Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Supreme Court ಅತ್ಯಾಚಾ*ರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ
ಪ್ರಮುಖCrimeದೇಶ

Supreme Court ಅತ್ಯಾಚಾ*ರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ

Share
2 Min Read
SHARE

newsics.com | ನ್ಯೂಸಿಕ್ಸ್

Contents
ಕೋರ್ಟ್ ಮತ್ತು ಪೊಲೀಸರಿಗೆ ಹೊಸ ರೂಲ್ಸ್ಏನಿದು ವಿವಾದಾತ್ಮಕ ಕೇಸ್?

ನವದೆಹಲಿ: ಮಹಿಳೆಯ ಸಲ್ವಾರ್ ಎಳೆಯಲು ಯತ್ನಿಸುವುದು ಮತ್ತು ಎದೆಯನ್ನು ಮುಟ್ಟುವುದು “ಅತ್ಯಾಚಾರ ಯತ್ನ” ಎಂದು ಒಪ್ಪಲು ಸಾಧ್ಯವಿಲ್ಲ ಎನ್ನುವ ಪಾಟ್ನಾ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ತೀರ್ಪು ಕೊಡುವ ಮುನ್ನ ನ್ಯಾಯಾಧೀಶರಿಗೆ ಕನಿಷ್ಠ ಕಾನೂನು ಅಧ್ಯಯನ ಮತ್ತು ಸಂವೇದನಾಶೀಲತೆ ಇರಬೇಕು ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ. ಹಿರಿಯ ವಕೀಲರಾದ ಶೋಭಾ ಗುಪ್ತಾ ಅವರು ಹೈಕೋರ್ಟ್‌ನ ಈ ವಿಲಕ್ಷಣ ಆದೇಶವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದಾಗ ನ್ಯಾಯಾಲಯವು ಈ ಪ್ರತಿಕ್ರಿಯೆ ನೀಡಿದೆ.

ಈ ವೇಳೆ ಅಸಮಾಧಾನ ಹೊರಹಾಕಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, “ಇತ್ತೀಚಿನ ದಿನಗಳಲ್ಲಿ ಇಂತಹ ಮಹತ್ವದ ತೀರ್ಪುಗಳನ್ನು ಕೊಡುವ ಮುನ್ನ ಸರಿಯಾದ ಸಂಶೋಧನೆಗಳೇ ನಡೆಯುತ್ತಿಲ್ಲ. ಇಲಾಖೆಯ ಸಿಬ್ಬಂದಿಯೂ ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ” ಎಂದರಲ್ಲದೆ, ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ಆದೇಶ ಹೊರಡಿಸುವುದಾಗಿ ತಿಳಿಸಿದರು.

ಕೋರ್ಟ್ ಮತ್ತು ಪೊಲೀಸರಿಗೆ ಹೊಸ ರೂಲ್ಸ್

ಇದೇ ವೇಳೆ ಲೈಂಗಿಕ ಅಪರಾಧಗಳ ತನಿಖೆ ಮತ್ತು ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

  • ನ್ಯಾಯಾಲಯಗಳಿಗೆ ಕಡ್ಡಾಯ: ದೇಶದ ಎಲ್ಲಾ ಕೋರ್ಟ್‌ಗಳು ಇಂತಹ ಕೇಸ್‌ಗಳ ವಿಚಾರಣೆ ನಡೆಸುವಾಗ ಮತ್ತು ತೀರ್ಪು ಬರೆಯುವಾಗ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಸಿದ್ಧಪಡಿಸಿರುವ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು.
  • ಪೊಲೀಸರಿಗೂ ಅನ್ವಯ: ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸುವಾಗ ಹಾಗೂ ಚಾರ್ಜ್‌ಶೀಟ್ ಸಲ್ಲಿಸುವಾಗ ಪೊಲೀಸರು ಕೂಡ ಇದೇ ಮಾರ್ಗಸೂಚಿಗಳನ್ನು ಅನುಸರಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ.

ಏನಿದು ವಿವಾದಾತ್ಮಕ ಕೇಸ್?

2008 ರಲ್ಲಿ ಬಿಹಾರದ ಫೋಟೋ ಸ್ಟುಡಿಯೋ ಒಂದರಲ್ಲಿ ಯುವತಿಯೊಬ್ಬಳ ತಂದೆಯನ್ನು ಹೊರಗೆ ಕಳುಹಿಸಿ, ಮಾಲೀಕ ಒಳಗಿನಿಂದ ಬಾಗಿಲು ಹಾಕಿ ಆಕೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದನು. ಈ ಕೇಸ್‌ನಲ್ಲಿ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಪಾಟ್ನಾ ಹೈಕೋರ್ಟ್ ಅತ್ಯಾಚಾರಕ್ಕೆ ನೇರ ಯತ್ನ ನಡೆದಿದೆ ಎಂದು ತೋರಿಸಲು ಬಲವಾದ ಪುರಾವೆಗಳಿಲ್ಲ ಎಂದು ಹೇಳಿತ್ತು. ಅಲ್ಲದೆ, ಬಟ್ಟೆ ಎಳೆಯಲು ಯತ್ನಿಸುವುದು ಹಾಗೂ ಎದೆ ಮುಟ್ಟುವುದು ಅತ್ಯಾಚಾರ ಯತ್ನ ಎನ್ನಲು ಬರುವುದಿಲ್ಲ ಎಂದು ಹೇಳಿ ಆರೋಪಿಯನ್ನು ಬಿಡುಗಡೆ ಮಾಡಿತ್ತು.

