newsics.com | ನ್ಯೂಸಿಕ್ಸ್
ಶುಭೋದಯ
ಇಂದಿನ ಪಂಚಾಂಗ | ರಾಶಿ ಭವಿಷ್ಯ
10-07-2026, ಶುಕ್ರವಾರ
ಪರಾಭವ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಮಾಸ ಕೃಷ್ಣ ಪಕ್ಷ ದಶಮಿ/ ಏಕಾದಶಿ.
ರಾಹು ಕಾಲ 10:49 – 12:25
ಯಮಗಂಡ ಕಾಲ 15:37 – 17:13
ಗುಳಿಕ ಕಾಲ 07:37 – 09:13
ಶುಭ ಸಮಯ: ಬೆಳಗ್ಗೆ 8:47ರಿಂದ 10:16
ಅಶುಭ ಸಮಯ: ಮಧ್ಯಾಹ್ನ 12:51ರಿಂದ 1:42.
—-
* ಯೋಗಿನೀ (ಸ್ಮಾರ್ತ) ಏಕಾದಶಿ
* ಹಿಂದೂ ವಿಧಿಜ್ಞ ಪರಿಷದ್ ವರ್ಧಂತಿ
——
ಇಂದಿನ ಪಂಚಾಂಗ
ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ನಿಜ ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಧೃತಿ, ಕರಣ : ಭದ್ರ, ಸೂರ್ಯೋದಯ – 06 – 00 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:49 – 12:25, ಯಮಗಂಡ ಕಾಲ 15:37 – 17:13, ಗುಳಿಕ ಕಾಲ 07:37 – 09:13
======
ಇಂದಿನ ರಾಶಿ ಭವಿಷ್ಯ
ಮೇಷ
ಇಂದು ನಿಮ್ಮಲ್ಲಿ ಹೋರಾಟದ ಸ್ವಭಾವವು ಎದ್ದು ತೋರುವುದು. ಎಲ್ಲದಕ್ಕೂ ವಿರೋಧ ಮಾಡುವಿರಿ. ಖುಷಿಯಲ್ಲಿ ಕೊಟ್ಟ ಮಾತಿನಿಂದ ನಿಮಗೆ ಇಂದು ತೊಂದರೆಯಾದೀತು. ನಿಮ್ಮ ಆಡಳಿತ ವೈಖರಿ ಬೇರೆ ರೂಪವನ್ನು ಪಡೆಯಲಿದೆ. ಆರೋಗ್ಯದ ವ್ಯತ್ಯಾಸದಿಂದ ವಿಶ್ರಾಂತಿ ಪಡೆಯುವಿರಿ. ನೀವೇ ಸಂಪಾದಿಸಿದ ಸಂಪತ್ತು ನಿಮ್ಮ ಬಳಕೆಗೆ ಸಿಗದು. ಮನಸ್ಸಿನಲ್ಲಿ ನಾನಾ ಬಗೆಯ ಗೊಂದಲ ಇರುವುದು. ವಿದೇಶ ಪ್ರಯಾಣಕ್ಕೆ ಮಿತ್ರನ ಸಹಕಾರ ಸಿಗಬಹುದು.
ವೃಷಭ
ನೀವು ಅದೃಷ್ಟವನ್ನು ನಿರೀಕ್ಷಿತ್ತ ಸಮಯವನ್ನು ಕಳೆಯುವಿರಿ. ಯಾರನ್ನಾದರೂ ಮೆಚ್ಚಿಸಲು ನಿಮ್ಮ ಕೆಲಸವನ್ನು ಪಕ್ಕಕ್ಕಿರಿಸುವಿರಿ. ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಲು ಸತತ ಪ್ರಯತ್ನ ಮಾಡುವಿರಿ. ನಿರುದ್ಯೋಗದಿಂದ ನಿಮಗೆ ಬಹಳ ಬೇಸರವಾದೀತು. ಜವಾಬ್ದಾರಿಯ ಕೆಲಸವನ್ನು ಬೇಗ ಮುಗಿಸಿ ಇನ್ನೊಬ್ಬರಿಗೆ ಸಹಾಯ ಮಾಡಲಿರುವಿರಿ. ಕೃತಜ್ಞತೆಯನ್ನೂ ತೋರದಷ್ಟು ನಿಷ್ಕರುಣೆ ಇರುವುದು. ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ.
