Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > HFMD Virus ಪೋಷಕರೇ ಗಮನಿಸಿ; ಅವಳಿ ನಗರದಲ್ಲಿ ಮಕ್ಕಳನ್ನು ಕಾಡುತ್ತಿದೆ ಹೊಸ ಚರ್ಮದ ಸೋಂಕು
ಪ್ರಮುಖಕರ್ನಾಟಕ

HFMD Virus ಪೋಷಕರೇ ಗಮನಿಸಿ; ಅವಳಿ ನಗರದಲ್ಲಿ ಮಕ್ಕಳನ್ನು ಕಾಡುತ್ತಿದೆ ಹೊಸ ಚರ್ಮದ ಸೋಂಕು

Share
2 Min Read
SHARE

newsics.com | ನ್ಯೂಸಿಕ್ಸ್

ಹುಬ್ಬಳ್ಳಿ: ರಾಜ್ಯದಲ್ಲಿ ತಲೆದೋರಿರುವ ಹವಾಮಾನ ಏರುಪೇರುಗಳ ನಡುವೆ ಮಕ್ಕಳನ್ನು ಕಾಡುತ್ತಿರುವ ಹೊಸದೊಂದು ಚರ್ಮದ ಸೋಂಕು ಪೋಷಕರನ್ನು ನಿದ್ದೆಗೆಡಿಸಿದೆ. ಮುಂಗಾರು ಮಳೆಯ ವಾತಾವರಣದ ನಡುವೆಯೇ ಐದು ವರ್ಷದೊಳಗಿನ ಪುಟ್ಟ ಕಂದಮ್ಮಗಳಲ್ಲಿ ‘ಕೈ, ಕಾಲು ಮತ್ತು ಬಾಯಿ ರೋಗ’ (HFMD) ತೀವ್ರವಾಗಿ ವ್ಯಾಪಿಸುತ್ತಿದೆ.

ಮೇಲ್ನೋಟಕ್ಕೆ ಚಿಕನ್ ಪಾಕ್ಸ್ (Chickenpox) ಮಾದರಿಯಲ್ಲೇ ಕಾಣಿಸುವ ಈ ಸೋಂಕು, ವಾಸ್ತವದಲ್ಲಿ ಅದಕ್ಕಿಂತ ಭಿನ್ನವಾಗಿದೆ. ಇದರಲ್ಲಿ ಮಕ್ಕಳ ಕೈ ಅಂಗೈಗಳು, ಪಾದಗಳು ಹಾಗೂ ಬಾಯಿಯ ಒಳಭಾಗ ಮತ್ತು ಸುತ್ತಲೂ ಅತಿಯಾದ ನೋವು ನೀಡುವ ದದ್ದುಗಳು ಹಾಗೂ ಗುಳ್ಳೆಗಳು ಏಳುತ್ತವೆ. ಇದರೊಂದಿಗೆ ಅತಿಯಾದ ಜ್ವರವೂ ಮಕ್ಕಳನ್ನು ಸುಸ್ತಾಗಿಸುತ್ತಿದೆ.

