Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Attempted theft in the bus ಬಸ್ ಕಂಡಕ್ಟರ್ ಕ್ಯಾಶ್ ಬ್ಯಾಗ್ ಎಗರಿಸಲು ಯತ್ನಿಸಿ ಲಾಕ್ ಆದ ಖತರ್ನಾಕ್ ಮಹಿಳೆ! ವಿಡಿಯೋ ನೋಡಿ
ಕರ್ನಾಟಕಪ್ರಮುಖವೈರಲ್

Attempted theft in the bus ಬಸ್ ಕಂಡಕ್ಟರ್ ಕ್ಯಾಶ್ ಬ್ಯಾಗ್ ಎಗರಿಸಲು ಯತ್ನಿಸಿ ಲಾಕ್ ಆದ ಖತರ್ನಾಕ್ ಮಹಿಳೆ! ವಿಡಿಯೋ ನೋಡಿ

Share
2 Min Read
SHARE

newsics.com | ನ್ಯೂಸಿಕ್ಸ್

ಇಲ್ಲೊಬ್ಬ ಚಾಲಾಕಿ ಮಹಿಳೆ ಬಿಎಂಟಿ ಬಸ್ ಕಂಡಕ್ಟರ್‌ ಟಿಕೆಟ್ ಬ್ಯಾಗ್‌ನ್ನೇ ಕದ್ದು ತಗಲಾಕಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಬಸ್‌ ಚಾಲಕ ಮಾತ್ರ ಪೊಲೀಸರು ಬರುವವರೆಗೂ ಬಸ್ ಬಾಗಿಲು ತೆಗೆಯದೇ ರೆಡ್‌ ಆಗಿ ಮಹಿಳೆ ಹಿಡಿದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ‘ಡ್ಯೂಟಿ ಕಂಡಕ್ಟರ್ ಹೊಟ್ಟೆ ಮೇಲ್ಯಾಕೆ ಹೊಡಿತೀರಾ!’ ಎಂದು ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

ಬಸ್ ಕಂಡಕ್ಟರ್ ಟಿಕೆಟ್ ಬ್ಯಾಗ್ ಕದ್ದು ರೆಡ್‌ ಹ್ಯಾಂಡ್‌ ಆಗಿ ತಗಲಾಕಿಕೊಂಡ ಈ ಮಧ್ಯವಸ್ಸಿನ ಮಹಿಳೆ ನೋಡಲು ಸಾಮಾನ್ಯಳಂತೆ ಕಾಣುತ್ತಾಳೆ. ‘ಮಕ್ಕಳಿದ್ದಾರೆ ನನ್ನ ಬಿಟ್ಟು ಬಿಡಿ’ ಎಂದು ಬೇಡಿಕೊಳ್ಳುತ್ತಾಳೆ. ಈಕೆ ಮಾಡಿದ ಕೆಲಸಕ್ಕೆ ಬಸ್ ಚಾಲಕ, ನಿರ್ವಾಹಕರಿಬ್ಬರು ಕೆಲಸ ಕುತ್ತು ಬರುವುದಿತ್ತು. ಅದೃಷ್ಟವಶಾತ್ ಕಳ್ಳತನ ಸಾಬೀತಾಗುತ್ತಿದ್ದಂತೆ ಪೊಲೀಸರನ್ನು ಕರೆಸಲಾಗಿದೆ. ನಿರ್ವಾಹಕ ಡಿಯೋ ಮಾಡಿದ್ದು, ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ.

ಬಿಎಂಟಿಸಿ ಸೇರಿದಂತೆ ಇತರ ಬಸ್‌ಗಳಲ್ಲೂ ನಿಮ್ಮ ಲಗೇಜಿಗೆ ನೀವೆ ಜವಾಬ್ದಾರರು, ಕಳ್ಳರಿದ್ದಾರೆ ಎಚ್ಚರಿಕೆ ಸಂದೇಶ ನೋಡಿರುತ್ತೇವೆ. ಜನ ಸಾಮಾನ್ಯರಂತೆ ವರ್ತಿಸಿ ಸಹ ಪ್ರಯಾಣಿಕ ಮೊಬೈಲ್, ಹಣ, ಪರ್ಸ್, ಬೆಲೆ ಬಾಳುವ ವಸ್ತುಗಳನ್ನು ಕದಿಯುವವರನ್ನು ನೋಡಿದ್ದೇವೆ. ಆದರೆ ಈ ಮಹಿಳೆ ಮಾತ್ರ ಕಂಡಕ್ಟರ್ ಟಿಕೆಟ್ ಬ್ಯಾಗ್‌ನಲ್ಲಿ ಹಣ ಇದೆ ಎಂದು ತಿಳಿದು ಅದನ್ನು ಎಗರಿಸಿ ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದಿದ್ದಾಳೆ.

