Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Holiday ರಾಜ್ಯದಲ್ಲಿ ಧಾರಾಕಾರ ಮಳೆ: ಇಂದು ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ
ಕರ್ನಾಟಕಪ್ರಮುಖ

Holiday ರಾಜ್ಯದಲ್ಲಿ ಧಾರಾಕಾರ ಮಳೆ: ಇಂದು ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ

Share
1 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕರಾವಳಿ,‌ ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ.

ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ.

ಮಳೆಯಿಂದ ರಾಜ್ಯದ ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೊಯಿಡಾ, ದಾಂಡೇಲಿ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಮಂಗಳವಾರ (ಜು.7) ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರಿನ ಕಳಸ ಸುತ್ತಮುತ್ತಲಿನ ಶಾಲೆಗಳಿಗೂ ರಜೆ ನೀಡಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಹಾಗೂ ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ಮಂಗಳವಾರ (ಜುಲೈ 7) ರಜೆ ಘೋಷಿಸಲಾಗಿದೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಹಾಗೆಯೇ ಪಿಯುಸಿ (12ನೇ ತರಗತಿ)ವರೆಗಿನ ಎಲ್ಲಾ ಕಾಲೇಜುಗಳಿಗೆ ರಜೆ ಅನ್ವಯವಾಗಲಿದೆ.

ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆಯ ಪರಿಣಾಮವಾಗಿ ಹಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕೆಲವು ಕಡೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ. 9ಕ್ಕೂ ಹೆಚ್ಚು ಸೇತುವೆಗಳು ಮುಳುಗಿದ್ದು, ಹಲವೆಡೆ ರಸ್ತೆ ಸಂಪರ್ಕ ಬಂದ್ ಆಗಿದೆ.
ಪಾಲಕರು ಹಾಗೂ ಸಾರ್ವಜನಿಕರು ಅನಗತ್ಯವಾಗಿ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳದಂತೆ ಹಾಗೂ ಹವಾಮಾನ ಇಲಾಖೆ ಮತ್ತು ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

Mi Vida Loca ಮೂರು ಚುಕ್ಕೆಯ ಹಚ್ಚೆ… ಯಾಕೆ ಈ ಪರಿ‌ ಭಯ ಬೀಳಿಸೋ ಚರ್ಚೆ? ಇದೇ ಈಗ ವೈರಲ್ ಮ್ಯಾಟರ್!

HOROSCOPE ಜುಲೈನಲ್ಲಿ ಈ ರಾಶಿಯವರಿಗೆ ಭಾರೀ ಆರ್ಥಿಕ ಒತ್ತಡ, ವಿಪರೀತ ಕೋಪ: ಈ ಸಮಸ್ಯೆಗಳಿಂದ ಪಾರಾಗಲು ಹೀಗೆ ಮಾಡಿ

TAGGED:Heavy rain in the state: Holiday for schools and colleges in these districts today
Share This Article
Facebook Twitter Copy Link Print
Previous Article HOROSCOPE ಜುಲೈನಲ್ಲಿ ಈ ರಾಶಿಯವರಿಗೆ ಭಾರೀ ಆರ್ಥಿಕ ಒತ್ತಡ, ವಿಪರೀತ ಕೋಪ: ಈ ಸಮಸ್ಯೆಗಳಿಂದ ಪಾರಾಗಲು ಹೀಗೆ ಮಾಡಿ

Popular Posts

Holiday ರಾಜ್ಯದಲ್ಲಿ ಧಾರಾಕಾರ ಮಳೆ: ಇಂದು ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ

1 Min Read

HOROSCOPE ಜುಲೈನಲ್ಲಿ ಈ ರಾಶಿಯವರಿಗೆ ಭಾರೀ ಆರ್ಥಿಕ ಒತ್ತಡ, ವಿಪರೀತ ಕೋಪ: ಈ ಸಮಸ್ಯೆಗಳಿಂದ ಪಾರಾಗಲು ಹೀಗೆ ಮಾಡಿ

2 Min Read

Mi Vida Loca ಮೂರು ಚುಕ್ಕೆಯ ಹಚ್ಚೆ… ಯಾಕೆ ಈ ಪರಿ‌ ಭಯ ಬೀಳಿಸೋ ಚರ್ಚೆ? ಇದೇ ಈಗ ವೈರಲ್ ಮ್ಯಾಟರ್!

2 Min Read

Snake venom ಚಪ್ಪಲಿಯನ್ನೇ ಕಚ್ಚಿ ವಿಷ ಕಾರಿದ ಹಾವು! ವಿಡಿಯೋ ನೋಡಿ ಗಾಬರಿಯಾಗಬೇಡಿ…

1 Min Read

You Might Also Like

ಕರ್ನಾಟಕಪ್ರಮುಖ

Rapido ಬೈಕ್ ಸವಾರನ ವೇಗದ ಚಾಲನೆ: ಈ ಯುವತಿಗೆ 20 ದಿನಗಳಿಂದ ಆಸ್ಪತ್ರೆಯಲ್ಲಿ ಯಾತನೆ

1 Min Read
ಕರ್ನಾಟಕದೇಶಪ್ರಮುಖ

Ancient ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ

2 Min Read
ಕರ್ನಾಟಕದೇಶಪ್ರಮುಖ

Tirupati 116ರ ಅಜ್ಜಿಗೆ ರಾಷ್ಟ್ರಪತಿ ಮಾದರಿಯ ‘ವಿಶೇಷ ವಿಐಪಿ ಬ್ರೇಕ್ ದರ್ಶನ’ ನೀಡಿದ ಟಿಟಿಡಿ

3 Min Read
ಕರ್ನಾಟಕದೇಶಪ್ರಮುಖ

Egg & Chicken Price Hike ಮಾಂಸ ಪ್ರಿಯರಿಗೆ ಶಾಕ್ : ಚಿಕನ್ ಮೊಟ್ಟೆ ಬೆಲೆಯಲ್ಲಿ ಏರಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?