Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Rain Alert ಇಂದಿನಿಂದ 3 ದಿನ ಬಿರುಗಾಳಿ ಸಹಿತ ಮಳೆ: ರಾಜ್ಯದ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ
ಪ್ರಮುಖಕರ್ನಾಟಕ

Rain Alert ಇಂದಿನಿಂದ 3 ದಿನ ಬಿರುಗಾಳಿ ಸಹಿತ ಮಳೆ: ರಾಜ್ಯದ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ

Share
1 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಕೆಲವು ದಿನಗಳ ಕಾಲ ಮುಂಗಾರು ಮಳೆ ಮತ್ತಷ್ಟು ಚುರುಕಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ತಾಪಮಾನ ಕುಸಿಯಲಿದ್ದು, ಭಾರಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಜಿಲ್ಲಾವಾರು ಎಚ್ಚರಿಕೆ ಪ್ರಕಟಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಾರುತಗಳು ತೀವ್ರಗೊಂಡಿದ್ದು, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇದರೊಂದಿಗೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಜೋರಾದ ಗಾಳಿ ಬೀಸಲಿದ್ದು, ಕರಾವಳಿ ನಿವಾಸಿಗಳು ಜಾಗರೂಕರಾಗಿರಲು ಸೂಚಿಸಲಾಗಿದೆ. ಮಲೆನಾಡಿನ ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿಯಲಿದೆ.

ಇದೇ ವೇಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಉತ್ತರ ಒಳನಾಡಿನಲ್ಲಿ ಸದ್ಯಕ್ಕೆ ಮೋಡ ಕವಿದ ವಾತಾವರಣ ಇದ್ದು ತಂಪು ಹವೆ ಇರಲಿದ್ದು, ರಾತ್ರಿ ವೇಳೆಗೆ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ 3 ರಿಂದ 5 ದಿನಗಳ ಕಾಲ ಪಶ್ಚಿಮ ಮತ್ತು ನೈಋತ್ಯ ದಿಕ್ಕಿನಿಂದ ತೇವಾಂಶ ಭರಿತ ಬಿರುಗಾಳಿ ಬೀಸಲಿದ್ದು, ಬಾಳೆ ಮತ್ತು ಅಡಿಕೆ ಬೆಳೆಗಾರರು ತಮ್ಮ ಬೆಳೆಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಕೋರಿದೆ.

AI University ಬೆಂಗಳೂರಲ್ಲಿ ಶುರುವಾಗಲಿದೆ ದೇಶದ ಮೊದಲ AI ವಿವಿ: ಸಿಎಂ ಡಿಕೆ ಘೋಷಣೆ

TAGGED:#Rain Alert #karnataka #IMD #Yellow alert #Newsics
Share This Article
Facebook Twitter Copy Link Print
Previous Article Tech Guide ನಿಮ್ಮ ಹೆಸರಲ್ಲಿರುವ ನಕಲಿ ಸಿಮ್ ಪತ್ತೆ ಹಚ್ಚಲು ಇಲ್ಲಿದೆ ಸುಲಭ ಟ್ರಿಕ್
Next Article Toxic Movie ‘ಟಾಕ್ಸಿಕ್’ ಚಿತ್ರದಿಂದ 4ನೇ ಹಾಡಿನ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಮ್ಯೂಸಿಕ್ ಡೈರೆಕ್ಟರ್ ವಿಶಾಲ್

Popular Posts

Better Sleep Habits ರಾತ್ರಿ ನಿದ್ದೆ ಬರ್ತಿಲ್ವಾ? ಹಾಗಾದ್ರೆ ಮಲಗುವ ಮುನ್ನ ಈ 4 ತಪ್ಪುಗಳನ್ನು ಮಾಡಲೇಬೇಡಿ

1 Min Read

Nirma fake milk ಪ್ರತಿದಿನ ನಿರ್ಮಾದಿಂದ ಬರೋಬ್ಬರಿ 2.3 ಕೋಟಿ ಲೀಟರ್ ನಕಲಿ ಹಾಲು ಪೂರೈಕೆ?

2 Min Read

Karnataka State Anthem ಕುವೆಂಪು ರಚಿತ ನಾಡಗೀತೆಗೆ ಬೌದ್ಧ ಧರ್ಮದ ಸ್ಪರ್ಶ? ಸಾಹಿತ್ಯ ಬದಲಾವಣೆಗೆ ಸರ್ಕಾರದ ಮುಂದೆ ಸಲ್ಲಿಕೆಯಾಯ್ತು ಹೊಸ ಶಿಫಾರಸು

1 Min Read

Toxic Movie ‘ಟಾಕ್ಸಿಕ್’ ಚಿತ್ರದಿಂದ 4ನೇ ಹಾಡಿನ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಮ್ಯೂಸಿಕ್ ಡೈರೆಕ್ಟರ್ ವಿಶಾಲ್

1 Min Read

You Might Also Like

ಪ್ರಮುಖದೇಶ

Tech Guide ನಿಮ್ಮ ಹೆಸರಲ್ಲಿರುವ ನಕಲಿ ಸಿಮ್ ಪತ್ತೆ ಹಚ್ಚಲು ಇಲ್ಲಿದೆ ಸುಲಭ ಟ್ರಿಕ್

2 Min Read
ಕರ್ನಾಟಕದೇಶಪ್ರಮುಖ

AI University ಬೆಂಗಳೂರಲ್ಲಿ ಶುರುವಾಗಲಿದೆ ದೇಶದ ಮೊದಲ AI ವಿವಿ: ಸಿಎಂ ಡಿಕೆ ಘೋಷಣೆ

2 Min Read
ಪ್ರಮುಖಆರೋಗ್ಯ

kitchen Tips ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತಾ? ಅಳದೇ ಈರುಳ್ಳಿ ಹೆಚ್ಚಲು ಅಡುಗೆ ಮನೆಯಲ್ಲೇ ಇದೆ 5 ಸಿಂಪಲ್ ಟ್ರಿಕ್ಸ್

2 Min Read
ದೇಶಪ್ರಮುಖ

CM DK- Tirupati ಮೈಸೂರು ರಾಜರ ಪ್ರತಿನಿಧಿಗೆ ಮಾತ್ರ ತಿರುಪತಿ ಮೊದಲ ಆರತಿ: ಟಿಟಿಡಿ ಸ್ಪಷ್ಟನೆ, ಸಿಎಂ ಡಿಕೆಗೆ‌ ಮುಖಭಂಗ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?