ಬಸ್‌ ಸೈಡ್‌ಗೆ ಹಾಕಿದ ಚಾಲಕ, ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ, ಕಳ್ಳತನ ಸಾಬೀತಾಗುತ್ತಿದ್ದಂತೆ ಚಾಲಕ ಬಸ್‌ ರಸ್ತೆಗೆ ಬದಿಗೆ ನಿಲ್ಲಿಸಿದ್ದಾರೆ. ಮಹಿಳೆಯನ್ನು ತಡೆದ ಬಸ್ ಚಾಲಕ, ನಿರ್ವಾಹಕರು ಬಾಗಿಲು ತೆರೆಯದೇ ಇಲ್ಲಿಯೇ ನಿಲ್ಲುವಂತೆ ಹೇಳುತ್ತಾರೆ. ಈ ವೇಳೆ ಪ್ರಯಾಣಿಕರೆಲ್ಲರು ಬಸ್‌ನಿಂದ ಕೆಳೆಗೆ ಇಳಿದಿರುವುದು ಕಾಣಿಸುತ್ತದೆ. ಎರಡು ಕಡೆಯ ಬಾಗಿಲು ಬಳಿ ಹೋಗಿ ತೆರೆಯುವಂತೆ ಕಳ್ಳತನ ಮಾಡಿದ ಮಹಿಳೆ ಕೇಳುತ್ತಾರೆ. ಪ್ರಶ್ನಿಸಿದ ಬಸ್ ಸಿಬ್ಬಂದಿಗೆ ಆವಾಜ್ ಸಹ ಹಾಕಿದ್ದಾಳೆ.

ಮಹಿಳೆ ಪೊಲೀಸ್ ಸಿಬ್ಬಂದಿ ಬಸ್ ಒಳಬಂದು ಮಹಿಳೆಗೆ ಚಳಿ ಬಿಡಿಸಿದ್ದಾರೆ. ಹೆಗಲಿಗೊಂದು ವ್ಯಾನಿಟಿ ಬ್ಯಾಗ್, ಕೈಯಲ್ಲೊಂದು ಚೀಲ ಹಿಡಿದ್ದ ಮಹಿಳೆಗೆ ತಾನು ಕದ್ದಿದ್ದ ಟಿಕೆಟ್ ಬ್ಯಾಗ್ ಅನ್ನು ಕೈಲಿದ್ದ ಚೀಲದಿಂದ ತೆಗೆಯುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಬ್ಯಾಗ್ ತೆಗೆದಿದ್ದೇ ತಡ ಏನು ಗೊತ್ತಿಲ್ಲದಂತೆ, ‘ಇದು ನನ್ನದಲ್ಲ ಎಂದು ವರಸೆ ಬದಲಿಸಿದ್ದಾಳೆ’. ತನ್ನ ಕಳ್ಳತನ ಬಯಲಾಗುತ್ತಿದ್ದಂತೆ ನಾಟಕವಾಡಲು, ಮುಗ್ಧೆಯ ರೀತಿ ವರ್ತಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇದೆಕ್ಕೆಲ್ಲ ಬಗ್ಗದ ಪೊಲೀಸ್ ಹಾಗೂ ಬಸ್ ಸಿಬ್ಬಂದಿ ಪ್ರಕರಣ ದಾಖಲಿಸುತ್ತೇನೆ. ಪೊಲೀಸ್‌ ಠಾಣೆಗೆ ಬಸ್ ಒಯ್ಯುವುದಾಗಿ ಹೆದರಿಸಿದ್ದಾರೆ. ಇದನ್ನು ನೋಡಿ ಚಡಪಡಿಸಿದಂತೆ ಕಾಣುವ ಮಹಿಳೆ ‘ಮನೇಲಿ ಮಕ್ಕಳಿದ್ದಾರೆ. ಹೋಗಬೇಕು ಬಾಗಿಲು ತೆರೆಯಿರಿ’ ಎಂದು ಕೇಳಿಕೊಳ್ಳುತ್ತಾಳೆ. ಬಳಿಕ ಮಹಿಳಾ ಪೊಲೀಸ್ ಸಿಬ್ಬಂದಿ ಬಿರುಸಿನ ಮಾತಿಗೆ ಮಹಿಳೆ ಮೌನವಾಗುತ್ತಾಳೆ. ‘ಈಕೆ ಬ್ಯಾಗ್‌ ಪರಿಶೀಲಿಸಿ, ಟಿಕೆಟ್ ಬ್ಯಾಗ್ ಅನ್ನು ತನ್ನ ಚೀಲದಲ್ಲಿ ಇಟ್ಟುಕೊಳ್ಳುವುದನ್ನು ನೋಡಿದ್ದೇನೆ ‘ಎಂದು ಇನ್ನೊಬ್ಬ ಸಹ ಮಹಿಳಾ ಪ್ರಯಾಣಿಕರು ಸಾಕ್ಷಿ ಹೇಳಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ನಾವ್ ಕೆಲಸ ಕಳೆದುಕೊಳ್ಳಬೇಕಾ? ಕಂಡಕ್ಟರ್ ಆಕ್ರೋಶ

