾಸ್ ಬರೋಬ್ಬರಿ 50 ಕೋಟಿಗೂ ಅಧಿಕ ಜನರನ್ನು ತಲುಪಿದೆ. ಇದರಲ್ಲಿ ದಕ್ಷಿಣ ಭಾರತದ ಕೊಡುಗೆಯೇ ಸಿಂಹಪಾಲು (30 ಕೋಟಿಗೂ ಹೆಚ್ಚು ವೀಕ್ಷಕರು). ಇಲ್ಲಿನ ಪ್ರತಿ 10 ಟಿವಿ ವೀಕ್ಷಕರಲ್ಲಿ 8 ಜನ ಬಿಗ್ ಬಾಸ್ ವೀಕ್ಷಿಸುತ್ತಿದ್ದು, ಇದು ದಕ್ಷಿಣದ ಇತರ ರಿಯಾಲಿಟಿ ಶೋಗಳ ಒಟ್ಟು ವೀಕ್ಷಣೆಗಿಂತ 3.5 ಪಟ್ಟು ಜಾಸ್ತಿಯಾಗಿದೆ.
  • ಲೈವ್ ಫೀಡ್ ಕ್ರೇಜ್: ಶೇಕಡಾ 60 ರಷ್ಟು ಒಟಿಟಿ ವೀಕ್ಷಕರು ದಿನದ 24 ಗಂಟೆಯೂ ಮನೆಯ ಒಳಗಿನ ವಿದ್ಯಮಾನಗಳನ್ನು ನೇರವಾಗಿ (Live Feed) ನೋಡುತ್ತಿದ್ದಾರೆ.
  • ಸೋಶಿಯಲ್ ಮೀಡಿಯಾ ಟ್ರೆಂಡ್: 2025ರಲ್ಲಿ ಈ ಶೋ 1.7 ಬಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, 3 ಕೋಟಿಗೂ ಅಧಿಕ ಮೀಮ್ಸ್‌ಗಳು ಸೃಷ್ಟಿಯಾಗಿವೆ.

ವರದಿಯ ಪ್ರಕಾರ, 2025ರ ಸೀಸನ್‌ನಲ್ಲಿ ವಿಭಿನ್ನ ಕ್ಷೇತ್ರಗಳ 625ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು ಬಿಗ್ ಬಾಸ್ ಜೊತೆ ಕೈಜೋಡಿಸಿದ್ದವು. ಇದರಲ್ಲಿ 49 ಹೊಸ ಉದ್ಯಮಗಳೂ ಸೇರಿದ್ದವು. ಶೋನಲ್ಲಿ ಜಾಹೀರಾತು ನೀಡಿದ ಕಂಪನಿಗಳ ಮಾರುಕಟ್ಟೆ ಮೌಲ್ಯ ಹಾಗೂ ಮಾರಾಟದ ಪ್ರಮಾಣದಲ್ಲಿ ಗಣನೀಯ ಪ್ರಗತಿಯಾಗಿದೆ ಎಂದು ಜಿಯೋಸ್ಟಾರ್ ತಿಳಿಸಿದೆ.

 

First Dengue Vaccine ಡೆಂಗ್ಯೂ ಕಾಟಕ್ಕೆ ಇನ್ಮುಂದೆ ಗುಡ್‌ಬೈ; ದೇಶದ ಮೊದಲ ‘QDENGA’ ಲಸಿಕೆಗೆ ಡಿಸಿಜಿಐ ಗ್ರೀನ್ ಸಿಗ್ನಲ್

TAGGED:#Bigg Boss #Six languages #September #news #newsics
Share This Article
Facebook Twitter Copy Link Print
Previous Article Harassment Case ಮಹಿಳಾ IPS ಅಧಿಕಾರಿಗೆ ಟಾರ್ಚರ್..! ಮೈಮೇಲೆ ಕಾಂಡೋಮ್ ಎಸೆದು ಬ್ಲ್ಯಾಕ್‌ಮೇಲ್ ಮಾಡಿದ ಸಹೋದ್ಯೋಗಿ
Next Article Puri Jaganath ಪುರಿ ಜಗನ್ನಾಥನ ಪ್ರಸಾದ ಆನ್‌ಲೈನ್‌ನಲ್ಲಿ ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದೀರಾ? ಸೈಬರ್ ವಂಚಕರ ಬಗ್ಗೆ ಇರಲಿ ಎಚ್ಚರ

Popular Posts

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

Gold Price ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ವಿವರ ಇಲ್ಲಿದೆ

1 Min Read

You Might Also Like

ದೇಶಪ್ರಮುಖ

Indian Navy Upgrade | INS ಮಾಲ್ವನ್ ನಾಳೆ ಭಾರತೀಯ ನೌಕಾಪಡೆಗೆ ಸೇರ್ಪಡೆ: ಸಮುದ್ರ ಭದ್ರತೆಗೆ ಮತ್ತೊಂದು ಸ್ವದೇಶಿ ಶಕ್ತಿ

2 Min Read
ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read
ಕರ್ನಾಟಕಪ್ರಮುಖ

Karnataka weather Report | ಜುಲೈ 25ರವರೆಗೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್: ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ, ಐಎಂಡಿ ಮುನ್ಸೂಚನೆ

2 Min Read
ಕರ್ನಾಟಕಪ್ರಮುಖ

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?