Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Human Psychology ಯಾವಾಗಲೂ ಲೇಟಾಗಿ ಬರುವವರನ್ನು ‘ಸೋಮಾರಿ’ ಅಂದುಕೊಳ್ಳಬೇಡಿ, ಇದರ ಹಿಂದೆ ಇದೆ ಅಸಲಿ ಸೈಕಾಲಜಿ
ಪ್ರಮುಖಲೈಫ್‌ಸ್ಟೈಲ್

Human Psychology ಯಾವಾಗಲೂ ಲೇಟಾಗಿ ಬರುವವರನ್ನು ‘ಸೋಮಾರಿ’ ಅಂದುಕೊಳ್ಳಬೇಡಿ, ಇದರ ಹಿಂದೆ ಇದೆ ಅಸಲಿ ಸೈಕಾಲಜಿ

Share
2 Min Read
SHARE

newsics.com | ನ್ಯೂಸಿಕ್ಸ್

Contents
ಸಮಯದ ತಪ್ಪು ಅಂದಾಜು (Planning Fallacy)ಕೊನೆಯ ಕ್ಷಣದ ಗಡಿಬಿಡಿಮಾನಸಿಕ ಒತ್ತಡ ಮತ್ತು ಆತಂಕಕೆಲಸದಲ್ಲಿ ಅತಿಯಾದ ತಲ್ಲೀನತೆ

ಆಫೀಸ್ ಇರಲಿ ಅಥವಾ ಮೀಟಿಂಗ್ ಇರಲಿ… ಕೆಲವರು ಯಾವಾಗಲೂ ತಡವಾಗಿಯೇ ಬರುತ್ತಾರೆ. ಇವರನ್ನು ನಾವು ಸಾಮಾನ್ಯವಾಗಿ ‘ಬೇಜವಾಬ್ದಾರಿ’ ಅಥವಾ ‘ಸೋಮಾರಿಗಳು’ ಎಂದು ಅಂದುಕೊಳ್ಳುತ್ತೇವೆ. ಆದರೆ, ಮನೋವಿಜ್ಞಾನದ ಪ್ರಕಾರ ಇವರು ಬೇಕೆಂದೇ ತಡವಾಗಿ ಬರುವುದಿಲ್ಲ. ಬದಲಿಗೆ ಅವರ ಮಿದುಳಿನ ಯೋಚನಾ ಶೈಲಿ ಮತ್ತು ವ್ಯಕ್ತಿತ್ವವೇ ಇದಕ್ಕೆ ಕಾರಣವಾಗಿರುತ್ತದೆ. ಆ ಮುಖ್ಯ ಕಾರಣಗಳು ಇಲ್ಲಿವೆ.

ಸಮಯದ ತಪ್ಪು ಅಂದಾಜು (Planning Fallacy)

ತಡವಾಗಿ ಬರುವವರು ಸಮಯವನ್ನು ಸರಿಯಾಗಿ ಲೆಕ್ಕ ಹಾಕುವುದಿಲ್ಲ. ಉದಾಹರಣೆಗೆ, ರೆಡಿಯಾಗಿ ಕಚೇರಿ ತಲುಪಲು 45 ನಿಮಿಷ ಬೇಕಾಗಿದ್ದರೂ, ಕೇವಲ 20 ನಿಮಿಷ ಸಾಕು ಎಂದು ತಪ್ಪು ಲೆಕ್ಕಾಚಾರ ಮಾಡುತ್ತಾರೆ. ಸೈಕಾಲಜಿಯಲ್ಲಿ ಇದನ್ನು ‘ಪ್ಲಾನಿಂಗ್ ಫ್ಯಾಲಸಿ’ ಎನ್ನಲಾಗುತ್ತದೆ. ಉದ್ದೇಶಪೂರ್ವಕವಾಗಿ ತಡ ಮಾಡದಿದ್ದರೂ, ಸಮಯದ ಈ ತಪ್ಪು ಗ್ರಹಿಕೆಯಿಂದ ಲೇಟಾಗುತ್ತಾರೆ.

