newsics.com | ನ್ಯೂಸಿಕ್ಸ್
ಹೈದರಾಬಾದ್: ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ಫೌಜಿ’ ಚಿತ್ರದ ಸೆಟ್‌ನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಖ್ಯಾತ ಪೋಷಕ ನಟ ರಾಜೇಶ್ ಶರ್ಮಾ ಅವರಿಗೆ ವಿಷಕಾರಿ ಕೀಟವೊಂದು ಕಚ್ಚಿದ್ದು, ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದ್ದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಮಾನ್ಯ ಕೀಟ ಎಂದು ನಿರ್ಲಕ್ಷಿಸಿದ್ದರು ನಟ
ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ರಾಜೇಶ್ ಶರ್ಮಾ ಅವರು ತಂತ್ರಜ್ಞರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ಅತ್ಯಂತ ವಿಷಕಾರಿಯಾದ ಕೀಟವೊಂದು ಅವರ ಬಲಗಾಲಿಗೆ ಕಚ್ಚಿದೆ. ಆರಂಭದಲ್ಲಿ ಇದನ್ನು ಕೇವಲ ಸೊಳ್ಳೆ ಅಥವಾ ಸಾಮಾನ್ಯ ಹುಳ ಇರಬಹುದು ಎಂದು ಭಾವಿಸಿದ ನಟ, ತಕ್ಷಣ ಯಾವುದೇ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ. ಆದರೆ ಈ ಸಣ್ಣ ನಿರ್ಲಕ್ಷ್ಯವೇ ಅವರ ಜೀವಕ್ಕೆ ಕುತ್ತು ತಂದಿದೆ.
ವಿಮಾನದಲ್ಲೇ ಹದಗೆಟ್ಟ ಆರೋಗ್ಯ
ಕೀಟ ಕಚ್ಚಿದ 6 ಗಂಟೆಗಳ ಬಳಿಕ ರಾಜೇಶ್ ಶರ್ಮಾ ಅವರಿಗೆ ವಿಪರೀತ ಜ್ವರ ಮತ್ತು ಅಸಹನೀಯ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಅವರು ಹೈದರಾಬಾದ್‌ನಿಂದ ಕೋಲ್ಕತ್ತಾಗೆ ವಿಮಾನ ಏರಿದ್ದಾರೆ. ಆದರೆ ಪ್ರಯಾಣದ ಮಧ್ಯೆ ವಿಮಾನದಲ್ಲೇ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ (Sugar Level) ದಿಢೀರ್ ಏರಿಕೆಯಾಗಿ, ಉಸಿರಾಟದ ತೊಂದರೆ ಎದುರಾಗಿದೆ. ಇದು ವಿಮಾನದ ಸಿಬ್ಬಂದಿ ಹಾಗೂ ಸಹಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು.
ಐಸಿಯುನಲ್ಲಿ ವೈದ್ಯರ ಕಠಿಣ ಹೋರಾಟ
ವಿಮಾನ ಕೋಲ್ಕತ್ತಾ ತಲುಪಿದ ತಕ್ಷಣವೇ ಅವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ವೈದ್ಯರ ವರದಿ ಪ್ರಕಾರ, ಕೀಟದ ವಿಷವು ಪಾದದಿಂದ ಮೊಣಕಾಲಿನವರೆಗೆ ಶರವೇಗದಲ್ಲಿ ಹರಡಿದ್ದು, ಜ್ವರ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ತಜ್ಞ ವೈದ್ಯರ ತಂಡ ಅವರಿಗೆ ನಿರಂತರ ಚಿಕಿತ್ಸೆ ನೀಡುತ್ತಿದ್ದು, ನಟ ರಾಜೇಶ್ ಶರ್ಮಾ ಗುಣಮುಖರಾಗಲಿ ಎಂದು ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಈ ಘಟನೆಯು ಶೂಟಿಂಗ್ ಸೆಟ್‌ಗಳಲ್ಲಿ ಕಲಾವಿದರು ಮತ್ತು ತಂತ್ರಜ್ಞರ ಸುರಕ್ಷತೆಯ ಬಗ್ಗೆ ಮತ್ತೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
Landslide ನಿರಂತರ ಮಳೆಗೆ ಭೀಕರ ಭೂಕುಸಿತ, ಇಬ್ಬರು ಕಾರ್ಮಿಕರು ಸಾ*ವು, ಹಲವರು ನಾಪತ್ತೆ