newsics.com | ನ್ಯೂಸಿಕ್ಸ್
ಇತ್ತೀಚೆಗೆ ಸೋಶಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ಹಚ್ಚೆಯೊಂದರ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.
ಕೈ ಅಥವಾ ದೇಹದ ಬೇರೆ ಭಾಗದ ಮೇಲೆ ತ್ರಿಕೋನಾಕಾರದಲ್ಲಿರುವ ‘ಮೂರು ಚುಕ್ಕೆಯ ಹಚ್ಚೆ’ (Three-dot tattoo) ಕಂಡರೆ ತಕ್ಷಣ ಅಲ್ಲಿಂದ ಓಡಿ ಹೋಗಿ ಎಂಬ ಎಚ್ಚರಿಕೆಯ ಸಂದೇಶವೊಂದು ವೈರಲ್ ಆಗಿದೆ.
ಈ ಬಗ್ಗೆ ಎಲಾನ್ ಮಸ್ಕ್ ಅವರ ‘ಗ್ರೋಕ್ ಎಐ’ (Grok AI) ನೀಡಿದ ಉತ್ತರ ಈಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಏನಿದು ‘ಮಿ ವಿದಾ ಲೋಕಾ’?
ಗ್ರೋಕ್ ಎಐ ಪ್ರಕಾರ, ತ್ರಿಕೋನಾಕಾರದ ಈ ಮೂರು ಚುಕ್ಕೆಗಳು ಪಾಶ್ಚಿಮಾತ್ಯ ದೇಶಗಳಲ್ಲಿ, ವಿಶೇಷವಾಗಿ ಜೈಲು ಮತ್ತು ಗ್ಯಾಂಗ್ ಸಂಸ್ಕೃತಿಯಲ್ಲಿ ಬಹಳ ಪ್ರಸಿದ್ಧ. ಇದನ್ನು ಸ್ಪ್ಯಾನಿಷ್ ಭಾಷೆಯಲ್ಲಿ ‘ಮಿ ವಿದಾ ಲೋಕಾ’ (Mi Vida Loca) ಎನ್ನಲಾಗುತ್ತದೆ. ಇದರ ಅರ್ಥ ‘ನನ್ನ ಹುಚ್ಚು ಜೀವನ’ ಎಂದು. ಇಂತಹ ಹಚ್ಚೆ ಹಾಕಿಸಿಕೊಂಡವರು ಅಪರಾಧ ಲೋಕಕ್ಕೆ ಸೇರಿದವರು ಅಥವಾ ಅತ್ಯಂತ ಅಪಾಯಕಾರಿ ಜೀವನ ನಡೆಸುವವರು ಎಂಬ ನಂಬಿಕೆ ಇದೆ. ಇವರ ಜೀವನವು ಜೈಲು, ಆಸ್ಪತ್ರೆ ಅಥವಾ ಸಮಾಧಿಯಲ್ಲಿ ಕೊನೆಯಾಗುತ್ತದೆ ಎಂಬ ಸಂಕೇತವನ್ನು ಇದು ನೀಡುತ್ತದೆ.
ಈ ಟ್ಯಾಟೂ ಯಾಕೆ ಅಪಾಯಕಾರಿ?
ಈ ಮೂರು ಚುಕ್ಕೆಗಳು ಒಬ್ಬ ವ್ಯಕ್ತಿಯ ಅಸ್ತವ್ಯಸ್ತ ಮತ್ತು ಅತ್ಯಂತ ಅಪಾಯಕಾರಿ ಜೀವನಶೈಲಿಯನ್ನು ಪ್ರತಿನಿಧಿಸುತ್ತವೆ. ಭೂಗತ ಲೋಕದ ನಂಬಿಕೆಯ ಪ್ರಕಾರ, ಈ ಜೀವನವು ಅಂತಿಮವಾಗಿ ಮೂರು ಜಾಗಗಳಲ್ಲಿ ಕೊನೆಗೊಳ್ಳುತ್ತದೆ ಎಂಬ ಸಂಕೇತವಿದು:
ಜೈಲು (Jail), ಆಸ್ಪತ್ರೆ (Hospital), ಸ್ಮಶಾನ (Graveyard). ಅಂದರೆ, ಇಂತಹ ಟ್ಯಾಟೂ ಧರಿಸಿದವರು ಯಾವುದೇ ಕಾನೂನುಬಾಹಿರ ಕೃತ್ಯ ಅಥವಾ ಅಪಾಯಕಾರಿ ಕೆಲಸಗಳಿಗೆ ಸಿದ್ಧರಿದ್ದಾರೆ ಎಂಬ ಮುನ್ಸೂಚನೆಯನ್ನು ಇದು ನೀಡುತ್ತದೆ.
ಗ್ರೋಕ್ ಎಐ ಹೇಳುವಂತೆ, ಈ ಟ್ಯಾಟೂ ಹಾಕಿಸಿಕೊಂಡವರೆಲ್ಲರೂ ಕ್ರಿಮಿನಲ್ಗಳೇ ಆಗಿರಬೇಕಿಲ್ಲ, ಕೆಲವರು ತಿಳಿಯದೇ ಫ್ಯಾಷನ್ಗಾಗಿ ಹಾಕಿಸಿಕೊಂಡಿರಬಹುದು. ಆದರೆ ಇದರ ಹಿನ್ನೆಲೆ ಮಾತ್ರ ಅತ್ಯಂತ ಭಯಾನಕವಾಗಿದೆ.
ಆದರೆ, ಭಾರತದ ಸಂದರ್ಭಕ್ಕೆ ಬಂದರೆ ಈ ಹಚ್ಚೆಯ ಅರ್ಥ ಸಂಪೂರ್ಣವಾಗಿ ಬದಲಾಗುತ್ತದೆ. ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಇಂದಿಗೂ ಮಹಿಳೆಯರು ಕೈ ಅಥವಾ ಗಲ್ಲದ ಮೇಲೆ ಇಂತಹ ಮೂರು ಚುಕ್ಕೆಗಳ ಹಚ್ಚೆ ಹಾಕಿಸಿಕೊಳ್ಳುವುದನ್ನು ನಾವು ಕಾಣಬಹುದು.
ಭಾರತೀಯ ಸಂಸ್ಕೃತಿಯಲ್ಲಿ ಇದನ್ನು ‘ದೃಷ್ಟಿ ಬೊಟ್ಟು’ ಅಥವಾ ಕೆಟ್ಟ ಕಣ್ಣು ಬೀಳಬಾರದು ಎಂಬ ನಂಬಿಕೆಯಿಂದ ಹಾಕಲಾಗುತ್ತದೆ. ಇದು ಸೌಂದರ್ಯದ ಸಂಕೇತವೂ ಹೌದು. ಗ್ರಾಮೀಣ ಮಹಿಳೆಯರು ಮತ್ತು ಬುಡಕಟ್ಟು ನಿವಾಸಿಗಳಿಗೆ ಇದು ತಮ್ಮ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ಯಾವುದೇ ಅಪರಾಧದ ನಂಟಿಲ್ಲ, ಬದಲಿಗೆ ಇದು ನಂಬಿಕೆ ಮತ್ತು ಸಂಸ್ಕೃತಿಯ ಗುರುತಾಗಿದೆ.
https://x.com/i/status/2074003652302545359
https://x.com/_priya9/status/2074003652302545359
Snake venom ಚಪ್ಪಲಿಯನ್ನೇ ಕಚ್ಚಿ ವಿಷ ಕಾರಿದ ಹಾವು! ವಿಡಿಯೋ ನೋಡಿ ಗಾಬರಿಯಾಗಬೇಡಿ…