ಮಿಥುನ
ತಾತ್ಸಾರ ಮಾಡದೇ ಕ್ರಮಬದ್ಧವಾಗಿ ಶತ್ರುಗಳನ್ನು ಗೆಲ್ಲುವಿರಿ. ಕ್ರೀಡಪಟುಗಳು ತಮ್ಮ ಅವಿರತಶ್ರಮವನ್ನು ನಡೆಸಲಿದ್ದಾರೆ. ಪ್ರಭಾವಿಗಳ ಭೇಟಿ ಅನಿರೀಕ್ಷಿತವಾಗಿ ಆಗುವುದು. ಯಂತ್ರೋಪಕರಣಗಳ ಮೇಲೆ ಅಧಿಕ ಮೋಹವಿರಲಿದೆ. ಎಲ್ಲವನ್ನೂ ನೀವೊಬ್ಬರೇ ಅನಿಭವಿಸಬೇಕು ಎಂಬ ಯೋಚನೆ ಇರಲಿದೆ. ಇಲ್ಲವಾದರೆ ಇತರರ ತೀರ್ಮಾನಕ್ಕೆ ಶರಣಾಗಬೇಕಾದೀತು. ತಾಳ್ಮೆಯ ಅಗತ್ಯತೆಯ ಮನವರಿಕೆ ಅಗತ್ಯ. ಇನ್ನೊಬ್ಬರು ಕೊಡುವ ತೊಂದರೆಯಿಂದ ನೀವು ಬಹಳ ಸಂಕಟವಾಗಲಿದೆ.
ಕರ್ಕಾಟಕ
ಇಂದು ವಿದ್ಯಾಭ್ಯಾದಲ್ಲಿ ಕಾರ್ಯಕ್ಷಮತೆ ಗಮನಾರ್ಹವಾಗಿ ಸುಧಾರಣೆ ಕಾಣಲಿದೆ. ನಿಮ್ಮ ಅಂದಿನ ಸ್ಥಿತಿಯನ್ನು ನೆನೆಸಿಕೊಂಡು ಹೆಮ್ಮೆಪಡಲಿದ್ದೀರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಹವಣಿಸುವಿರಿ. ನಕಾರಾತ್ಮಕ ಆಲೋಚನೆಯ ನಿಮ್ಮನ್ನು ಹಿಮ್ಮುಖ ಮಾಡಬಹುದು. ಹಿರಿಯರ ವಿಚಾರದಲ್ಲಿ ಅನಾದರ ತೋರಿದಂತೆ ಕಾಣಿಸುವುದು. ಕುಟುಂಬವು ನಿಮ್ಮ ಜೊತೆಗಿದೆ ಎಂಬ ಧೈರ್ಯವಿರಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮನ್ನಣೆ ಸಿಗುವುದು.
ಸಿಂಹ
ವಿದೇಶದಲ್ಲಿ ಕೆಲಸಮಾಡಲು ನಿಮಗೆ ಅನೇಕ ಅವಕಾಶಗಳು ನಿಮ್ಮನ್ನು ಹುಡುಕಬಹುದು. ಮಧ್ಯವರ್ತಿಗಳ ಮೂಲಕ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಮುಂದಿನ ಯೋಜನೆಯನ್ನು ಹಾಕಿಕೊಳ್ಳುವುದು ಉತ್ತಮ. ನಿಮ್ಮ ಯೋಚನೆಗಳು ಆದಷ್ಟು ಸರಿಯಾದ ಮಾರ್ಗದಲ್ಲಿ ಇರಲಿ. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ನಿಮ್ಮದಾದ ಚಿಂತನೆ, ಕಾರ್ಯದಿಂದ ಯಶಸ್ಸನ್ನು ಪಡೆಯಲು ನೀವು ಬಹಳ ಸಮಯ ಕಾಯಬೇಕಾಗಬಹುದು.