ಯಾವುದೇ ಕಾರಣಕ್ಕೂ ಬಾಗಿಲು ತೆರೆಯಬೇಡಿ. ಠಾಣೆಗೆ ಹೋದ್ರೆ ಇವಳಿಗೆ ಬುದ್ಧಿ ಬರುತ್ತೆ. ನೀವು ಮಾಡಿರುವ ಘನಂದಾರಿ ಕೆಲಸಕ್ಕೆ ಸಾಕ್ಷಿ ಇದೆ. ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಕಳ್ಳತನ ನೋಡಿದ್ದಾರೆ. ನಿನ್ನಿಂದ ಮಕ್ಕಳು, ಮರಿ ಇರುವ ನಾವೆಲ್ಲ ಕೆಲಸ ಕಳೆದುಕೊಳ್ಳಬೇಕಾ? ಎಂದು ಕಂಡಕ್ಟರ್ ಆಕ್ರೋಶದಿಂದ ಮಾತನಾಡಿದ್ದಾರೆ.

She stole conductor bag only and acting Innocent 🤣😅😅 pic.twitter.com/zxagPG5N7A

— ರವಿ ಕೀರ್ತಿ ಗೌಡ (@ravikeerthi22) July 15, 2026

Saved cub elephant ದಾರಿ ತಪ್ಪಿ ಬಂದು ಇಂಗು ಗುಂಡಿಗೆ ಬಿದ್ದ ಮರಿಯಾನೆ‌ ಬಚಾವ್ ಮಾಡಿದ ತಾಯಿ!

Gold and Silver Rate Today in Bengaluru ಇಂದಿನ ಚಿನ್ನ ಮತ್ತು ಬೆಳ್ಳಿ ದರ

TAGGED:Khatarnak woman who tried to steal the bus conductor's cash bag! Watch the video
Share This Article
Facebook Twitter Copy Link Print
Previous Article Saved cub elephant ದಾರಿ ತಪ್ಪಿ ಬಂದು ಇಂಗು ಗುಂಡಿಗೆ ಬಿದ್ದ ಮರಿಯಾನೆ‌ ಬಚಾವ್ ಮಾಡಿದ ತಾಯಿ!
Next Article IRCTC Booking ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಐಆರ್‌ಸಿಟಿಸಿ ಹೊಸ ವೆಬ್‌ಸೈಟ್ ಲೋಕಾರ್ಪಣೆ; ಇನ್ಮುಂದೆ ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಸಾಧ್ಯ

Popular Posts

Kollywood ಜುಲೈ 23ರಂದು ವಿಶ್ವದಾದ್ಯಂತ ‘ಜನನಾಯಗನ್’ ಗ್ರ್ಯಾಂಡ್‌ ರಿಲೀಸ್

2 Min Read

Supreme Court ಅತ್ಯಾಚಾ*ರ ಯತ್ನ ಪ್ರಕರಣ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ

2 Min Read

Rice Testing ನೀವು ಸೇವಿಸುವ ಅಕ್ಕಿ ಪ್ಲಾಸ್ಟಿಕ್ ಇರಬಹುದು ಎಚ್ಚರ! ಅಸಲಿ-ನಕಲಿ ಪತ್ತೆ ಹಚ್ಚಲು ಮನೆಯಲ್ಲೇ ಮಾಡಿ ಈ 3 ಸಿಂಪಲ್ ಟೆಸ್ಟ್

2 Min Read

Free HPV Vaccine ಸರ್ಕಾರದಿಂದ ಮಹತ್ವದ ಹೆಜ್ಜೆ;14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಆರಂಭ

2 Min Read

You Might Also Like

ಪ್ರಮುಖCrimeಕರ್ನಾಟಕ

Dharmasthala Case ಧರ್ಮಸ್ಥಳ ಬುರುಡೆ ಪ್ರಕರಣ; ಬೆಳ್ತಂಗಡಿ ಕೋರ್ಟ್‌ಗೆ 7,005 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ SIT

2 Min Read
ಪ್ರಮುಖದೇಶವೈರಲ್

Viral Video ಮನುಷ್ಯತ್ವ ಅಂದ್ರೆ ಇದೇ ಅಲ್ವಾ? ಬೀದಿ ನಾಯಿಗೆ ಗಾಳಿ ಬೀಸಿದ ವೃದ್ಧ- ವಿಡಿಯೋ ನೋಡಿ

1 Min Read
ಪ್ರಮುಖದೇಶ

IRCTC Booking ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್, ಐಆರ್‌ಸಿಟಿಸಿ ಹೊಸ ವೆಬ್‌ಸೈಟ್ ಲೋಕಾರ್ಪಣೆ; ಇನ್ಮುಂದೆ ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್ ಸಾಧ್ಯ

2 Min Read
ಕರ್ನಾಟಕಪ್ರಮುಖ

Saved cub elephant ದಾರಿ ತಪ್ಪಿ ಬಂದು ಇಂಗು ಗುಂಡಿಗೆ ಬಿದ್ದ ಮರಿಯಾನೆ‌ ಬಚಾವ್ ಮಾಡಿದ ತಾಯಿ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?