newsics.com | ನ್ಯೂಸಿಕ್ಸ್
ಅಹಮದಾಬಾದ್: ಅಯೋಧ್ಯೆ ರಾಮಮಂದಿರದ ₹200 ಕೋಟಿ ಹಗರಣದ ಕಹಿ ನೆನಪು ಮಾಸುವ ಮುನ್ನವೇ, ಇತ್ತ ಗುಜರಾತ್‌ನ ಇತಿಹಾಸ ಪ್ರಸಿದ್ಧ ಅಂಬಾಜಿ ದೇವಸ್ಥಾನದಲ್ಲಿ ಭಕ್ತರ ಕಾಣಿಕೆ ಹಣಕ್ಕೆ ನೌಕರರೇ ಕನ್ನ ಹಾಕಿರುವ ಘಟನೆ ನಡೆದಿದೆ.
ದೇಗುಲದ ಕಾಣಿಕೆ ಹಣ ಎಣಿಸುವ ಸಿಬ್ಬಂದಿ ಚಿರಾಗ್ ಠಾಕೂರ್ ಎಂಬಾತನೇ ಈ ಕಳ್ಳತನದ ಪ್ಲಾನ್ ಮಾಡಿದ್ದನು. ನೋಟುಗಳನ್ನು ಎಣಿಕೆ ಮಾಡುವ ನೆಪದಲ್ಲಿ ನೋಟಿನ ಬಂಡಲ್‌ಗಳನ್ನು ಯಾರಿಗೂ ಕಾಣದಂತೆ ತನ್ನ ಕಾಲುಗಳ ಕೆಳಗೆ ಅವಿತಿಡುತ್ತಿದ್ದನು. ಬಳಿಕ ಈ ದುಡ್ಡನ್ನು ಜೇಬಿಗೆ ಇಳಿಸಿಕೊಂಡು ಬಾತ್ ರೂಮ್‌ಗೆ ಹೋಗಿ ಬಚ್ಚಿಡಲು ಮುಂದಾಗುತ್ತಿದ್ದನು. ಆದರೆ ₹1 ಲಕ್ಷದ 4 ಸಾವಿರ ನಗದು ಹೊಂದಿದ್ದ ನೋಟಿನ ಕಂತೆ ಕೆಳಗೆ ಬಿದ್ದಿದೆ. ಇದನ್ನು ನೋಡಿದ ಸಹೋದ್ಯೋಗಿಗಳು ತಕ್ಷಣ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಅಧಿಕಾರಿಗಳು ಸಿಸಿಟಿವಿ (CCTV) ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಚಿರಾಗ್ ಇಡೀ ಕೃತ್ಯ ಎಸಗುವಾಗ ಆತನಿಗೆ ಬೆಂಬಲವಾಗಿ ನಿಂತು ಇಬ್ಬರು ಸಹ ನೌಕರರು ಸಹಾಯ ಮಾಡುತ್ತಿದ್ದರು. ಸಿಸಿಟಿವಿ ಆಧಾರದ ಮೇಲೆ ವಿವೇಕ್ ಶರ್ಮ ಮತ್ತು ನಿಕುಂಜ್ ಪಟೇಲ್ ಎಂಬ ಇಬ್ಬರು ಸಿಬ್ಬಂದಿ ಕಳ್ಳತನಕ್ಕೆ ಸಾಥ್ ನೀಡಿರುವುದನ್ನು ಪತ್ತೆ ಹಚ್ಚಲಾಗಿದೆ.
ಭಕ್ತರ ನಂಬಿಕೆಗೆ ದ್ರೋಹ ಬಗೆದು ದೇವಸ್ಥಾನದ ಕೋಟ್ಯಂತರ ರೂಪಾಯಿ ಲೂಟಿ ಮಾಡಲು ಸಂಚು ಹೂಡಿದ್ದ ಈ ಮೂವರು ಕಳ್ಳರನ್ನು ಅಮಾನತು ಮಾಡಲಾಗಿದೆ. ದೇಗುಲದ ಕಮಿಟಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳು ಈ ಹಿಂದೆ ಎಷ್ಟು ಲಕ್ಷ ರೂಪಾಯಿಗಳನ್ನು ಇದೇ ರೀತಿ ದೋಚಿದ್ದಾರೆ ಎಂಬ ಬಗ್ಗೆ ಕೂಲಂಕಷ ತನಿಖೆ ಆರಂಭಿಸಿದ್ದಾರೆ.
Crime Case ವರದಕ್ಷಿಣೆಗಾಗಿ ಕೊ*ಲೆಗೆ ಯತ್ನ: ಪಿಎಸ್ಐ ಭೈರಪ್ಪ ಪೊಲೀಸರ ವಶಕ್ಕೆ