newsics.com | ನ್ಯೂಸಿಕ್ಸ್
ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಆರ್ಥಿಕ ಚಿಂತೆ ಹಾಗೂ ತಡರಾತ್ರಿಯವರೆಗೆ ಮೊಬೈಲ್ ಬಳಸುವ ಹವ್ಯಾಸದಿಂದಾಗಿ ಕೋಟ್ಯಂತರ ಜನ ಸರಿಯಾದ ನಿದ್ರೆಯಿಲ್ಲದೆ ಒದ್ದಾಡುತ್ತಿದ್ದಾರೆ. ನಿದ್ರೆಯ ಕೊರತೆಯು ಮರುದಿನದ ಕೆಲಸದ ಸಾಮರ್ಥ್ಯವನ್ನು ಕುಗ್ಗಿಸುವುದಲ್ಲದೆ, ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಯಾವುದೇ ಮಾತ್ರೆಗಳ ಸಹಾಯವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯಲು ಇಲ್ಲಿದೆ 4 ಸಿಂಪಲ್ ಹೆಲ್ತ್ ಟಿಪ್ಸ್.
- ಮೊಬೈಲ್, ಟಿವಿಯಿಂದ ದೂರವಿರಿ: ಮಲಗುವ ಕನಿಷ್ಠ ಅರ್ಧ ಗಂಟೆ ಮುಂಚಿತವಾಗಿ ಫೋನ್, ಲ್ಯಾಪ್ಟಾಪ್ ಮತ್ತು ಟಿವಿಗಳನ್ನು ಆಫ್ ಮಾಡಿ. ಇವುಗಳಿಂದ ಬರುವ ನೀಲಿ ಬೆಳಕು ದೇಹದಲ್ಲಿ ನಿದ್ರೆಗೆ ಕಾರಣವಾಗುವ ‘ಮೆಲಟೋನಿನ್’ ಹಾರ್ಮೋನ್ ಉತ್ಪತ್ತಿಗೆ ಅಡ್ಡಿಪಡಿಸುತ್ತದೆ. ಫೋನ್ ಬದಲಿಗೆ ಪುಸ್ತಕ ಓದುವ ಅಥವಾ ಹಿತವಾದ ಸಂಗೀತ ಕೇಳುವ ಅಭ್ಯಾಸ ಮಾಡಿ.
- ರಾತ್ರಿ ಊಟ ಹಗುರವಾಗಿರಲಿ: ರಾತ್ರಿಯ ಸಮಯದಲ್ಲಿ ಹೆಚ್ಚು ಮಸಾಲೆ ಹಾಗೂ ಎಣ್ಣೆಯುಕ್ತ ಆಹಾರಗಳನ್ನು ಸೇವಿಸಬೇಡಿ. ರಾತ್ರಿ 8 ಗಂಟೆಯೊಳಗೆ ಅತ್ಯಂತ ಹಗುರವಾದ ಆಹಾರವನ್ನು ಸೇವಿಸಿದರೆ ಜೀರ್ಣಕ್ರಿಯೆ ಸುಲಭವಾಗಿ, ನಿದ್ರೆ ಚೆನ್ನಾಗಿ ಬರುತ್ತದೆ.
- ಕಾಫಿ-ಟೀ ಕುಡಿಯಬೇಡಿ: ಸಂಜೆ ಅಥವಾ ರಾತ್ರಿಯ ನಂತರ ಚಹಾ, ಕಾಫಿ ಹಾಗೂ ಎನರ್ಜಿ ಡ್ರಿಂಕ್ಸ್ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿ. ಇವುಗಳಲ್ಲಿರುವ ಕೆಫೀನ್ ನಿದ್ರೆಯನ್ನು ಕೆಡಿಸುತ್ತದೆ. ಇವುಗಳ ಬದಲಾಗಿ ಬಿಸಿ ನೀರು ಅಥವಾ ಮನಸ್ಸನ್ನು ಶಾಂತಗೊಳಿಸುವ ಗಿಡಮೂಲಿಕೆಗಳ ಚಹಾ (ಹರ್ಬಲ್ ಟೀ) ಕುಡಿಯಬಹುದು.
- ಮಲಗುವ ಕೋಣೆ ಸ್ವಚ್ಛವಾಗಿರಲಿ: ಗಲೀಜಾದ ರೂಮು ಮನಸ್ಸಿನ ನೆಮ್ಮದಿ ಹಾಳು ಮಾಡುತ್ತದೆ. ಹಾಗಾಗಿ ಮಲಗುವ ಮುನ್ನ ಬೆಡ್ ರೂಮ್ ಅನ್ನು ಸ್ವಚ್ಛವಾಗಿಟ್ಟುಕೊಂಡು, ಮಂದವಾದ ಬೆಳಕಿನೊಂದಿಗೆ ಆರಾಮದಾಯಕ ವಾತಾವರಣ ನಿರ್ಮಿಸಿಕೊಳ್ಳಿ. ಇದು ನಿಮ್ಮ ದೇಹ ಮತ್ತು ಮನಸ್ಸಿಗೆ ಬೇಗ ವಿಶ್ರಾಂತಿ ನೀಡುತ್ತದೆ.
Tech Guide ನಿಮ್ಮ ಹೆಸರಲ್ಲಿರುವ ನಕಲಿ ಸಿಮ್ ಪತ್ತೆ ಹಚ್ಚಲು ಇಲ್ಲಿದೆ ಸುಲಭ ಟ್ರಿಕ್