Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕರ್ನಾಟಕ > Baby born in train ರೈಲಲ್ಲೇ ಮಗುವಿಗೆ ಜನ್ಮ! ಸುಖಪ್ರಸವಕ್ಕೆ ಕಾರಣರಾದ್ರು ಹಾಸನದ ಮೂವರು ವೈದ್ಯ ವಿದ್ಯಾರ್ಥಿನಿಯರು!
ಕರ್ನಾಟಕದೇಶಪ್ರಮುಖ

Baby born in train ರೈಲಲ್ಲೇ ಮಗುವಿಗೆ ಜನ್ಮ! ಸುಖಪ್ರಸವಕ್ಕೆ ಕಾರಣರಾದ್ರು ಹಾಸನದ ಮೂವರು ವೈದ್ಯ ವಿದ್ಯಾರ್ಥಿನಿಯರು!

Share
2 Min Read
SHARE

newsics.com | ನ್ಯೂಸಿಕ್ಸ್

ಹಾಸನ: ವೇಗವಾಗಿ ಚಲಿಸುತ್ತಿದ್ದ ರೈಲಿನ ಬೋಗಿಯೊಂದರಲ್ಲಿ ಇದ್ದಕ್ಕಿದ್ದಂತೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಾರಾಣಸಿಯತ್ತ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಯೊಬ್ಬರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈಗಾಗಲೇ ಆಕೆಗೆ ಸಹಜ ಹೆರಿಗೆ ಸಾಧ್ಯವಾಗದೇ ಇರಬಹುದು ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ಮುಂಚಿತವಾಗಿ ಎಚ್ಚರಿಕೆ ನೀಡಿದ್ದರೆಂದು ಕುಟುಂಬದವರು ತಿಳಿಸಿದ್ದರು. ಇಂತಹ ಸಂದರ್ಭದಲ್ಲಿ ರೈಲಿನೊಳಗೆ ವೈದ್ಯಕೀಯ ಸೌಲಭ್ಯಗಳಿರಲಿಲ್ಲ, ಆಸ್ಪತ್ರೆಯೂ ಸಮೀಪದಲ್ಲಿರಲಿಲ್ಲ. ಗರ್ಭಜಲ ಸೋರಿಕೆಯಾಗುತ್ತಿದ್ದು, ಕುಟುಂಬದವರಲ್ಲಿ ಆತಂಕ ಹೆಚ್ಚಾಗಿತ್ತು.

ದೇವತೆಗಳಂತೆ ಬಂದ ಮೂವರು ವಿದ್ಯಾರ್ಥಿನಿಯರು

ಅದೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮಾನಸರೋಗ ಮತ್ತು ಮನೋವಿಜ್ಞಾನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ. ರಶ್ಮಿ ಬೀಳಗಿ, ಡಾ. ಶಾಹಿನ್ ಎಂ. ಹಾಗೂ ಡಾ. ಲತಾಶ್ರೀ ಎನ್. ಅವರು ಪರಿಸ್ಥಿತಿಯನ್ನು ಗಮನಿಸಿ ತಕ್ಷಣವೇ ನೆರವಿಗೆ ಮುಂದಾದರು.

ವಾರಾಣಸಿಯಲ್ಲಿರುವ ಬಿಎಚ್‌ಯುನಲ್ಲಿ ನಡೆಯಲಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ತೆರಳುತ್ತಿದ್ದ ಈ ಮೂವರು ಯುವ ವೈದ್ಯರು, ಲಭ್ಯವಿದ್ದ ಸೀಮಿತ ಸಂಪನ್ಮೂಲಗಳಲ್ಲೇ ರೈಲಿನ ಬೋಗಿಯನ್ನು ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನಾಗಿ ರೂಪಿಸಿದರು.