ಕೊನೆಯ ಕ್ಷಣದ ಗಡಿಬಿಡಿ

ಇನ್ನು ಕೆಲವರು ಹೊರಡುವ ತೀರಾ ಕೊನೆಯ ಕ್ಷಣದವರೆಗೂ ಸುಮ್ಮನಿರುತ್ತಾರೆ. ಆಮೇಲೆ ಒಮ್ಮೆಗೆ ಬಟ್ಟೆ ಬದಲಾಯಿಸುವುದು, ಫೋನ್ ಮಾಡುವುದು, ವಾಟರ್ ಬಾಟಲಿ ತುಂಬಿಸುವುದು ಹೀಗೆ ಹತ್ತಾರು ಕೆಲಸಗಳನ್ನು ಒಟ್ಟಿಗೆ ಮಾಡಲು ಹೋಗುತ್ತಾರೆ. ಈ ಕೊನೆಯ ನಿಮಿಷದ ಗಡಿಬಿಡಿಯೇ ಅವರ ಸಮಯವನ್ನು ಹಾಳುಮಾಡಿಬಿಡುತ್ತದೆ.

ಮಾನಸಿಕ ಒತ್ತಡ ಮತ್ತು ಆತಂಕ

ಮನೆಯಿಂದ ಹೊರಡುವಾಗ ಉಂಟಾಗುವ ಆತಂಕ ಕೂಡ ಲೇಟಾಗಲು ಕಾರಣ. ಕೆಲವರು ಗಾಬರಿಯಿಂದ ಪದೇ ಪದೇ ಬಾಗಿಲ ಲಾಕ್, ಗ್ಯಾಸ್ ಸ್ಟವ್, ಕೀಲಿ ಕೈ ಅಥವಾ ಫೋನ್ ತಗೊಂಡಿದ್ದೇನಾ ಇಲ್ವಾ ಅಂತ ಚೆಕ್ ಮಾಡುವುದರಲ್ಲೇ ಸಮಯ ವ್ಯರ್ಥ ಮಾಡುತ್ತಾರೆ. ಇನ್ನು ಕೆಲವರಿಗೆ ತಮಗೆ ಇನ್ನೂ ಸಾಕಷ್ಟು ಸಮಯವಿದೆ ಅನಿಸುತ್ತಿರುತ್ತದೆ, ಆದರೆ ಅಷ್ಟರಲ್ಲೇ ಲೇಟಾಗಿಬಿಟ್ಟಿರುತ್ತದೆ.

ಕೆಲಸದಲ್ಲಿ ಅತಿಯಾದ ತಲ್ಲೀನತೆ

ಹೆಚ್ಚು ಸೃಜನಶೀಲತೆ (Creative) ಇರುವ ವ್ಯಕ್ತಿಗಳು ತಾವು ಮಾಡುತ್ತಿರುವ ಕೆಲಸದಲ್ಲಿ (ಪುಸ್ತಕ ಓದುವುದು, ಸಂಗೀತ ಅಥವಾ ಯಾವುದೇ ಪ್ರಾಜೆಕ್ಟ್) ಎಷ್ಟು ಮುಳುಗಿಹೋಗುತ್ತಾರೆಂದರೆ, ಅವರಿಗೆ ಸಮಯದ ಪ್ರಜ್ಞೆಯೇ ಇರುವುದಿಲ್ಲ. ಇದರಿಂದಾಗಿಯೂ ಅವರು ಎಲ್ಲ ಕಡೆ ತಡವಾಗಿ ತಲುಪುತ್ತಾರೆ.

ಯಾವಾಗಲೂ ಲೇಟಾಗಿ ಬರುವವರು ಇತರರಿಗೆ ಗೌರವ ಕೊಡುವುದಿಲ್ಲ ಎಂದು ನೇರವಾಗಿ ದೂಷಿಸಲು ಬರುವುದಿಲ್ಲ. ಅವರ ಮಿದುಳಿನ ಆಲೋಚನಾ ಶೈಲಿ ಮತ್ತು ಕೊನೆಯ ಕ್ಷಣದ ಮಲ್ಟಿಟಾಸ್ಕಿಂಗ್ ಅಭ್ಯಾಸಗಳೇ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ.