ಹುಬ್ಬಳ್ಳಿ ಮತ್ತು ಧಾರವಾಡದ ಪ್ರಮುಖ ವಸತಿ ಪ್ರದೇಶಗಳಲ್ಲಿ ಈ ವೈರಲ್ ಸೋಂಕು ತೀವ್ರಗೊಳ್ಳುತ್ತಿದ್ದು, ದಿನನಿತ್ಯ ನೂರಾರು ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಆಸ್ಪತ್ರೆ ಮತ್ತು ಖಾಸಗಿ ಪೀಡಿಯಾಟ್ರಿಕ್ ಕ್ಲಿನಿಕ್‌ಗಳಲ್ಲಿ ಹೆಚ್‌ಎಫ್‌ಎಂಡಿ ಲಕ್ಷಣಗಳಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಜ್ವರ ಮತ್ತು ನೋವಿನ ತೀವ್ರತೆ ಹೆಚ್ಚಿರುವ ಕಂದಮ್ಮಗಳಿಗೆ ವಿಶೇಷ ನಿಗಾ ಘಟಕಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಈ ವೈರಾಣು ಹರಡುವಿಕೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ವಿನೋದ್ ರಟ್ಟಿಗೇರಿ ಅವರು, “ಈ ಸೋಂಕನ್ನು ಪತ್ತೆ ಹಚ್ಚಲು ಯಾವುದೇ ಪ್ರತ್ಯೇಕ ಪ್ರಯೋಗಾಲಯ ಪರೀಕ್ಷೆಗಳ ಅಗತ್ಯವಿಲ್ಲ. ದೈಹಿಕ ಲಕ್ಷಣಗಳನ್ನು ಆಧರಿಸಿ ನಾವು ಚಿಕಿತ್ಸೆ ನೀಡುತ್ತಿದ್ದೇವೆ. ಆರಂಭಿಕ 5 ದಿನಗಳು ಮಕ್ಕಳಿಗೆ ಕಷ್ಟಕರವಾಗಿದ್ದರೂ, ಇದು ಪ್ರಾಣಕ್ಕೆ ಕುತ್ತು ತರುವ ಕಾಯಿಲೆಯಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ವೈರಸ್ ಹರಡುವುದನ್ನು ತಡೆಯಲು ಸರಳ ಸೂತ್ರಗಳು

  • ಸಂಪರ್ಕ ಕಡಿತಗೊಳಿಸಿ: ಸೋಂಕಿತ ಮಗುವನ್ನು ಶಾಲೆ, ಅಂಗನವಾಡಿ ಅಥವಾ ನೆರೆಹೊರೆಯ ಮಕ್ಕಳೊಂದಿಗೆ ಆಟವಾಡಲು ಕಳುಹಿಸಬೇಡಿ. ಮನೆಯಲ್ಲೇ ಐಸೋಲೇಷನ್‌ನಲ್ಲಿರಿಸಿ.
  • ನೈಸರ್ಗಿಕ ಸ್ಯಾನಿಟೈಸೇಶನ್: ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಬಳಸುತ್ತಿದ್ದಂತೆ ಮಕ್ಕಳ ಕೈಗಳನ್ನು ಆಗಾಗ್ಗೆ ಸಾಬೂನು ಬಳಸಿ ಸ್ವಚ್ಛವಾಗಿ ತೊಳೆಸಿರಿ.
  • ನಿರ್ಜಲೀಕರಣ ತಡೆಯಿರಿ (Hydration): ಬಾಯಿಯಲ್ಲಿ ಗುಳ್ಳೆಗಳಾಗುವುದರಿಂದ ಮಕ್ಕಳು ಆಹಾರ ತಿನ್ನಲು ನಿರಾಕರಿಸುತ್ತಾರೆ. ಇದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ನೋವು ಹೆಚ್ಚುತ್ತದೆ. ಹೀಗಾಗಿ ಎಳನೀರು, ಜ್ಯೂಸ್ ಅಥವಾ ಉಗುರುಬೆಚ್ಚಗಿನ ನೀರನ್ನು ಆಗಾಗ್ಗೆ ಕುಡಿಸುತ್ತಿರಿ.

ವೈರಲ್ ಸೋಂಕು ವೇಗವಾಗಿ ಹರಡುತ್ತಿದ್ದರೂ, ಸೂಕ್ತ ಸ್ವಚ್ಛತೆ ಹಾಗೂ ಆರೈಕೆಯಿಂದ ಕೇವಲ ಒಂದು ವಾರದಲ್ಲಿ ಮಗುವನ್ನು ಮೊದಲಿನಂತೆ ಆರೋಗ್ಯವಂತವಾಗಿ ಮಾಡಬಹುದು ಎಂದು ವೈದ್ಯಕೀಯ ತಂಡ ಸಲಹೆ ನೀಡಿದೆ.