ಕುಟುಂಬದವರಿಗೆ ಧೈರ್ಯ ತುಂಬಿದ ವಿದ್ಯಾರ್ಥಿನಿಯರು ತುರ್ತು ಹೆರಿಗೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡರು. ಆದರೆ ಹೆರಿಗೆಯ ಸಮಯದಲ್ಲಿ ಮತ್ತೊಂದು ಗಂಭೀರ ಸವಾಲು ಎದುರಾಯಿತು.

ಮಗು ಹೊರಬರುವ ಹಂತದಲ್ಲಿ ಅದರ ಕುತ್ತಿಗೆಗೆ ಹೊಕ್ಕುಳಬಳ್ಳಿ ಬಿಗಿಯಾಗಿ ಸುತ್ತಿಕೊಂಡಿರುವುದು ಕಂಡುಬಂತು. ಇಂತಹ ಸಂದರ್ಭಗಳಲ್ಲಿ ಮಗುವಿಗೆ ಉಸಿರಾಟದ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದ್ದು, ಅತಿ ಹೆಚ್ಚು ಜಾಗರೂಕತೆಯಿಂದ ಕ್ರಮ ಕೈಗೊಳ್ಳಬೇಕಾಗುತ್ತದೆ.

ಈ ಸಂದರ್ಭದಲ್ಲಿ ಇವರು ಅವರು ಅತ್ಯಂತ ಎಚ್ಚರಿಕೆಯಿಂದ ಹೊಕ್ಕುಳಬಳ್ಳಿಯನ್ನು ಸರಿಪಡಿಸಿ ಮಗುವನ್ನು ಸುರಕ್ಷಿತವಾಗಿ ಹೊರತೆಗೆದರು. ಆದರೆ ಮಗು ಹುಟ್ಟಿದ ತಕ್ಷಣ ಅಳದ ಕಾರಣ ಕೆಲ ಕ್ಷಣಗಳ ಕಾಲ ಆತಂಕ ಮತ್ತಷ್ಟು ಹೆಚ್ಚಾಯಿತು.

ಕೂಡಲೇ ವೈದ್ಯಕೀಯ ವಿದ್ಯಾರ್ಥಿನಿಯರು ಪುನರುಜ್ಜೀವನ ಪ್ರಕ್ರಿಯೆಯನ್ನು ಮಾಡಲು ಮುಂದಾದರು. ಕೆಲವೇ ಕ್ಷಣಗಳ ನಂತರ ಮಗುವಿನ ಅಳು ಕೇಳಿಬಂದಿದ್ದು, ಕುಟುಂಬದವರಲ್ಲಿ ಸಂತಸ ಮೂಡಿಸಿತು.

ವೈದ್ಯಕೀಯ ಉಪಕರಣಗಳ ಕೊರತೆಯ ನಡುವೆಯೂ ಹೊಕ್ಕುಳಬಳ್ಳಿಯನ್ನು ಸುರಕ್ಷಿತವಾಗಿ ಕತ್ತರಿಸಿ, ತಾಯಿ ಮತ್ತು ಮಗುವಿನ ನಡುವೆ ತಕ್ಷಣವೇ ಸ್ಕಿನ್-ಟು-ಸ್ಕಿನ್ ಸಂಪರ್ಕ ಕಲ್ಪಿಸಲಾಯಿತು. ನಂತರ ಪ್ಲಸೆಂಟಾ ಹೊರಬರುವ ಪ್ರಕ್ರಿಯೆಯನ್ನೂ ಅವರು ಯಶಸ್ವಿಯಾಗಿ ನಿರ್ವಹಿಸಿದರು.

ಮುಂದಿನ ರೈಲು ನಿಲ್ದಾಣ ತಲುಪುತ್ತಿದ್ದಂತೆಯೇ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ತಾಯಿ ಮತ್ತು ನವಜಾತ ಶಿಶುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.

Crime Case ತಹಶೀಲ್ದಾರ್ ನಿವಾಸದಲ್ಲೇ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್

 

Strange first night ಇಲ್ಲಿನ ಫಸ್ಟ್ ನೈಟ್‌ನಲ್ಲಿ ಹುಡುಗಿಯ ತಾಯಿಯೂ ಇರ್ತಾಳೆ!

