Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Free HPV Vaccine ಸರ್ಕಾರದಿಂದ ಮಹತ್ವದ ಹೆಜ್ಜೆ;14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಆರಂಭ
ಪ್ರಮುಖಆರೋಗ್ಯ

Free HPV Vaccine ಸರ್ಕಾರದಿಂದ ಮಹತ್ವದ ಹೆಜ್ಜೆ;14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಆರಂಭ

Share
2 Min Read
SHARE

newsics.com | ನ್ಯೂಸಿಕ್ಸ್

Contents
ಬಡ ಮತ್ತು ಮಧ್ಯಮ ವರ್ಗದವರಿಗೂ ಸಿಗಲಿದೆ ಉಚಿತ ಸುರಕ್ಷತೆಗರ್ಭಕಂಠದ ಕ್ಯಾನ್ಸರ್‌ಗೆ ಮುಖ್ಯ ಕಾರಣಗಳೇನು?ಪೋಷಕರಲ್ಲಿ ಆರೋಗ್ಯ ಇಲಾಖೆಯ ಮನವಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆತಂಕದ ನಡುವೆ ಕೊಂಚ ಮರೆಯಾಗಿದ್ದ ಮಹಾಮಾರಿ ಕ್ಯಾನ್ಸರ್, ಇದೀಗ ಮಹಿಳೆಯರ ಆರೋಗ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಹದಿಹರೆಯದಿಂದ ಹಿಡಿದು ಮಧ್ಯವಯಸ್ಸಿನ ಹೆಣ್ಣುಮಕ್ಕಳನ್ನು ಕಾಡುತ್ತಿರುವ ‘ಗರ್ಭಕಂಠ ಕ್ಯಾನ್ಸರ್’ (Cervical Cancer) ತಡೆಗಟ್ಟಲು ರಾಜ್ಯ ಆರೋಗ್ಯ ಇಲಾಖೆಯು ಮಹತ್ವದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಇದರ ಅಂಗವಾಗಿ 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತವಾಗಿ ಎಚ್‌ಪಿವಿ (HPV) ಲಸಿಕೆ ನೀಡುವ ಬೃಹತ್ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.

ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಇತ್ತೀಚಿನ ದಿನಗಳಲ್ಲಿ ಈ ಲಸಿಕೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಸಿಕೆ ಪಡೆಯಲು ಆಸಕ್ತಿ ತೋರುತ್ತಿರುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಶೇ 50 ರಷ್ಟು ಭಾರಿ ಹೆಚ್ಚಳ ಕಂಡುಬಂದಿದೆ.

ಬಡ ಮತ್ತು ಮಧ್ಯಮ ವರ್ಗದವರಿಗೂ ಸಿಗಲಿದೆ ಉಚಿತ ಸುರಕ್ಷತೆ

ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಯನ್ನು ಪಡೆಯಲು ಕನಿಷ್ಠ 3,000 ರಿಂದ 5,000 ರೂಪಾಯಿಗಳವರೆಗೆ ಭಾರಿ ವೆಚ್ಚ ಭರಿಸಬೇಕಾಗಿತ್ತು. ಹಣದ ಕೊರತೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಹೆಣ್ಣುಮಕ್ಕಳಿಗೆ ಲಸಿಕೆ ಸಿಗದೆ, ರೋಗದ ಭೀತಿಯಲ್ಲಿ ಬದುಕಬೇಕಾದ ಪರಿಸ್ಥಿತಿ ಇತ್ತು.

ಇದೀಗ ರಾಜ್ಯದ ಸ್ತ್ರೀರೋಗ ತಜ್ಞರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಸರ್ಕಾರ, ಉಚಿತ ವ್ಯಾಕ್ಸಿನ್ ಅಭಿಯಾನ ಆರಂಭಿಸಿದೆ. ಈ ಯೋಜನೆಗೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತರಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಗರ್ಭಕಂಠದ ಕ್ಯಾನ್ಸರ್‌ಗೆ ಮುಖ್ಯ ಕಾರಣಗಳೇನು?

ಯುವತಿಯರು ಹಾಗೂ ಮಹಿಳೆಯರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳಲು ವೈದ್ಯಕೀಯ ವಲಯ ಈ ಕೆಳಗಿನ ಪ್ರಮುಖ ಕಾರಣಗಳನ್ನು ಗುರುತಿಸಿದೆ:

  • ಬದಲಾದ ಹವ್ಯಾಸಗಳು: ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚುತ್ತಿರುವ ಧೂಮಪಾನ ಹಾಗೂ ಮದ್ಯಪಾನದ ಅಭ್ಯಾಸ.
  • ಆಧುನಿಕ ಜೀವನಶೈಲಿ: ಪಾಶ್ಚಾತ್ಯ ಹಾಗೂ ಬದಲಾದ ನವೀನ ಜೀವನಶೈಲಿ.
  • ಲೈಂಗಿಕ ನಡವಳಿಕೆ: ಅತಿಯಾದ ಲೈಂಗಿಕತೆ ಮತ್ತು ಗರ್ಭನಿರೋಧಕಗಳ ಅಸಮರ್ಪಕ ಬಳಕೆ.
  • ಋತುಚಕ್ರದ ವ್ಯತ್ಯಾಸ: ಅತಿ ಬೇಗನೇ ಪ್ರಾಯಕ್ಕೆ ಬರುವುದು ಅಥವಾ ತಡವಾಗಿ ಋತುಬಂಧ (Menopause) ತಲುಪುವುದು.
  • ಹಾರ್ಮೋನ್ ಬದಲಾವಣೆ: ದೇಹದಲ್ಲಿ ಉಂಟಾಗುವ ಹಾರ್ಮೋನು ಏರುಪೇರುಗಳ ಚಿಕಿತ್ಸೆಗಳು ಹಾಗೂ ಸಂತಾನೋತ್ಪತ್ತಿಯ ನಾನಾ ಶಾರೀರಿಕ ಅಂಶಗಳು.

