Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Dharmasthala Case ಧರ್ಮಸ್ಥಳ ಬುರುಡೆ ಪ್ರಕರಣ; ಬೆಳ್ತಂಗಡಿ ಕೋರ್ಟ್‌ಗೆ 7,005 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ SIT
ಪ್ರಮುಖCrimeಕರ್ನಾಟಕ

Dharmasthala Case ಧರ್ಮಸ್ಥಳ ಬುರುಡೆ ಪ್ರಕರಣ; ಬೆಳ್ತಂಗಡಿ ಕೋರ್ಟ್‌ಗೆ 7,005 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ SIT

Share
2 Min Read
SHARE

newsics.com | ನ್ಯೂಸಿಕ್ಸ್

ಬೆಳ್ತಂಗಡಿ: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಪೊಲೀಸ್ ಠಾಣೆಯ ‘ಬುರುಡೆ ಷಡ್ಯಂತ್ರ’ ಪ್ರಕರಣದ (ಮೊಕದ್ದಮೆ ಸಂಖ್ಯೆ: 39/2025) ಸುದೀರ್ಘ ತನಿಖೆಯನ್ನು ಪೂರ್ಣಗೊಳಿಸಿರುವ ವಿಶೇಷ ತನಿಖಾ ದಳವು (SIT), ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಬರೋಬ್ಬರಿ 7,005 ಪುಟಗಳ ಬೃಹತ್ ಅಂತಿಮ ತನಿಖಾ ವರದಿಯನ್ನು ಹಸ್ತಾಂತರಿಸಿದೆ.

ಪ್ರಕರಣದ ಸತ್ಯಾಸತ್ಯತೆಯನ್ನು ಹೊರಗೆಳೆಯಲು ಹಗಲಿರುಳು ಶ್ರಮಿಸಿದ ಎಸ್‌ಐಟಿ ಅಧಿಕಾರಿಗಳ ತಂಡವು, ಇಂದು ಮಧ್ಯಾಹ್ನ ನಿಖರವಾಗಿ 3 ಗಂಟೆಗೆ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಶಾಂಕ್ ನಾಗೇಂದ್ರ ಭಟ್ ಅವರ ಮುಂದೆ ಹಾಜರಾಗಿ ಒಟ್ಟು 12 ಬೃಹತ್ ಕಡತಗಳಲ್ಲಡಗಿರುವ ಸಮಗ್ರ ಚಾರ್ಜ್ ಶೀಟ್ ಅನ್ನು ಅಧಿಕೃತವಾಗಿ ಸಲ್ಲಿಕೆ ಮಾಡಿದೆ.

ಈ ಹಿಂದೆ ಎಸ್‌ಐಟಿ ಸಲ್ಲಿಸಿದ್ದ 3,923 ಪುಟಗಳ ಪ್ರಾಥಮಿಕ ವರದಿ ಹಾಗೂ ಪ್ರಸ್ತುತ ಸಿದ್ಧಪಡಿಸಲಾದ ಹೆಚ್ಚುವರಿ 3,082 ಪುಟಗಳ ತನಿಖಾ ವರದಿಯನ್ನು ಕ್ರೋಢೀಕರಿಸಿ ಈ ಬೃಹತ್ ಅಂತಿಮ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಕಳೆದ ವರ್ಷದ ನವೆಂಬರ್ 20 ರಂದು ಸುಳ್ಳು ಸಾಕ್ಷ್ಯ ನುಡಿದ (Perjury) ಆರೋಪದ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 215 ರ ಅನ್ವಯ ಎಸ್‌ಐಟಿ ನ್ಯಾಯಾಲಯಕ್ಕೆ ಮಹತ್ವದ ವರದಿಯನ್ನು ಒಪ್ಪಿಸಿತ್ತು. ಆ ಸುಳ್ಳು ಸಾಕ್ಷ್ಯ ಮತ್ತು ಹುನ್ನಾರದ ಹಿಂದಿದ್ದ ವ್ಯವಸ್ಥಿತ ಪ್ಲಾನ್ ಬಗ್ಗೆ ಈಗ ಎಸ್‌ಐಟಿ ಎಳೆಎಳೆಯಾಗಿ ನ್ಯಾಯಾಲಯಕ್ಕೆ ವಿವರಣೆ ನೀಡಿದೆ.

ಈ ಹಗರಣ ಹಾಗೂ ಸುಳ್ಳು ಹರಡುವಿಕೆಯ ಪ್ರಕರಣದಲ್ಲಿ ಒಟ್ಟು ಆರು ಪ್ರಮುಖ ವ್ಯಕ್ತಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿದ್ದು, ಅವರ ಪಟ್ಟಿ ಇಂತಿದೆ:

  1. ಸಿ.ಎನ್. ಚಿನ್ನಯ್ಯ (ಮಾಜಿ ಮಾಸ್ಕ್ ಮ್ಯಾನ್ ಹಾಗೂ ಮುಖ್ಯ ಆರೋಪಿ)
  2. ಮಹೇಶ್ ಶೆಟ್ಟಿ ತಿಮರೋಡಿ
  3. ಗಿರೀಶ್ ಮಟ್ಟಣ್ಣವರ್
  4. ಜಯಂತ್ ಟಿ.
  5. ವಿಠಲ್ ಗೌಡ
  6. ಸುಜಾತಾ ಭಟ್

ನ್ಯಾಯಾಲಯದಲ್ಲಿ ಗಣ್ಯ ಅಧಿಕಾರಿಗಳು ಹಾಗೂ ಆರೋಪಿ ಹಾಜರು

ಬೆಳ್ತಂಗಡಿ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗುವ ಸಂದರ್ಭದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ದಂಡೇ ನೆರೆದಿತ್ತು:

  • ಎಸ್‌ಐಟಿ ಪೊಲೀಸ್ ವರಿಷ್ಠಾಧಿಕಾರಿ (SP) ಸಿ.ಎ. ಸೈಮನ್
  • ಇನ್ಸ್‌ಪೆಕ್ಟರ್‌ಗಳಾದ ಕುಸುಮಾಧರ್, ಮಂಜುನಾಥ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
  • ಇವರೊಂದಿಗೆ ಪ್ರಕರಣದ ಮೊದಲನೇ ಆರೋಪಿಯಾಗಿರುವ ಮಾಜಿ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಕೂಡ ಬಿಗಿ ಭದ್ರತೆಯಲ್ಲಿ ಕೋರ್ಟ್ ಕಲಾಪಕ್ಕೆ ಹಾಜರುಪಡಿಸಲಾಗಿತ್ತು.

ಹಿನ್ನೆಲೆ: 2025ರ ಆಗಸ್ಟ್ 23 ರಂದು ಸುಳ್ಳು ಪುರಾವೆಗಳನ್ನು ಸೃಷ್ಟಿಸಿ, ದಾರಿ ತಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಮುಖ್ಯ ಆರೋಪಿ ಚಿನ್ನಯ್ಯನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು. ಅಲ್ಲಿಂದ ಆರಂಭವಾದ ಈ ತನಿಖಾ ಪ್ರಕ್ರಿಯೆ ಇದೀಗ ಅಂತಿಮ ಚಾರ್ಜ್ ಶೀಟ್ ಸಲ್ಲಿಕೆಯೊಂದಿಗೆ ಕಾನೂನು ಸಮರದ ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ.

 

Saved cub elephant ದಾರಿ ತಪ್ಪಿ ಬಂದು ಇಂಗು ಗುಂಡಿಗೆ ಬಿದ್ದ ಮರಿಯಾನೆ‌ ಬಚಾವ್ ಮಾಡಿದ ತಾಯಿ!

TAGGED:#Dharmasthala #SIT Chargesheet #Investigation #news #newsics
Share This Article
Facebook Twitter Copy Link Print
Previous Article Viral Video ಮನುಷ್ಯತ್ವ ಅಂದ್ರೆ ಇದೇ ಅಲ್ವಾ? ಬೀದಿ ನಾಯಿಗೆ ಗಾಳಿ ಬೀಸಿದ ವೃದ್ಧ- ವಿಡಿಯೋ ನೋಡಿ
Next Article Free HPV Vaccine ಸರ್ಕಾರದಿಂದ ಮಹತ್ವದ ಹೆಜ್ಜೆ;14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಆರಂಭ

Popular Posts

Kollywood ಜುಲೈ 23ರಂದು ವಿಶ್ವದಾದ್ಯಂತ ‘ಜನನಾಯಗನ್’ ಗ್ರ್ಯಾಂಡ್‌ ರಿಲೀಸ್

2 Min Read

Supreme Court ಅತ್ಯಾಚಾ*ರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ

2 Min Read

Rice Testing ನೀವು ಸೇವಿಸುವ ಅಕ್ಕಿ ಪ್ಲಾಸ್ಟಿಕ್ ಇರಬಹುದು ಎಚ್ಚರ! ಅಸಲಿ-ನಕಲಿ ಪತ್ತೆ ಹಚ್ಚಲು ಮನೆಯಲ್ಲೇ ಮಾಡಿ ಈ 3 ಸಿಂಪಲ್ ಟೆಸ್ಟ್

2 Min Read

Free HPV Vaccine ಸರ್ಕಾರದಿಂದ ಮಹತ್ವದ ಹೆಜ್ಜೆ;14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಆರಂಭ

2 Min Read

You Might Also Like

ಪ್ರಮುಖದೇಶವೈರಲ್

Viral Video ಮನುಷ್ಯತ್ವ ಅಂದ್ರೆ ಇದೇ ಅಲ್ವಾ? ಬೀದಿ ನಾಯಿಗೆ ಗಾಳಿ ಬೀಸಿದ ವೃದ್ಧ- ವಿಡಿಯೋ ನೋಡಿ

1 Min Read
ಪ್ರಮುಖದೇಶ

IRCTC Booking ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಐಆರ್‌ಸಿಟಿಸಿ ಹೊಸ ವೆಬ್‌ಸೈಟ್ ಲೋಕಾರ್ಪಣೆ; ಇನ್ಮುಂದೆ ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಸಾಧ್ಯ

2 Min Read
ಕರ್ನಾಟಕಪ್ರಮುಖವೈರಲ್

Attempted theft in the bus ಬಸ್ ಕಂಡಕ್ಟರ್ ಕ್ಯಾಶ್ ಬ್ಯಾಗ್ ಎಗರಿಸಲು ಯತ್ನಿಸಿ ಲಾಕ್ ಆದ ಖತರ್ನಾಕ್ ಮಹಿಳೆ! ವಿಡಿಯೋ ನೋಡಿ

2 Min Read
ಕರ್ನಾಟಕಪ್ರಮುಖ

Saved cub elephant ದಾರಿ ತಪ್ಪಿ ಬಂದು ಇಂಗು ಗುಂಡಿಗೆ ಬಿದ್ದ ಮರಿಯಾನೆ‌ ಬಚಾವ್ ಮಾಡಿದ ತಾಯಿ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?