ಕನ್ಯಾ
ಇಂದಿನ ನಿಮ್ಮ ಕೆಲಸವು ಶಿಸ್ತಿನಿಂದ ಇದ್ದರೂ ನಿಮ್ಮ ಜೊತೆಗಾರರು ಅದನ್ನು ಮೂದಲಿಸಲಿದ್ದಾರೆ. ನಿಮ್ಮ ಸಲಹೆಗಳನ್ನು ನಿಮ್ಮವರು ತೆಗೆದುಕೊಳ್ಳದೇ ಇರುವುದು ನಿಮಗೆ ಸಿಟ್ಟೂ ಬೇಸರವನ್ನೂ ಉಂಟುಮಾಡಬಹುದು. ಕೈಬಿಟ್ಟ ವಿಚಾರವು ಪುನಃ ಮುಖ್ಯಸ್ಥಾನಕ್ಕೆ ಬರಲಿದೆ. ನೀವು ಹೊಸ ಹೂಡಿಕೆ ಮಾಡಬೇಕಾದರೆ ಅದು ಶುಭವಾಗುತ್ತದೆ. ಕುಟುಂಬದಲ್ಲಿಯೂ ಶಾಂತಿ ಇರುತ್ತದೆ. ನಿಮಗಿಂತ ಭಿನ್ನವಾದ ವ್ಯಕ್ತಿಗಳ ಬಗ್ಗೆ ಯೋಚಿಸದೇ ನಿಮ್ಮ ನಿಲುವೇ ಸರಿ ಎಂಬಂತೆ ವರ್ತಿಸುವಿರಿ.
ತುಲಾ
ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ನಿಮ್ಮದಾದ ಆತ್ಮೀಯ ವೃತ್ತವನ್ನು ನಿರ್ಮಿಸಿಕೊಳ್ಳುವಿರಿ. ಕಳ್ಳತನದ ಅಪವಾದಗಳು ನಿಮಗೆ ಚಿಂತನೆಯನ್ನು ಕೊಡಬಹುದು. ಸಹೋದ್ಯೋಗಿಗಳು ನಿಮ್ಮನ್ನು ಅವರದೇ ಕಾರಣಕ್ಕೆ ದೂರವಿಡುವರು. ಇಂದಿನ ಕೋಪದಿಂದ ಏನನ್ನೂ ಸಾಧಿಸಲು ಸಾಧ್ಯವಾಗದು. ಹೂಡಿಕೆ ಹಣವನ್ನು ತೆಗೆಯು ನಿರ್ಧಾರವನ್ನು ಮಾಡಬೇಕಾದೀತು. ಊಹೆಯು ದಿಕ್ಕು ತಪ್ಪುವ ಸಾಧ್ಯತೆ ಇದೆ.
ವೃಶ್ಚಿಕ
ಚಿಂತೆಯು ನಿಮ್ಮ ಮಾನಸಿಕ ಸ್ಥಿತಿಯನ್ನು ದುರ್ಬಲ ಮಾಡುವುದು. ಜೋಪಾನವಾಗಿ ಇರಿಸಿಕೊಂಡಿರುವ ನಿಮ್ಮ ಅಮೂಲ್ಯವಾದ ವಸ್ತುಗಳು ಕಣ್ಮರೆಯಾಗಿದ್ದು ಇಂದು ತಿಳಿಯಲಿದೆ. ಆಸ್ತಿಯ ವಿಚಾರಕ್ಕೆ ಸಹೋದರರ ನಡುವೆ ವೈಮನಸ್ಯ ಉಂಟಾಗಬಹುದು. ಸಮಾಜಸೇವೆಯಿಂದ ನಿಮಗೆ ಆಯಾಸ ಹೆಚ್ಚಾಗಲಿದೆ. ಅಧಿಕಾರದ ಅಸೆಯಿಂದ ನಿಮ್ಮ ವ್ಯಕ್ತಿತ್ವ ಬದಲಾಗಬಹುದು. ವ್ಯವಧಾನದ ಕೊರತೆಯನ್ನು ಎದುರಿಸುವಿರಿ. ನಿಮ್ಮ ಕೆಲಸವಾಗಲು ಯಾರನ್ನಾದರೂ ದೂರ ಮಾಡುವಿರಿ.