Tissue Paper Secret ಟಿಶ್ಯೂ ಪೇಪರ್ ಎಲ್ಲಾ ಬಿಳಿ ಬಣ್ಣದಲ್ಲೇ ಇರೋದ್ಯಾಕೆ? ಇದರ ಹಿಂದಿದೆ ಇಂಟರೆಸ್ಟಿಂಗ್ ಕಾರಣ

TAGGED:#lifestyle late #psychology #health #Newsics
Share This Article
Facebook Twitter Copy Link Print
Previous Article Tissue Paper Secret ಟಿಶ್ಯೂ ಪೇಪರ್ ಎಲ್ಲಾ ಬಿಳಿ ಬಣ್ಣದಲ್ಲೇ ಇರೋದ್ಯಾಕೆ? ಇದರ ಹಿಂದಿದೆ ಇಂಟರೆಸ್ಟಿಂಗ್ ಕಾರಣ
Next Article Crime Case ವರದಕ್ಷಿಣೆಗಾಗಿ ಕೊ*ಲೆಗೆ ಯತ್ನ: ಪಿಎಸ್ಐ ಭೈರಪ್ಪ ಪೊಲೀಸರ ವಶಕ್ಕೆ

Popular Posts

kitchen Tips ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತಾ? ಅಳದೇ ಈರುಳ್ಳಿ ಹೆಚ್ಚಲು ಅಡುಗೆ ಮನೆಯಲ್ಲೇ ಇದೆ 5 ಸಿಂಪಲ್ ಟ್ರಿಕ್ಸ್

2 Min Read

CM DK- Tirupati ಮೈಸೂರು ರಾಜರ ಪ್ರತಿನಿಧಿಗೆ ಮಾತ್ರ ತಿರುಪತಿ ಮೊದಲ ಆರತಿ: ಟಿಟಿಡಿ ಸ್ಪಷ್ಟನೆ, ಸಿಎಂ ಡಿಕೆಗೆ‌ ಮುಖಭಂಗ

2 Min Read

HFMD Virus ಪೋಷಕರೇ ಗಮನಿಸಿ; ಅವಳಿ ನಗರದಲ್ಲಿ ಮಕ್ಕಳನ್ನು ಕಾಡುತ್ತಿದೆ ಹೊಸ ಚರ್ಮದ ಸೋಂಕು

2 Min Read

Teacher Recruitment ವಸತಿ ಶಾಲೆಗಳ 767 ಶಿಕ್ಷಕರ ಹುದ್ದೆಗಳ ಭರ್ತಿಗೆ KEA ಅಧಿಸೂಚನೆ

1 Min Read

You Might Also Like

ಪ್ರಮುಖವಿದೇಶ

Cow Urine ಸಗಣಿ ಬೂದಿಯೇ ಸನ್‌ಸ್ಕ್ರೀನ್, ಗೋಮೂತ್ರವೇ ಶಾಂಪೂ ಈ ಜನಾಂಗದ ಸಂಪ್ರದಾಯ ಕೇಳಿದ್ರೆ ಬೆರಗಾಗ್ತೀರಾ

2 Min Read
ಪ್ರಮುಖCrimeದೇಶ

Money Theft Case ಅಂಬಾಜಿ ದೇಗುಲದ ಹುಂಡಿ ಹಣಕ್ಕೆ ಕನ್ನ: ಮೂವರು ಕಳ್ಳರು ಅರೆಸ್ಟ್

1 Min Read
ಪ್ರಮುಖCrimeಕರ್ನಾಟಕ

Crime Case ವರದಕ್ಷಿಣೆಗಾಗಿ ಕೊ*ಲೆಗೆ ಯತ್ನ: ಪಿಎಸ್ಐ ಭೈರಪ್ಪ ಪೊಲೀಸರ ವಶಕ್ಕೆ

1 Min Read
ಪ್ರಮುಖಲೈಫ್‌ಸ್ಟೈಲ್

Tissue Paper Secret ಟಿಶ್ಯೂ ಪೇಪರ್ ಎಲ್ಲಾ ಬಿಳಿ ಬಣ್ಣದಲ್ಲೇ ಇರೋದ್ಯಾಕೆ? ಇದರ ಹಿಂದಿದೆ ಇಂಟರೆಸ್ಟಿಂಗ್ ಕಾರಣ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?