 

Teacher Recruitment ವಸತಿ ಶಾಲೆಗಳ 767 ಶಿಕ್ಷಕರ ಹುದ್ದೆಗಳ ಭರ್ತಿಗೆ KEA ಅಧಿಸೂಚನೆ

TAGGED:#hfmd virus #Childrens #mouth disease #hubballi #Newsics
Share This Article
Facebook Twitter Copy Link Print
Previous Article Teacher Recruitment ವಸತಿ ಶಾಲೆಗಳ 767 ಶಿಕ್ಷಕರ ಹುದ್ದೆಗಳ ಭರ್ತಿಗೆ KEA ಅಧಿಸೂಚನೆ
Next Article CM DK- Tirupati ಮೈಸೂರು ರಾಜರ ಪ್ರತಿನಿಧಿಗೆ ಮಾತ್ರ ತಿರುಪತಿ ಮೊದಲ ಆರತಿ: ಟಿಟಿಡಿ ಸ್ಪಷ್ಟನೆ, ಸಿಎಂ ಡಿಕೆಗೆ‌ ಮುಖಭಂಗ

Popular Posts

Tech Guide ನಿಮ್ಮ ಹೆಸರಲ್ಲಿರುವ ನಕಲಿ ಸಿಮ್ ಪತ್ತೆ ಹಚ್ಚಲು ಇಲ್ಲಿದೆ ಸುಲಭ ಟ್ರಿಕ್

2 Min Read

AI University ಬೆಂಗಳೂರಲ್ಲಿ ಶುರುವಾಗಲಿದೆ ದೇಶದ ಮೊದಲ AI ವಿವಿ: ಸಿಎಂ ಡಿಕೆ ಘೋಷಣೆ

2 Min Read

kitchen Tips ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತಾ? ಅಳದೇ ಈರುಳ್ಳಿ ಹೆಚ್ಚಲು ಅಡುಗೆ ಮನೆಯಲ್ಲೇ ಇದೆ 5 ಸಿಂಪಲ್ ಟ್ರಿಕ್ಸ್

2 Min Read

CM DK- Tirupati ಮೈಸೂರು ರಾಜರ ಪ್ರತಿನಿಧಿಗೆ ಮಾತ್ರ ತಿರುಪತಿ ಮೊದಲ ಆರತಿ: ಟಿಟಿಡಿ ಸ್ಪಷ್ಟನೆ, ಸಿಎಂ ಡಿಕೆಗೆ‌ ಮುಖಭಂಗ

2 Min Read

You Might Also Like

ಪ್ರಮುಖಕರ್ನಾಟಕ

Teacher Recruitment ವಸತಿ ಶಾಲೆಗಳ 767 ಶಿಕ್ಷಕರ ಹುದ್ದೆಗಳ ಭರ್ತಿಗೆ KEA ಅಧಿಸೂಚನೆ

1 Min Read
ಪ್ರಮುಖವಿದೇಶ

Cow Urine ಸಗಣಿ ಬೂದಿಯೇ ಸನ್‌ಸ್ಕ್ರೀನ್, ಗೋಮೂತ್ರವೇ ಶಾಂಪೂ ಈ ಜನಾಂಗದ ಸಂಪ್ರದಾಯ ಕೇಳಿದ್ರೆ ಬೆರಗಾಗ್ತೀರಾ

2 Min Read
ಪ್ರಮುಖCrimeದೇಶ

Money Theft Case ಅಂಬಾಜಿ ದೇಗುಲದ ಹುಂಡಿ ಹಣಕ್ಕೆ ಕನ್ನ: ಮೂವರು ಕಳ್ಳರು ಅರೆಸ್ಟ್

1 Min Read
ಪ್ರಮುಖCrimeಕರ್ನಾಟಕ

Crime Case ವರದಕ್ಷಿಣೆಗಾಗಿ ಕೊ*ಲೆಗೆ ಯತ್ನ: ಪಿಎಸ್ಐ ಭೈರಪ್ಪ ಪೊಲೀಸರ ವಶಕ್ಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?