Tech Tips ಮಳೆಗೆ ಫೋನ್ ಒದ್ದೆಯಾದ್ರೆ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ, ಫೋನ್ ಡೆಡ್ ಆಗದಂತೆ ತಡೆಯಲು ತಕ್ಷಣ ಹೀಗೆ ಮಾಡಿ

Child dies ಶಾಲಾ ವಾಹನಕ್ಕೆ ಸಿಲುಕಿ ತಾಯಿ ಎದುರೇ 4 ವರ್ಷದ ಬಾಲಕಿ ಸಾವು

 

TAGGED:A child was born on the train! Hassan's three female medical students were responsible for the happy delivery!
Share This Article
Facebook Twitter Copy Link Print
Previous Article Child dies ಶಾಲಾ ವಾಹನಕ್ಕೆ ಸಿಲುಕಿ ತಾಯಿ ಎದುರೇ 4 ವರ್ಷದ ಬಾಲಕಿ ಸಾವು

Popular Posts

Baby born in train ರೈಲಲ್ಲೇ ಮಗುವಿಗೆ ಜನ್ಮ! ಸುಖಪ್ರಸವಕ್ಕೆ ಕಾರಣರಾದ್ರು ಹಾಸನದ ಮೂವರು ವೈದ್ಯ ವಿದ್ಯಾರ್ಥಿನಿಯರು!

2 Min Read

Child dies ಶಾಲಾ ವಾಹನಕ್ಕೆ ಸಿಲುಕಿ ತಾಯಿ ಎದುರೇ 4 ವರ್ಷದ ಬಾಲಕಿ ಸಾವು

1 Min Read

Strange first night ಇಲ್ಲಿನ ಫಸ್ಟ್ ನೈಟ್‌ನಲ್ಲಿ ಹುಡುಗಿಯ ತಾಯಿಯೂ ಇರ್ತಾಳೆ!

3 Min Read

Pak plane missing ಪಾಕ್‌ನ ಬೋಯಿಂಗ್ ಕಾರ್ಗೋ‌ ವಿಮಾನ ನಾಪತ್ತೆ: ಎರಡು ದಿನವಾದರೂ ಸುಳಿವಿಲ್ಲ!

2 Min Read

You Might Also Like

ದೇಶಪ್ರಮುಖವೈರಲ್

groom ran, bride chased ಮದುವೆ ಮಂಟಪದಿಂದ ಓಡಿದ ವರ, ಬೆನ್ನತ್ತಿದ ವಧು… ರಸ್ತೆಯಲ್ಲೇ ಹೈಡ್ರಾಮಾ, ಅಷ್ಟಕ್ಕೂ ಆದದ್ದೇನು? ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖ

Student’s mysterious death ಖಾಸಗಿ ವಸತಿ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಪೋಷಕರ ಪ್ರತಿಭಟನೆ, ಲಘು ಲಾಠಿ ಪ್ರಹಾರ, ವಾರ್ಡನ್, ದೈಹಿಕ ಶಿಕ್ಷಕ ಅರೆಸ್ಟ್

2 Min Read
ದೇಶಪ್ರಮುಖವಿದೇಶ

Trump- Iran ಇರಾನಿಯನ್ನರು‌ ಭಾರೀ‌ ಕೆಟ್ಟವರು, ಇರಾನ್ ಜತೆಗಿನ‌ ಕದನ‌ ವಿರಾಮ‌ ಅಂತ್ಯ: ಟ್ರಂಪ್ ಘೋಷಣೆ

2 Min Read
ಪ್ರಮುಖCrimeಕರ್ನಾಟಕ

Road Mishap ಯಮನ ದವಡೆಯಿಂದ ಪಾರಾದ ವಿದ್ಯಾರ್ಥಿನಿ: ಲಾರಿ ಅಡಿಗೆ ಸಿಲುಕಿದ್ರೂ ವಿದ್ಯಾರ್ಥಿನಿ ಬಚಾವ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?