ಪೋಷಕರಲ್ಲಿ ಆರೋಗ್ಯ ಇಲಾಖೆಯ ಮನವಿ

ಈ ಮಾರಕ ರೋಗ ಬರದಂತೆ ತಡೆಯಲು ಲಸಿಕೆಯೊಂದೇ ಸದ್ಯಕ್ಕಿರುವ ಅತ್ಯಂತ ಸುರಕ್ಷಿತ ಮಾರ್ಗವಾಗಿದೆ. ಹೀಗಾಗಿ, ಅರ್ಹ ಹೆಣ್ಣುಮಕ್ಕಳ ಪೋಷಕರು ಯಾವುದೇ ಹಿಂಜರಿಕೆಯಿಲ್ಲದೆ ಸರ್ಕಾರದ ಈ ಉಚಿತ ಲಸಿಕಾ ಅಭಿಯಾನದ ಪ್ರಯೋಜನ ಪಡೆದುಕೊಂಡು, ತಮ್ಮ ಮಕ್ಕಳ ಆರೋಗ್ಯವನ್ನು ಸುರಕ್ಷಿತವಾಗಿಸಬೇಕೆಂದು ಆರೋಗ್ಯ ಇಲಾಖೆ ಕೋರಿದೆ.

Avoid These Drinks If You Have These Health Conditions ಇಂತಹ ಆರೋಗ್ಯ ಸಮಸ್ಯೆಗಳಿದ್ರೆ ಈ ಪಾನೀಯಗಳನ್ನ ಕುಡಿಯಬೇಡಿ! ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಮುಖ್ಯ ಸಲಹೆಗಳು

TAGGED:#HPV Vaccine #Cervical Cancer #Campaign #news #newsics
Share This Article
Facebook Twitter Copy Link Print
Previous Article Dharmasthala Case ಧರ್ಮಸ್ಥಳ ಬುರುಡೆ ಪ್ರಕರಣ; ಬೆಳ್ತಂಗಡಿ ಕೋರ್ಟ್‌ಗೆ 7,005 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ SIT
Next Article Rice Testing ನೀವು ಸೇವಿಸುವ ಅಕ್ಕಿ ಪ್ಲಾಸ್ಟಿಕ್ ಇರಬಹುದು ಎಚ್ಚರ! ಅಸಲಿ-ನಕಲಿ ಪತ್ತೆ ಹಚ್ಚಲು ಮನೆಯಲ್ಲೇ ಮಾಡಿ ಈ 3 ಸಿಂಪಲ್ ಟೆಸ್ಟ್

Popular Posts

Staff Suspended ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡ ಪ್ರಕರಣ: 8 ಅಧಿಕಾರಿಗಳು ಸಸ್ಪೆಂಡ್

2 Min Read

Aloo Bonda ಅಮೆರಿಕಾದಲ್ಲಿ ನಮ್ಮ ಆಲೂಬೋಂಡಾ ಹವಾ; ‘ಮಾಸ್ಟರ್‌ಷೆಫ್’​ನಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಭಾರತದ ಯುವತಿ

1 Min Read

Kollywood ಜುಲೈ 23ರಂದು ವಿಶ್ವದಾದ್ಯಂತ ‘ಜನನಾಯಗನ್’ ಗ್ರ್ಯಾಂಡ್‌ ರಿಲೀಸ್

2 Min Read

Supreme Court ಅತ್ಯಾಚಾ*ರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ

2 Min Read

You Might Also Like

ಪ್ರಮುಖಆರೋಗ್ಯ

Rice Testing ನೀವು ಸೇವಿಸುವ ಅಕ್ಕಿ ಪ್ಲಾಸ್ಟಿಕ್ ಇರಬಹುದು ಎಚ್ಚರ! ಅಸಲಿ-ನಕಲಿ ಪತ್ತೆ ಹಚ್ಚಲು ಮನೆಯಲ್ಲೇ ಮಾಡಿ ಈ 3 ಸಿಂಪಲ್ ಟೆಸ್ಟ್

2 Min Read
ಪ್ರಮುಖCrimeಕರ್ನಾಟಕ

Dharmasthala Case ಧರ್ಮಸ್ಥಳ ಬುರುಡೆ ಪ್ರಕರಣ; ಬೆಳ್ತಂಗಡಿ ಕೋರ್ಟ್‌ಗೆ 7,005 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ SIT

2 Min Read
ಪ್ರಮುಖದೇಶವೈರಲ್

Viral Video ಮನುಷ್ಯತ್ವ ಅಂದ್ರೆ ಇದೇ ಅಲ್ವಾ? ಬೀದಿ ನಾಯಿಗೆ ಗಾಳಿ ಬೀಸಿದ ವೃದ್ಧ- ವಿಡಿಯೋ ನೋಡಿ

1 Min Read
ಪ್ರಮುಖದೇಶ

IRCTC Booking ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಐಆರ್‌ಸಿಟಿಸಿ ಹೊಸ ವೆಬ್‌ಸೈಟ್ ಲೋಕಾರ್ಪಣೆ; ಇನ್ಮುಂದೆ ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಸಾಧ್ಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?