ಧನುಸ್ಸು
ನಿಮ್ಮ ಅಗತ್ಯತೆಗಳ ಯಾದಿಯು ತುಂಬಾ ದೊಡ್ಡದಿದ್ದು ಅದನ್ನು ಪೂರೈಸಲು ಸತತ ಪ್ರಯತ್ನವನ್ನು ಮಾಡುವಿರಿ. ಸ್ವಾಭಿಮಾನಕ್ಕೆ ಧಕ್ಕೆ ಬಂದು ಮನಸ್ಸಿನಲ್ಲಿ ಬಹಳ ಹಿಂಸೆಯನ್ನು ಅನುಭವಿಸಬಹುದು. ಸ್ವಂತಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ನಿಮ್ಮ ಕೆಲಸವೆಲ್ಲವೂ ಪರರ ಉಪಕಾರಕ್ಕೇ ಆಗುವುದು. ಮಾತಿನಲ್ಲಿ ಕಠೋರತಯು ಕಡಿಮೆಯಾದರೆ ಒಳ್ಳೆಯದು. ಇಂದು ಪೋಷಕರ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಮಕರ
ನಿಮ್ಮ ಎಲ್ಲ ಗೌಪ್ಯತೆಯನ್ನು ಹೇಳುವಿರಿ. ಹಗುರವಾದ ಮಾತುಗಳು ನಿಮಗೆ ಅಪಮಾನವನ್ನು ಮಾಡುವುದು. ಯಾರನ್ನೂ ಹಗುರವಾಗಿ ಕಾಣುವುದು ಬೇಡ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಶ್ಯಕತೆ ಇಲ್ಲ. ಅದು ತಾನಾಗಿಯೇ ಗೊತ್ತಾಗಲಿದೆ. ಇನ್ನೊಬ್ಬರ ಸ್ಥಿತಿಯನ್ನು ಕಂಡು ನೀವು ನೆಮ್ಮದಿಯಿಂದ ಇರುವಿರಿ. ಸಂಗಾತಿಯಿಂದ ಅನಿರೀಕ್ಷಿತ ಸಮಾಚಾರ ಬರಬಹುದು. ಏನನ್ನೂ ಹೇಳದೇ ನಿಮ್ಮಷ್ಟಕ್ಕೆ ಗಮನಿಸಿ. ಇಂದು ಅನಗತ್ಯ ವಸ್ತುಗಳಿಗಾಗಿ ವ್ಯರ್ಥವಾಗಿ ಖರ್ಚಾಗಬಹುದು.
ಕುಂಭ
ಒತ್ತಡದಿಂದ ನಿಮಗೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಇಲ್ಲವಾದರೆ ಮಾಡುವ ಕೆಲಸವು ಅಶಿಸ್ತಿನಿಂದ ಇರಬಹುದು. ನಿರೀಕ್ಷೆ ಮೀರಿದ ಅನುಕೂಲತೆಗಳು ಇದ್ದರೂ ಸಂತೃಪ್ತಿಯು ಇರಲಾರದು. ಧಾರ್ಮಿಕ ಸ್ಥಳದಿಂದ ನಿಮಗೆ ನೆಮ್ಮದಿ ಸಿಗಲಿದೆ. ಆಪ್ತರ ಜೊತೆ ಸಮಾಲೋಚನೆ ನಡೆಸುವಿರಿ. ಹಳೆಯ ವಸ್ತುಗಳ ಬಗ್ಗೆ ತಾತ್ಸಾರ ಭಾವ ಬರಬಹುದು. ಇಂದು ನಿಮ್ಮ ಕೆಲಸವನ್ನು ಬದಲು ಮಾಡಿಕೊಳ್ಳಲಿದ್ದೀರಿ.
ಮೀನ
ಧನದ ಕೊರತೆಯಿಂದ ಸಾಲವನ್ನು ಮಾಡುವ ಸಾಧ್ಯತೆಯಿದೆ. ವಾಹನ ಖರೀದಿಯ ವಿಚಾರದಲ್ಲಿ ಗೊಂದಲಗಳು ಬರಬಹುದು. ಸಂತೋಷವನ್ನು ಅನುಭವಿಸುವ ತಾಳ್ಮೆ ಇರದು. ಹಣಕಾಸಿನ ವ್ಯವಹಾರದಲ್ಲಿ ನಿಮಗೆ ಹೆಚ್ಚು ಸಂದೇಹಗಳು ಬರಬಹುದು. ನಿಮ್ಮ ಅಭಿಮಾನ ಸುಳ್ಳೆನಿಸಬಹುದು. ಧಾರ್ಮಿಕ ಆಚರಣೆಯಿಂದ ಸಂಕಷ್ಟಗಳು ದೂರಾಗುವ ನಂಬಿಕೆ ಇರಲಿದೆ. ತಂದೆಯಿಂದ ದೂರವಿರುವ ಯೋಚನೆ ಮಾಡುವಿರಿ.