ಹೈಕೋರ್ಟ್‌ನ ಈ ವಿಚಿತ್ರ ವಾದಕ್ಕೆ ಈಗ ಸುಪ್ರೀಂ ಕೋರ್ಟ್ ಕಠಿಣ ಎಚ್ಚರಿಕೆ ನೀಡಿದ್ದು, ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

IRCTC Booking ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಐಆರ್‌ಸಿಟಿಸಿ ಹೊಸ ವೆಬ್‌ಸೈಟ್ ಲೋಕಾರ್ಪಣೆ; ಇನ್ಮುಂದೆ ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಸಾಧ್ಯ https://www.newsics.com/2026/07/15/irctc-new-website-railway-ticket-bookin/

TAGGED:#Harassment #Supreme Court #Patna High Court #Judgment #news #newsics
Share This Article
Facebook Twitter Copy Link Print
Previous Article Rice Testing ನೀವು ಸೇವಿಸುವ ಅಕ್ಕಿ ಪ್ಲಾಸ್ಟಿಕ್ ಇರಬಹುದು ಎಚ್ಚರ! ಅಸಲಿ-ನಕಲಿ ಪತ್ತೆ ಹಚ್ಚಲು ಮನೆಯಲ್ಲೇ ಮಾಡಿ ಈ 3 ಸಿಂಪಲ್ ಟೆಸ್ಟ್
Next Article Kollywood ಜುಲೈ 23ರಂದು ವಿಶ್ವದಾದ್ಯಂತ ‘ಜನನಾಯಗನ್’ ಗ್ರ್ಯಾಂಡ್‌ ರಿಲೀಸ್

Popular Posts

Staff Suspended ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡ ಪ್ರಕರಣ: 8 ಅಧಿಕಾರಿಗಳು ಸಸ್ಪೆಂಡ್

2 Min Read

Aloo Bonda ಅಮೆರಿಕಾದಲ್ಲಿ ನಮ್ಮ ಆಲೂಬೋಂಡಾ ಹವಾ; ‘ಮಾಸ್ಟರ್‌ಷೆಫ್’​ನಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಭಾರತದ ಯುವತಿ

1 Min Read

Kollywood ಜುಲೈ 23ರಂದು ವಿಶ್ವದಾದ್ಯಂತ ‘ಜನನಾಯಗನ್’ ಗ್ರ್ಯಾಂಡ್‌ ರಿಲೀಸ್

2 Min Read

Supreme Court ಅತ್ಯಾಚಾ*ರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ

2 Min Read

You Might Also Like

ಪ್ರಮುಖಆರೋಗ್ಯ

Rice Testing ನೀವು ಸೇವಿಸುವ ಅಕ್ಕಿ ಪ್ಲಾಸ್ಟಿಕ್ ಇರಬಹುದು ಎಚ್ಚರ! ಅಸಲಿ-ನಕಲಿ ಪತ್ತೆ ಹಚ್ಚಲು ಮನೆಯಲ್ಲೇ ಮಾಡಿ ಈ 3 ಸಿಂಪಲ್ ಟೆಸ್ಟ್

2 Min Read
ಪ್ರಮುಖಆರೋಗ್ಯ

Free HPV Vaccine ಸರ್ಕಾರದಿಂದ ಮಹತ್ವದ ಹೆಜ್ಜೆ;14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಆರಂಭ

2 Min Read
ಪ್ರಮುಖCrimeಕರ್ನಾಟಕ

Dharmasthala Case ಧರ್ಮಸ್ಥಳ ಬುರುಡೆ ಪ್ರಕರಣ; ಬೆಳ್ತಂಗಡಿ ಕೋರ್ಟ್‌ಗೆ 7,005 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ SIT

2 Min Read
ಪ್ರಮುಖದೇಶವೈರಲ್

Viral Video ಮನುಷ್ಯತ್ವ ಅಂದ್ರೆ ಇದೇ ಅಲ್ವಾ? ಬೀದಿ ನಾಯಿಗೆ ಗಾಳಿ ಬೀಸಿದ ವೃದ್ಧ- ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?