newsics.com | ನ್ಯೂಸಿಕ್ಸ್
ಗದಗ: ಜಿಲ್ಲೆಯ ರೋಣ ತಾಲೂಕಿನ ಅರಸಣಗಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಬುದ್ಧಿಮಾಂದ್ಯ ಯುವತಿಗೆ ಚಾಕ್ಲೆಟ್ ಮತ್ತು ತಿಂಡಿಯ ಆಸೆ ತೋರಿಸಿ ಗ್ರಾಮದ ದುರ್ಗಪ್ಪ ಎಂಬಾತ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಯುವತಿ ಈಗ 6 ತಿಂಗಳ ಗರ್ಭಿಣಿಯಾಗಿದ್ದು, ಈ ನೀಚ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಬಯಲಾಗಿದ್ದು ಹೇಗೆ?
ಜುಲೈ 6 ರಂದು ಗದಗನ ಜಿಮ್ಸ್ (GIMS) ಆಸ್ಪತ್ರೆಯಲ್ಲಿ ಯುವತಿಯ ಆರೋಗ್ಯ ತಪಾಸಣೆ ನಡೆಸಿದಾಗ ದೇಹದಲ್ಲಿನ ಬದಲಾವಣೆ ಕಂಡುಬಂದಿದೆ. ಆಕೆ ಗರ್ಭಿಣಿಯಾಗಿರುವುದು ದೃಢಪಡುತ್ತಿದ್ದಂತೆ ಗ್ರಾಮದಲ್ಲಿ ವಿಷಯ ಗೊತ್ತಾಗಿದೆ. ಗ್ರಾಮದ ಯುವಕರು ತಕ್ಷಣವೇ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸದ್ಯ ಸಂತ್ರಸ್ತ ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ದುರ್ಗಪ್ಪನ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Crime Case ಪ್ರೇಯಸಿಗಾಗಿ ಅಮೆರಿಕದಲ್ಲಿ ಪತ್ನಿ ಕೊ*ಲೆ; ಹೆಣದ ಫೋಟೋ ಲವ್ವರ್ಗೆ ಕಳಿಸಿದ ಭಾರತೀಯ ಮೂಲದ ಟೆಕ್ಕಿ